ನಾಲ್ವರು ಉಗ್ರರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದ ಹೈಕೋರ್ಟ್

ನರೇಂದ್ರ ಮೋದಿಯವರ ಸಭೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ

ಪಾಟಲೀಪುತ್ರ (ಬಿಹಾರ) – ಅಕ್ಟೋಬರ್ 27, 2013 ರಂದು ಪಾಟಲೀಪುತ್ರದ ಗಾಂಧಿ ಮೈದಾನದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿರುವ ನಾಲ್ವರು ಭಯೋತ್ಪಾದಕರ ಮರಣದಂಡನೆ ಶಿಕ್ಷೆಯನ್ನು ಪಾಟ್ನಾ ಹೈಕೋರ್ಟ್ ಜೀವಾವಧಿ ಶಿಕ್ಷೆಗೆ ಬದಲಾಯಿಸಿದೆ. ಈ ಪ್ರಕರಣದಲ್ಲಿ ಸಿವಿಲ್ ನ್ಯಾಯಾಲಯ 4 ಅಪರಾಧಿಗಳಿಗೆ ಮರಣದಂಡನೆ ವಿಧಿಸಿದ್ದು, ಉಳಿದ 2 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಾಲ್ವರು ಭಯೋತ್ಪಾದಕರ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದ್ದು, ಇಬ್ಬರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿದೆ. ಹೈಕೋರ್ಟ್ ನ್ಯಾಯಮೂರ್ತಿ ಅಶುತೋಷ್ ಕುಮಾರ್ ಅವರ ವಿಭಾಗೀಯಪೀಠವು ಈ ತೀರ್ಪು ನೀಡಿದೆ.

1. ಉಗ್ರರಾದ ನುಮಾನ್ ಅನ್ಸಾರಿ, ಮೊಹಮ್ಮದ್ ಮಜಿಬುಲ್ಲಾ, ಹೈದರ್ ಅಲಿ, ಇಮ್ತಿಯಾಜ್ ಆಲಂ ಗೆ ಕೆಳ ನ್ಯಾಯಾಲಯವು ಮರಣದಂಡನೆ ವಿಧಿಸಿದ್ದು, ಅದನ್ನು ಈಗ ಹೈಕೋರ್ಟ್ ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದೆ.

2. ಕೆಳ ನ್ಯಾಯಾಲಯವು ಉಮೈರ್ ಸಿದ್ದಿಕಿ ಮತ್ತು ಅಜರುದ್ದೀನ್ ಖುರೇಷಿಗೆ ವಿಧಿಸಲಾದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿದೆ.

3. ಈ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗುವುದಾಗಿ ಉಗ್ರರ ಪಕ್ಷದ ವಕೀಲರಾದ ಇಮ್ರಾನ್ ಗನಿ ಹೇಳಿದ್ದಾರೆ.