ತೆಲಂಗಾಣ: ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ.ರಾಜ ಸಿಂಹ ಅವರ ಮನೆಯ ಗೌಪ್ಯ ಮಾಹಿತಿ ಸಂಗ್ರಹಿಸಿದ ಇಬ್ಬರು ಮುಸಲ್ಮಾನರ ಬಂಧನ

ಆರೋಪಿಗಳು ಮನೆಯ ಛಾಯಾಚಿತ್ರ ಮತ್ತು ವಿಡಿಯೋ ಅನ್ನು ಮುಂಬಯಿಯ ವ್ಯಕ್ತಿಗೆ ಕಳುಹಿಸಿದ್ದರು

ಭಾಗ್ಯನಗರ (ತೆಲಂಗಾಣ) – ಗೋಷಾಮಹಲ್ ವಿಧಾನಸಭಾ ಕ್ಷೇತ್ರದ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜ ಸಿಂಹ ಅವರ ಮನೆಯ ಗೌಪ್ಯ ಮಾಹಿತಿ ಸಂಗ್ರಹಿಸಿದ ಘಟನೆ ಬೆಳಕಿಗೆ ಬಂದಿದೆ. ನಾಲ್ವರು ಶಂಕಿತರು ಸಪ್ಟೆಂಬರ್ ೨೭ರ ತಡರಾತ್ರಿ ಈ ಮಾಹಿತಿ ಸಂಗ್ರಹಿಸಿದ್ದಾರೆ. ಸ್ಥಳೀಯರು ಈ ರೀತಿ ಮಾಹಿತಿ ಸಂಗ್ರಹಿಸುತ್ತಿದ್ದ ಇಬ್ಬರು ಮುಸಲ್ಮಾನರನ್ನು ಎರಡು ದಿನಗಳ ಹಿಂದೆ ಹಿಡಿದಿದ್ದರು ಹಾಗೂ ಉಳಿದ ಇಬ್ಬರು ಪರಾರಿಯಾಗಿದ್ದಾರೆ. ಮಹಮ್ಮದ್ ಖಾಜಾ ಮತ್ತು ಶೇಖ್ ಇಸ್ಮಾಯಿಲ್ ಎಂಬ ಇಬ್ಬರು ಶಂಕಿತರನ್ನು ಪೊಲೀಸರು ಸದ್ಯ ಬಂಧಿಸಿದ್ದಾರೆ.

ಈ ಶಂಕಿತರು ಶಾಸಕ ಟಿ. ರಾಜಸಿಂಹ ಅವರ ಮನೆಯ ಛಾಯಾಚಿತ್ರ ಮತ್ತು ವಿಡಿಯೋ ತೆಗೆದು ಮುಂಬಯಿಯಲ್ಲಿನ ವ್ಯಕ್ತಿಯೊಬ್ಬನಿಗೆ ಕಳುಹಿಸಿದ್ದರು. ಇವರ ಮೊಬೈಲ್ ನಲ್ಲಿ ಟಿ.ರಾಜಸಿಂಹ ಅವರ ಛಾಯಾಚಿತ್ರಗಳು ದೊರೆತಿವೆ.

