Tirupati Laddu Row Supreme Court : ಕನಿಷ್ಠ ದೇವರನ್ನಾದರೂ ರಾಜಕಾರಣದಿಂದ ದೂರವಿಡಿ ! – ಸರ್ವೋಚ್ಚ ನ್ಯಾಯಾಲಯ

  • ತಿರುಪತಿ ಲಡ್ಡು ಪ್ರಕರಣ
  • ಸಮೀಕ್ಷೆ ನಡೆಯುತ್ತಿರುವಾಗ ಮುಖ್ಯಮಂತ್ರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಕ್ಕೆ ಸರ್ವೋಚ್ಚ ನ್ಯಾಯಾಲಯದಿಂದ ಟೀಕೆ

ನವದೆಹಲಿ – ತಿರುಪತಿ ಬಾಲಾಜಿ ದೇವಸ್ಥಾನದ ಲಡ್ಡುವಿನ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಇರುವ ತುಪ್ಪ ಬಳಕೆ ಆಗಿರುವ ಪ್ರಕರಣದ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಾಲ್ಕು ಅರ್ಜಿಗಳು ದಾಖಲಾಗಿವೆ. ನ್ಯಾಯಾಲಯದ ಉಸ್ತುವಾರಿಯಲ್ಲಿ ಲಡ್ಡುವಿನ ವಿಚಾರಣೆ ನಡೆಸಲು ಅರ್ಜಿಯಲ್ಲಿ ಆಗ್ರಹಿಸಲಾಗಿದೆ. ಭಾಜಪದ ನಾಯಕ ಡಾ.ಸುಬ್ರಹ್ಮಣ್ಯಮ್ ಸ್ವಾಮಿ ಅವರ ವತಿಯಿಂದ ಹಿರಿಯ ನ್ಯಾಯವಾದಿ ರಾಜಶೇಖರ ರಾವ ಅವರು ತಮ್ಮ ವಾದ ಮಂಡಿಸಿದ್ದು, ನಾನು ಓರ್ವ ಭಕ್ತನಾಗಿ ನ್ಯಾಯಾಲಯದಲ್ಲಿ ಉಪಸ್ಥಿತನಾಗಿದ್ದೇನೆ. ಪ್ರಸಾದದಲ್ಲಿ ಕಲಬೇರಕೆಯ ಕುರಿತು ಮಾಧ್ಯಮಗಳು ನೀಡಿರುವ ವರದಿಯಿಂದ ಬಹಳ ದುಷ್ಪರಿಣಾಮವಾಗಬಹುದು. ಇದರಿಂದ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ ಮತ್ತು ಧಾರ್ಮಿಕ ಸೌಹಾರ್ದತೆಯನ್ನು ಹದಗೆಡಿಸಬಹುದಾದಂತಹ ಆತಂಕದ ವಿಷಯವಾಗಿದೆ. ದೇವರ ಪ್ರಸಾದದ ಬಗ್ಗೆ ಕೆಲವು ಪ್ರಶ್ನೆ ಚಿನ್ಹೆಗಳಿರಬಹುದು, ಆದರೆ ಅದರ ವಿಚಾರಣೆ ನಡೆಯಬೇಕು ಎಂದು ಅವರು ಆಗ್ರಹಿಸಿದರು. ಈ ಬಗ್ಗೆ ನ್ಯಾಯಾಲಯವು ಪ್ರತಿಕ್ರಿಯಿಸಿ, ಸ್ವತಃ ಮುಖ್ಯಮಂತ್ರಿಗಳೇ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಇರುವ ವಿಷಯದ ತನಿಖೆಯನ್ನು ವಿಶೇಷ ಸಮೀಕ್ಷಾ ತಂಡಕ್ಕೆ ನೀಡಿದ್ದರು, ಹೀಗಿರುವಾಗ ಅದರ ವರದಿ ಬರುವ ಮೊದಲೇ ಮಾಧ್ಯಮಗಳ ಮುಂದೆ ವಿವರಣೆ ನೀಡುವ ಅವಶ್ಯಕತೆ ಏನಿತ್ತು? ಕನಿಷ್ಠ ದೇವರನ್ನಾದರು ರಾಜಕಾರಣದಿಂದ ದೂರವಿಡಿ ಎಂದು ನ್ಯಾಯಾಲಯ ಟೀಕಿಸಿತು. ಈ ಪ್ರಕ್ರಣಕ್ಕೆ ಸಂಬಂಧಿಸಿ ಡಾ. ಸುಬ್ರಹ್ಮಣ್ಯಮ್ ಸ್ವಾಮಿ, ವೈ.ವಿ. ಸುಬ್ಬಾ ರೆಡ್ಡಿ, ವಿಕ್ರಮ ಸಂಪತ ಮತ್ತು ದೃಶ್ಯಂತ ಶ್ರೀಧರ ಅವರು ಅರ್ಜಿಗಳನ್ನು ಸಲ್ಲಿಸಿದ್ದಾರೆ.