ಸರಕಾರಿ ಭೂಮಿಯ ಮೇಲೆ ಯಾವುದೇ ಧರ್ಮದ ಅಕ್ರಮ ಕಟ್ಟಡ ಇದ್ದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ ! – ಸರ್ವೋಚ್ಚ ನ್ಯಾಯಾಲಯ

ನವದೆಹಲಿ – ಯಾರಾದರೂ ಆರೋಪಿ ಅಥವಾ ತಪ್ಪಿತಸ್ಥರಾಗಿದ್ದಾರೆಂದು ಅವನ ಆಸ್ತಿಯನ್ನು ಕೆಡವಲು ಸಾಧ್ಯವಿಲ್ಲ; ಆದರೆ ಸಾರ್ವಜನಿಕ ರಸ್ತೆ ಮತ್ತು ಸರಕಾರಿ ಭೂಮಿಯ ಮೇಲಿನ ಯಾವುದೇ ಅಕ್ರಮ ಕಟ್ಟಡಕ್ಕೆ ರಕ್ಷಣೆ ನೀಡಲಾಗುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ. `ಭಾರತವು ಜಾತ್ಯತೀತ ದೇಶವಾಗಿದ್ದು, ಅತಿಕ್ರಮಣದ ವಿರುದ್ಧ ಬುಲ್ಡೋಜರ ಕಾರ್ಯಾಚರಣೆಯು ಎಲ್ಲರಿಗೆ ಅಂದರೆ ಯಾವುದೇ ಧರ್ಮದವರಾಗಿರಲಿ ಸಮಾನವಾಗಿರಲಿದೆ.’ ಎಂದು ನ್ಯಾಯಾಲಯ ಆದೇಶ ನೀಡಿದೆ. ಅನೇಕ ರಾಜ್ಯಗಳಲ್ಲಿ ಅಪರಾಧಿ, ಆರೋಪಿ ಮತ್ತು ಇತರರ ಆಸ್ತಿ ಕೆಡವುತ್ತಿರುವ ಆರೋಪಿಸುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ಕೈಗೆತ್ತಿಕೊಂಡಿದೆ.

ಸರ್ವೋಚ್ಚ ನ್ಯಾಯಾಲಯವು ಸೆಪ್ಟೆಂಬರ್ 17 ರಂದು ನೀಡಿರುವ ಆದೇಶದಲ್ಲಿ ಅಕ್ರಮ ನಿರ್ಮಾಣಗಳ ಮೇಲೆ ಬುಲ್ಡೋಜರ್ ಉಪಯೋಗಿಸಲು ನಿರ್ಬಂಧ ಹೇರಿತ್ತು. ನ್ಯಾಯಾಲಯವು ಅಕ್ಟೋಬರ್ 1 ರವರೆಗೆ ಸರ್ವೋಚ್ಚ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಯಾವುದೇ ಆಸ್ತಿಯನ್ನು ಬೀಳಿಸಬಾರದು ಎಂದು ಹೇಳಿದೆ.