ಹಿಂದೂ ವಿಚಾರವಂತರು ಸಂಘಟಿತರಾಗಿ ಬೌದ್ಧಿಕ ಬಲದಿಂದ ಸನಾತನ ಧರ್ಮ ಮತ್ತು ಸನಾತನ ಭಾರತದ ರಕ್ಷಣೆ ಮಾಡಬೇಕು !

೧. ಉದ್ದೇಶ

ಚರ್ಚೆ ಮತ್ತು ಸಂವಾದ ಇವು ಸನಾತನ ಧರ್ಮದ ಪ್ರಾಚೀನ ಪರಂಪರೆಯಾಗಿವೆ. ‘ವಾದೆ ವಾದೆ ಜಾಯತೆ ತತ್ತ್ವಬೋಧಃ |’, ಅಂದರೆ ‘ವಾದ ಸಂವಾದದಿಂದ ಸತ್ಯತ್ವದ ಬೋಧವನ್ನು ಪ್ರಾಪ್ತಮಾಡಿಕೊಳ್ಳುವುದು’, ಇದು ಸನಾತನ ಪರಂಪರೆಯಾಗಿತ್ತು; ಆದ್ದರಿಂದಲೆ ಭಗವಾನ ಶ್ರೀಕೃಷ್ಣ ಮತ್ತು ಅರ್ಜುನರ ಸಂವಾದದಿಂದ ಗೀತೆ ಉತ್ಪನ್ನವಾಯಿತು. ಗಾರ್ಗಿ-ಮೈತ್ರೇಯಿ ಮತ್ತು ಯಾಜ್ಞವಲ್ಕ್ಯ ಋಷಿ ಇವರ ಸಂವಾದದಿಂದ ‘ಬೃಹದಾರಣ್ಯಕ ಉಪನಿಷತ್ತು’ ಜನ್ಮ ತಾಳಿತು. ಆರ್ಯ ಚಾಣಕ್ಯ ಮತ್ತು ಚಂದ್ರಗುಪ್ತ ಮೌರ್ಯ ಇವರ ರಾಜನೈತಿಕ ಸಂವಾದದಿಂದ ‘ಕೌಟಿಲ್ಯಮ್‌ ಅರ್ಥಶಾಸ್ತ್ರಮ್’ ನಿರ್ಮಾಣವಾಯಿತು. ಸನಾತನ ಭಾರತದಲ್ಲಿ ಯಾವಾಗಲೂ ಪ್ರಬುದ್ಧರು ಅಂದರೆ ಜ್ಞಾನಿಗಳು ಅಥವಾ ವಿದ್ವಾಂಸರು ಚರ್ಚೆ ಮಾಡುವುದು, ಇದು ಸಮಾಜ, ರಾಷ್ಟ್ರ ಹಾಗೂ ಧರ್ಮದ ಹಿತದ್ದೆಂದು ಪರಿಗಣಿಸಲಾಗಿತ್ತು.

ಆದರೆ ಇಂದು ದುರ್ಭಾಗ್ಯದಿಂದ ‘ಮಿಡಿಯಾ’ (ಪ್ರಸಿದ್ಧಿ ಮಾಧ್ಯಮಗಳು), ‘ಸೋಶಿಯಲ್‌ ಮಿಡಿಯಾ’ (ಸಾಮಾಜಿಕ ಮಾಧ್ಯಮಗಳು), ಫಿಲ್ಮ್ ಮಿಡಿಯಾ’ (ಚಲನಚಿತ್ರ ಮಾಧ್ಯಮ), ಅಕಾಡೆಮಿಯಾ (ಶಿಕ್ಷಣಕ್ಷೇತ್ರ) ಅಥವಾ ‘ಲಿಟ್‌ ಫೆಸ್ಟಿವಲ್ಸ್‌’ಗಳಲ್ಲಿ ಯಾವ ‘ಸೆಕ್ಯುಲರ್‌’ವಾದದ (ನಿಧರ್ಮಿವಾದದ) ತತ್ತ್ವಗಳ ಬಗ್ಗೆ ಚರ್ಚೆ ನಡೆಯುತ್ತ್ತಿದೆ ? ಆ ‘ಅಜೆಂಡಾಗಳು (ಕಾರ್ಯಸೂಚಿ) ಬೆಸ್ಟ್ ಪ್ರಪೋಗಂಡ’ಗಳನ್ನು (ವಿಚಾರಗಳನ್ನು ನಿರ್ಧರಿಸಿ ಪ್ರಚಾರ ಮಾಡುವುದರ ಕುರಿತು) ಆಧರಿಸಿರುತ್ತವೆ. ಯಾವ ಅಜೆಂಡಾಗಳನ್ನು ಭಾರತವಿರೋಧಿ ಶಕ್ತಿಗಳು ನಿರ್ಧರಿಸಿರುತ್ತವೆ, ಅದರಿಂದ ಸತ್ಯದ ತತ್ತ್ವಬೋಧ ಹೇಗೆ ಆಗಬಹುದು ? ತದ್ವಿರುದ್ಧ ಅದರಿಂದ ಸಮಾಜ, ದೇಶ, ರಾಷ್ಟ್ರ ಹಾಗೂ ಧರ್ಮದ ಅವನತಿಯಾಗುತ್ತಿದೆ.

