ಅನ್ಯಾಯ ಬಂಧನದ ಭೀತಿಯಿಂದ ನಾಗಮಂಗಲದ ನೂರಾರು ಅಮಾಯಕ ಹಿಂದೂ ಯುವಕರು ಗ್ರಾಮ ತೊರೆದರು !

  • ನಾಗಮಂಗಲ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಮೇಲೆ ಮುಸ್ಲಿಮರಿಂದ ದಾಳಿ ಪ್ರಕರಣ

  •  ‘ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡುವ ಹಿಂದೂಗಳನ್ನೇ ಗುರಿ ಮಾಡಲಾಗುತ್ತಿದೆ’; ಗ್ರಾಮಸ್ಥರ ಅಳಲು !

ಮಂಡ್ಯ – ನಾಗಮಂಗಲದಲ್ಲಿ ಸೆಪ್ಟೆಂಬರ್ 11ರಂದು ರಾತ್ರಿ ಹಿಂದೂಗಳ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಮೇಲೆ ಮತಾಂಧ ಮುಸ್ಲಿಮರು ದಾಳಿ ನಡೆಸಿದ್ದರು. ಈ ವೇಳೆ ಕನಿಷ್ಠ 50 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಲಭೆಕೋರ ಮುಸ್ಲಿಮರೊಂದಿಗೆ 23 ಹಿಂದೂ ಯುವಕರನ್ನು ಸಹ ಬಂಧಿಸಲಾಗಿದೆ. ಹಿಂದೂಗಳು ಯಾವುದೇ ಅಪರಾಧ ಮಾಡದಿರುವಾಗ ಅವರ ವಿರುದ್ಧ ಅಪರಾಧಗಳನ್ನು ದಾಖಲಿಸಿ ಬಂಧಿಸಲಾಗುತ್ತಿದೆ. ಇದರಿಂದಾಗಿ ನಾಗಮಂಗಲ ಗ್ರಾಮದ ನೂರಾರು ಹಿಂದೂ ಯುವಕರು ಗ್ರಾಮ ತೊರೆದಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಸ್ಥಾಪಿತವಾದ ಶ್ರೀ ಗಣೇಶ ಮೂರ್ತಿಯನ್ನು ಪೂಜಿಸಲು ಯಾರೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಈ ಯುವಕರ ವೃದ್ಧ ಪಾಲಕರು ಮಾತ್ರ ಗ್ರಾಮದಲ್ಲಿ ಉಳಿದಿದ್ದಾರೆ. ‘ಪೊಲೀಸರ ಭಯದಿಂದ ನಮ್ಮ ಮಕ್ಕಳು ಊರು ತೊರೆದಿದ್ದಾರೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಅಮಾಯಕರನ್ನು ಬಂಧಿಸಿದರೆ ಬೃಹತ್ ಪ್ರತಿಭಟನೆ ಮಾಡುತ್ತೇವೆ ! – ಭಾಜಪ

250ಕ್ಕೂ ಹೆಚ್ಚು ಅಮಾಯಕ ಹಿಂದೂ ಯುವಕರನ್ನು ಬಂಧಿಸಲು ಪೊಲೀಸರು ಸಂಚು ರೂಪಿಸಿದ್ದಾರೆ. ಒಂದುವೇಳೆ ಅಮಾಯಕರನ್ನು ಬಂಧಿಸಿದರೆ ಬೃಹತ್ ಪ್ರತಿಭಟನೆ ಮಾಡುವೆವು ಎಂದು ಭಾಜಪದ ಮಂಡ್ಯ ಜಿಲ್ಲಾಧ್ಯಕ್ಷ ಡಾ. ಎನ್.ಎಸ್. ಇಂದ್ರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಪಾದಕೀಯ ನಿಲುವು

ಇದು ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಪೊಲೀಸರ ಹಿಂದೂ ದ್ವೇಷ!