ನವ ದೆಹಲಿ – ಛತ್ತೀಸಗಢ ರಾಜ್ಯದ ದಂತೆವಾಡಾ ಜಿಲ್ಲೆಯ ಕಾಡಿನಲ್ಲಿ ಅಕ್ಟೋಬರ್ 4 ರಂದು ಮಧ್ಯಾಹ್ನ ಮಾವೋವಾದಿಗಳ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು 36 ಮಾವೋವಾದಿಗಳನ್ನು ಹೊಡೆದುರುಳಿಸಲು ಯಶಸ್ವಿಯಾಗಿವೆ. ಹತ್ಯೆಯಾದವರ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯೂ ಇದೆ. ಜಿಲ್ಲಾ ಮೀಸಲು ಪಡೆ ಮತ್ತು ವಿಶೇಷ ಕ್ರಿಯಾ ಪಡೆಯೊಂದಿಗೆ ಈ ಸಂಯುಕ್ತ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ‘AK’ ಶಸ್ತ್ರಾಸ್ತ್ರಗಳನ್ನು ಒಳಗೊಂಡಂತೆ ಹಲವಾರು ಬಂದೂಕುಗಳು ಮತ್ತು ಇತರ ಆಯುಧಗಳನ್ನು ವಶಪಡಿಸಿಕೊಳ್ಳಲಾಯಿತು. ಗುಪ್ತಚರ ಸಂಸ್ಥೆಗಳಿಂದ ಮಾವೋವಾದಿಗಳ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದ ನಂತರ ಈ ಕಾರ್ಯಾಚರಣೆ ನಡೆಯಿತು.
Major Anti-Naxal Operation in #Chhattisgarh
More than 30 Maoists killed in an Encounter with security forces! – The death toll likely to rise further.
📍Dantewada, Chhattisgarh
The joint operation was conducted by the District Reserve Guard and Special Task Force after… pic.twitter.com/VqKptAm8lo
— Sanatan Prabhat (@SanatanPrabhat) October 4, 2024