ಶ್ರೀ. ಚೇತನ ರಾಜಹಂಸ

೧ ಅ. ಬೌದ್ಧಿಕ ಆಕ್ರಮಣಗಳ ಸವಾಲು !

ಸದ್ಯದ ಕಾಲದಲ್ಲಿ ‘ಅಜೆಂಡಾ ಬೆಸ್ಟ್ ಪ್ರೊಪಗಾಂಡಾ’ (ವಿಚಾರಾಧಾರಿತ ಪ್ರಚಾರ) ಮಾಡುವ ವ್ಯಕ್ತಿಗಳು ಕೇವಲ ಅಭಿವ್ಯಕ್ತಿಗಳಲ್ಲ, ಅವರು ದೇಶವಿರೋಧಿ ಹಾಗೂ ಸನಾತನ ವಿರೋಧಿ ಶಕ್ತಿಗಳಾಗಿದ್ದಾರೆ, ಎಂಬುದನ್ನು ನಾವು ಮೊಟ್ಟಮೊದಲು ತಿಳಿದುಕೊಳ್ಳಬೇಕು. ಅವರು ಅಭಿವ್ಯಕ್ತಿಗಳೆಂದು ಕಾರ್ಯವನ್ನು ಮಾಡುತ್ತಿದ್ದರೂ, ಅವರು ದೇಶವಿರೋಧಿ ‘ಇಕೋಸಿಸ್ಟಮ್‌’ನ (ಪರಸ್ಪರರನ್ನು ಪೋಷಿಸುವ ವ್ಯವಸ್ಥೆಯ) ಸದಸ್ಯರಾಗಿದ್ದಾರೆ. ಈ ಇಕೋಸಿಸ್ಟಮ್‌ ನಲ್ಲಿ ‘ಸೆಕ್ಯುಲರಿಸ್ಟ್‌’ ‘ಕಮ್ಯುನಿಸ್ಟ್‌’ (ಸಾಮ್ಯವಾದಿಗಳು), ‘ಮಿಶನರಿಸ್ಟ್‌’ (ಕ್ರೈಸ್ತರು) ಹಾಗೂ ‘ಜಿಹಾದಿಸ್ಟ್‌’ ಇವರೆಲ್ಲರೂ ಇದ್ದಾರೆ.

ಕೆಲವೊಮ್ಮೆ ಬೌದ್ಧಿಕ ಆಕ್ರಮಣಗಳನ್ನು ಮಾಡುವ ಅಭಿವ್ಯಕ್ತಿ ಗಳಲ್ಲಿ ನಾಸ್ತಿಕವಾದಿಗಳು ಅಥವಾ ಸ್ತ್ರೀಸ್ವಾತಂತ್ರ್ಯವಾದಿಗಳು ಕಾಣಿಸುತ್ತಾರೆ. ಈ ಅಭಿವ್ಯಕ್ತಿಗಳು ಬೇರೆ ಬೇರೆ ಆಗಿದ್ದರೂ, ಅವರು ‘ಕಮ್ಯುನಿಸ್ಟ್ ಇಕೋಸಿಸ್ಟಮ್‌’ನ, ಅಂದರೆ ‘ಅರ್ಬನ್‌ ನಕ್ಸಲವಾದಿ ಗ್ಯಾಂಗ್‌’ನ ಸದಸ್ಯರಾಗಿರುತ್ತಾರೆ. ಇಂದು ‘ನಾಸ್ತಿಕವಾದಿಗಳು’, ‘ಸ್ತ್ರೀಸ್ವಾತಂತ್ರ್ಯವಾದಿಗಳು’, ಕಮ್ಯುನಿಸ್ಟ್‌’ ಮತ್ತು ‘ಅರ್ಬನ್‌ ನಕ್ಸಲೈಟ್’ (ನಗರ ನಕ್ಸಲವಾದಿಗಳು) ಇವು ಸಮಾನಾರ್ಥದ ಹೆಸರುಗಳಾಗಿದ್ದು ಅವರೆಲ್ಲರೂ ಒಂದೇ ಗುಂಪಿನ ಸದಸ್ಯರಾಗಿದ್ದಾರೆ, ಎಂಬುದನ್ನು ನಾವು ಗಮನದಲ್ಲಿಡಬೇಕು.

