ಜಗತ್ತಿನ ಎಲ್ಲ ಮುಸಲ್ಮಾನರು ಅವರ ಶತ್ರುವಿನ ವಿರುದ್ಧ ಒಂದಾಗಬೇಕು ! – ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಾಮೇನಿ

ಟೆಹರಾನ (ಇರಾನ್) – ಇಸ್ರೈಲ್ ದಾಳಿಯಲ್ಲಿ ಹತ್ಯೆಯಾದ ಹಿಜಬುಲ್ಲಾ ಮುಖ್ಯಸ್ಥ ನಸರುಲ್ಲಾನ ನೆನಪಿಗಾಗಿ ಇಲ್ಲಿನ ಗ್ಯ್ರಾಂಡ್ ಮಸೀದಿಯಲ್ಲಿ ಪ್ರಾರ್ಥನಾ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಾಮೇನಿ ಇವರು ಉಪಸ್ಥಿತರಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದರು. ಅವರು ಜಗತ್ತಿನ ಮುಸಲ್ಮಾನರಿಗೆ ಶತ್ರುಗಳ ವಿರುದ್ಧ ಸಂಘಟಿತರಾಗಲು ಕರೆ ನೀಡಿದರು. ಈ ಭಾಷಣದ ಸಮಯದಲ್ಲಿ ಖಾಮೇನಿಯವರ ಪಕ್ಕದಲ್ಲಿ ರೈಫಲ್ ಇಡಲಾಗಿತ್ತು. ನಸರುಲ್ಲಾನ ಹತ್ಯೆಯ ನಂತರ ಖಾಮೆನಿಯವರನ್ನು ರಹಸ್ಯ ಸ್ಥಳಕ್ಕೆ ಒಯ್ಯಲಾಗಿತ್ತು. ಅದರ ನಂತರ, ಅವರು ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಖಾಮೆನಿ ಈ ಹಿಂದೆ 2019ರಲ್ಲಿ ಇರಾನ ರೆವಲ್ಯೂಷನರಿ ಗಾರ್ಡ್ಸ ಕಮಾಂಡರ ಕಾಸಿಮ ಸುಲೆಮಾನಿ ಇವರ ಮರಣದ ಬಳಿಕ ಶುಕ್ರವಾರದ ಪ್ರಾರ್ಥನೆಯ ನಾಯಕತ್ವವನ್ನು ವಹಿಸಿದ್ದರು.

(ಸೌಜನ್ಯ – AAj Tak)

ಖಾಮೆನಿ ಮಾತನಾಡಿ, ನಮ್ಮ ಶತ್ರು ಒಬ್ಬರೇ ಆಗಿದ್ದಾರೆ. ಮುಸಲ್ಮಾನರಲ್ಲಿ ದ್ವೇಷ ನಿರ್ಮಾಣ ಮಾಡಲಾಗುತ್ತಿದೆ. ಅದು (ಇಸ್ರೈಲ್) ಪ್ಯಾಲೆಸ್ಟೈನ್, ಲೆಬನಾನ, ಈಜಿಪ್ತ, ಸಿರಿಯಾ, ಯೆಮೆನ ಮತ್ತು ಇರಾಕ ಇವುಗಳ ಶತ್ರುವಾಗಿದ್ದಾರೆ. ಇದರಿಂದ ನಮ್ಮ ಶತ್ರು ಒಬ್ಬರೇ ಆಗಿದ್ದಾರೆ. ಅಲಿ ಖಾಮೆನಿಯದ ಭಾಷಣದ ಬಳಿಕ ತಕ್ಷಣವೇ ಲೆಬನಾನ್‌ನಿಂದ ಇಸ್ರೈಲ್ ಮೇಲೆ ರಾಕೆಟ್‌ಗಳನ್ನು ಹಾರಿಸಲಾಯಿತು.

ಹಿಜಬುಲ್ಲಾದಿಂದ 24 ಗಂಟೆಗಳಲ್ಲಿ ಇಸ್ರೈಲ್ ಮೇಲೆ 230 ಕ್ಷಿಪಣಿ ದಾಳಿ !

ಹಿಜಬುಲ್ಲಾ ಕಳೆದ 24 ಗಂಟೆಗಳಲ್ಲಿ 230 ಕ್ಷಿಪಣಿಗಳನ್ನು ಇಸ್ರೈಲ್ ಮೇಲೆ ಹಾರಿಸಿದೆ ಎಂದು ಇಸ್ರೈಲ್ ಸೇನೆ ಹೇಳಿದೆ. ಇದರಲ್ಲಿ ಇಸ್ರೈಲ್ ಗೆ ಯಾವುದೇ ಹಾನಿಯಾಗಿಲ್ಲವೆಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಪ್ರಪಂಚದಾದ್ಯಂತ ಮುಸ್ಲಿಮರು ‘ಇಸ್ಲಾಂ ಅಪಾಯದಲ್ಲಿದೆ’ ಎಂದು ಹೇಳಿದಾಗ ಒಗ್ಗೂಡಿ ಇಂತಹ ಪ್ರತಿಕಾರ ಮಾಡುತ್ತಾರೆ. ಹಿಂದೂಗಳು ಇದರಿಂದ ಏನಾದರೂ ಪಾಠ ಕಲಿಯುತ್ತಾರೆಯೇ ?