೧. ಮಾಧ್ಯಮವೊಂದಕ್ಕೆ ನೀಡಿರುವ ವಿಡಿಯೋ ಸಂದೇಶದಲ್ಲಿ ಶಾಸಕ ಟಿ.ರಾಜ ಸಿಂಹ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರು ಶಂಕಿತ ಇಬ್ಬರ ವಿಚಾರಣೆ ನಡೆಸುತ್ತಿದ್ದಾರೆ. ಸಪ್ಟೆಂಬರ್ ೨೭ರ ತಡರಾತ್ರಿ ೧.೩೦ ರಿಂದ ೨ ಗಂಟೆಯ ಸುಮಾರಿಗೆ ನಾಲ್ವರು ಶಂಕಿತರು ನಮ್ಮ ಮನೆಯ ಸುತ್ತ ತಿರುಗಾಡುತ್ತಿರುವುದು ಗಮನಕ್ಕೆ ಬಂತು. ಕೆಲವು ಸ್ಥಳೀಯ ಯುವಕರಿಗೆ ಈ ಬಗ್ಗೆ ಅನುಮಾನ ಬಂದಾಗ ಅವರು ಈ ನಾಲ್ವರನ್ನು ಹಿಡಿಯುವ ಪ್ರಯತ್ನ ಮಾಡಿದರು. ಅವರು ಓಡಿ ಹೋಗಲು ಪ್ರಯತ್ನಿಸಿದಾಗ ಇಬ್ಬರನ್ನು ಹಿಡಿಯಲಾಯಿತು ಮತ್ತು ಉಳಿದ ಇಬ್ಬರು ಪರಾರಿಯಾಗುವಲ್ಲಿ ಸಫಲರಾದರು. ಬಂಧಿಸಲಾಗಿರುವ ಇಬ್ಬರೂ ಮುಸಲ್ಮಾನರ ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ನನ್ನ ಮತ್ತು ನನ್ನ ಮನೆಯ ಛಾಯಾಚಿತ್ರಗಳು ಮತ್ತು ವಿಡಿಯೋಗಳು ಪತ್ತೆಯಾಗಿವೆ ಎಂದರು.

೨. ವಿಡಿಯೋ ಮತ್ತು ಛಾಯಾ ಚಿತ್ರಗಳು ವಾಟ್ಸಾಪ್ ಮೂಲಕ ಮುಂಬಯಿಯಲ್ಲಿನ ವ್ಯಕ್ತಿಯೊಬ್ಬನಿಗೆ ಕಳುಹಿಸಲಾಗಿದೆ ಎಂದು ರಾಜ ಸಿಂಹ ಅವರು ಆರೋಪಿಸಿದ್ದಾರೆ. ಪಿಸ್ತೂಲು ಮತ್ತು ತಳ್ಳುವಗಾಡಿಯ ಚಿತ್ರ ಕೂಡ ಮೊಬೈಲ್ ನಲ್ಲಿ ಸಿಕ್ಕಿದೆ.

೩. ಮಹಮ್ಮದ್ ಖಾಜಾ (ವಯಸ್ಸು ೨೪ ವರ್ಷ) ಎಂಬವನು ಮೂಲತಃ ಕರ್ನಾಟಕದ ಬೀದರ ಜಿಲ್ಲೆಯ ನಿವಾಸಿ ಆಗಿದ್ದಾನೆ. ೧೫ ವರ್ಷಗಳ ಹಿಂದೆ ಅವನು ಕೆಲಸದ ಹುಡುಕಾಟದಲ್ಲಿ ಭಾಗ್ಯನಗರಕ್ಕೆ ಬಂದಿದ್ದನು. ಅವನು ಭಾಗ್ಯನಗರದಲ್ಲಿನ ಅಲ್ಲಾಪುರ ಬೋರಾಬಂಡ ಪ್ರದೇಶದಲ್ಲಿ ವಾಸಿಸುತ್ತಾನೆ. ಅವನ ತಂದೆಯ ಹೆಸರು ನಬಿ ಸಾಬ ಎಂದಾಗಿದೆ.

ಶೇಖ್ ಇಸ್ಮಾಯಿಲ್ ( ವಯಸ್ಸು ೩೦ ವರ್ಷ ) ಎಂಬವನು ಭಾಗ್ಯನಗರದಲ್ಲಿನ ಅಲ್ಲಾಪುರ ಬೋರಾಬಂಡ ಪ್ರದೇಶದಲ್ಲಿ ವಾಸಿಸುತ್ತಾನೆ. ಶೇಖ್ ಇಸ್ಮಾಯಿಲ್ ನ ತಂದೆಯ ಹೆಸರು ಚಾಂದ ಪಾಶ. ಶೇಖ್ ಇಸ್ಮಾಯಿಲ್ ಭಾಗ್ಯನಗರದಲ್ಲಿ ಡ್ರೈವರ್ ಕೆಲಸ ಮಾಡುತ್ತಾನೆ.