ಅ. ಈ ಜನರು ಅವಕಾಶವಾದಿಗಳಾಗಿದ್ದು ಅವರು ಕೆಲವು ನಿರ್ಧಿಷ್ಟ ವಿಷಯಗಳ ಮೇಲೆ ಚರ್ಚೆ ಮಾಡಲು ಹಿಂಜರಿಯುತ್ತಾರೆ. ಕೇರಳದ

ಶಬರಿಮಲೈ ಮಂದಿರದಲ್ಲಿ ಸ್ತ್ರೀಯರ ಪ್ರವೇಶದ ಬಗ್ಗೆ ಬಹಿರಂಗ ಚರ್ಚೆ ಮಾಡುವ ‘ಸ್ತ್ರೀಸ್ವಾತಂತ್ರ್ಯವಾದಿ’ಗಳು ಮಸೀದಿಗಳಲ್ಲಿ ಸ್ತ್ರೀಯರ ಪ್ರವೇಶ ನಿರ್ಬಂಧದ ಕುರಿತು, ‘ಲವ್‌ ಜಿಹಾದ್‌’ನ ಕುರಿತು ಅಥವಾ ಶ್ರದ್ಧಾ ವಾಲ್ಕರಳ ಶರೀರವನ್ನು ೩೫ ತುಂಡು ಮಾಡಿದ ಅಫ್ತಾಬನ ರಾಕ್ಷಸೀ ಕೃತ್ಯದ ಕುರಿತು ‘ಸಿಲೆಕ್ಟಿವ್‌ ಸೈಲೆನ್ಸ್‌’ (ವಿಶೇಷ ಮೌನ) ಆಗಿರುತ್ತಾರೆ. ಅಖಲಾಕನ ಹತ್ಯೆಯ ನಂತರ ‘ಪುರಸ್ಕಾರವಾಪಸಿ’ ಮಾಡುವ ಸಾಹಿತಿಗಳು ರಾಜಸ್ಥಾನದಲ್ಲಿನ ಬಡ ಟೇಲರ್‌ ಕನೈಯಾಲಾಲನ

‘ಸರ್‌ ತನ್‌ಸೆ ಜುದಾ’ (ಶಿರಚ್ಛೇದ) ಆದನಂತರವೂ ಸಿಲೆಕ್ಟಿವ್‌ ಮೌನ ಧಾರಣೆ ಮಾಡುತ್ತಾರೆ !

‘ಈ ಸಿಲೆಕ್ಟಿವ್‌ ಸೈಲೆನ್ಸ್‌’ನ ಬಗ್ಗೆ ನಾವು ಚರ್ಚೆ ಮಾಡಬೇಕು ಹಾಗೂ ಅವರ ವೈಚಾರಿಕ ಬುರ್ಖಾವನ್ನು ಹರಿಯಬೇಕಾಗಿದೆ.