೪. ಈ ಘಟನೆಯ ಮಾಹಿತಿಯನ್ನು ಕೂಡಲೇ ಮಂಗಲಹಟ್ ಪೊಲೀಸ್ ಠಾಣೆಗೆ ನೀಡಲಾಯಿತು. ಪೊಲೀಸರು ಘಟನಾ ಸ್ಥಳದಿಂದ ಇಬ್ಬರು ಮುಸಲ್ಮಾನರನ್ನು ವಶಕ್ಕೆ ಪಡೆದಿದ್ದಾರೆ.

೫. ಸಪ್ಟೆಂಬರ್ ೨೯ ರಂದು ಬಂಧಿತರಾದ ಶಂಕಿತರ ಕುರಿತು ಪೊಲೀಸರ ಜೊತೆಗೆ ರಾಜ ಸಿಂಹ ಅವರು ಚರ್ಚಿಸಿದಾಗ, ಉನ್ನತ ಮಟ್ಟದ ತನಿಖಾ ತಂಡದಿಂದ ಅವರಿಬ್ಬರ ವಿಚಾರಣೆ ನಡೆಯುತ್ತಿದೆ. ಅಲ್ಲದೇ ಗುಪ್ತಚರ ಇಲಾಖೆಯಿಂದ ಕೂಡ ಅವರ ವಿಚಾರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.

೬.೨೦೧೦ ಮತ್ತು ೨೦೧೧ರಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ಭಯೋತ್ಪಾದಕರು ನಮ್ಮ ಮನೆಯ ಮಾಹಿತಿ ಕಲೆಹಾಕಿದ್ದರು ಎಂದು ರಾಜ ಸಿಂಹ ತಿಳಿಸಿದರು.

ಸಂಪಾದಕೀಯ ನಿಲುವು

  • ಜಿಹಾದಿ ಮಾನಸಿಕತೆ ಇರುವವರಿಗೆ ಸರಕಾರ, ಪೊಲೀಸರು ಮತ್ತು ಕಾನೂನಿನ ಸ್ವಲ್ಪವೂ ಭಯವಿಲ್ಲ ಎಂಬುದು ಇದರಿಂದ ತಿಳಿದುಬರುತ್ತದೆ. ತೆಲಂಗಾಣ ಸರಕಾರಕ್ಕೆ ಇದು ನಾಚಿಕೆಗೇಡಿನ ವಿಷಯ!
  • ಭಾರತದಲ್ಲಿ ಅಲ್ಪಸಂಖ್ಯಾತರು ಅಸಿರಕ್ಷಿತರಾಗಿದ್ದಾರೆ ಎಂದು ಕೂಗಾಡುವ ಇಸ್ಲಾಮಿ ದೇಶಗಳು ಹಾಗೂ ಅಮೇರಿಕಾ ಈ ಘಟನೆಯ ಬಗ್ಗೆ ಏನು ಹೇಳುವರು?
  • ಸಮಸ್ತ ಹಿಂದೂಗಳಿಗಾಗಿ ಹೋರಾಡುವ ಎಲ್ಲಾ ಹಿಂದುತ್ವನಿಷ್ಠ ನಾಯಕರನ್ನು ಬೆಂಬಲಿಸುವುದು ಹಿಂದುಗಳ ಧರ್ಮ ಕರ್ತವ್ಯವಾಗಿದೆ. ಹಿಂದುತ್ವನಿಷ್ಠರ ಕಡೆಗೆ ಯಾರೂ ಕೆಟ್ಟ ದೃಷ್ಟಿ ಬೀರುವ ಧೈರ್ಯ ಮಾಡಬಾರದು ಎಂಬ ವರ್ಚಸ್ಸನ್ನು ಹಿಂದೂಗಳು ನಿರ್ಮಾಣ ಮಾಡಬೇಕು.