ಆ. ಒಂದು ಸಮಯ ಹೇಗಿತ್ತೆಂದರೆ, ದೂರದರ್ಶನದಲ್ಲಿನ ನಿವೇದಕರು ಯಾವುದೇ ಒಂದು ಅಯೋಗ್ಯ ಶಬ್ದವನ್ನು ಉಪ ಯೋಗಿಸಿದರೂ ದಿನವಿಡೀ ಅದರ ಬಗ್ಗೆ ಚರ್ಚೆ ನಡೆಯುತ್ತಿತ್ತು. ಇಂದು ರವೀಶ ಕುಮಾರ ದೆಹಲಿ ಗಲಭೆಯಲ್ಲಿನ ಆರೋಪಿ ಶಾಹರೂಖ ಪಠಾಣನ ಛಾಯಾಚಿತ್ರವನ್ನು ತೋರಿಸಿ ಅವನು ಬಹಿರಂಗವಾಗಿ ಅನುರಾಗ ಮಿಶ್ರಾ ಎಂಬ ಹಿಂದೂ ಆಗಿದ್ದಾನೆ ಎಂದು ಹೇಳುತ್ತಾನೆ, ಅದರ ಬಗ್ಗೆ ಯಾವುದೇ ಚರ್ಚೆ ಆಗುವುದಿಲ್ಲ. ನಾನು ಪತ್ರಿಕೋದ್ಯಮ ಕ್ಷೇತ್ರದವನಾಗಿದ್ದರಿಂದ ನನ್ನ ಅನುಭವದ ಆಧಾರದಲ್ಲಿ, ಯಾವುದೇ ವಾರ್ತೆಯು ಒಂದು ‘ಫಿನಿಶ್ಡ್ ಪ್ರೊಡಕ್ಟ್‌; (ಅಂತಿಮ ಉತ್ಪಾದನೆ) ಆಗಿರುತ್ತದೆ ಎಂದು ಹೇಳಬಹುದು. ಸಂಪೂರ್ಣ ಮಾಹಿತಿ ಹಾಗೂ ನಿಶ್ಚಯದ ಆಧಾರದ ಮೇಲೆ ವಾರ್ತೆಯನ್ನು ಪ್ರಸಾರ ಮಾಡಲಾಗುತ್ತದೆ. ಆದ್ದರಿಂದ ಅದು ‘ಫೇಕ್’ (ನಕಲಿ) ಆಗಿರಲು ಸಾಧ್ಯವಿಲ್ಲ; ಆದರೆ ‘ಮಿಡಿಯಾ’ಗಳಲ್ಲಿ ಕುಳಿತಿರುವ ‘ಅರ್ಬನ್‌ ನಕ್ಸಲೀಯರು’ ಅಭಿವ್ಯಕ್ತಿಯ ಸ್ವಾತಂತ್ರದ ಹೆಸರಿನಲ್ಲಿ ಸುಳ್ಳು ವಾರ್ತೆಗಳನ್ನು ಸರಾಗವಾಗಿ ಪ್ರಸಾರ ಮಾಡುತ್ತಾರೆ. ಆದ್ದರಿಂದ ಇತ್ತೀಚೆಗೆ ‘ಫ್ಯಾಕ್ಟ್ ಚೆಕರ್ಸ್‌’ (ಸತ್ಯ-ಸುಳ್ಳನ್ನುಕಂಡುಹಿಡಿಯುವವರು) ಎಂಬ ಹೆಸರಿನ ಹೊಸ ಪೀಳಿಗೆ ಜನ್ಮತಾಳಿದೆ ! ಈ ‘ಫ್ಯಾಕ್ಟ್ ಚೆಕ್ಕಿಂಗ್‌’ನ ಹೆಸರಿನಲ್ಲಿಯೇ ಹಿಂದೂಗಳ ವಿರುದ್ಧ ಪ್ರಚಾರ ಮಾಡಲಾಗುತ್ತದೆ. ನುಪೂರ ಶರ್ಮಾಳ ವಿರುದ್ಧ ಮಹಮ್ಮದ ಜುಬೇರನು ದೇಶದಾದ್ಯಂತ ವಾತಾವರಣವನ್ನು ಉದ್ರೇಕಿಸಿದ್ದನು; ಆದರೆ ಅವನಿಗೆ ಕರ್ನಾಟಕದ ಕಾಂಗ್ರೆಸ್‌ ಸರಕಾರ ಬೆಂಬಲ ನೀಡಿತು. ಧ್ರುವ ರಾಠಿಯ ಸುಳ್ಳನ್ನು ಬೆಳಕಿಗೆ ತರುವ ಕೆರೋಲಿನಾ ಗೋಸ್ವಾಮಿ ಎಂಬ ವಿದೇಶಿ ಮೂಲದ ಭಾರತಪ್ರೇಮಿ ಮಹಿಳೆಗೂ ಬಹಳಷ್ಟು ಬೆದರಿಕೆಗಳನ್ನು ಹಾಕಲಾಯಿತು.

ಇ. ಇಂದಿನ ‘ಗ್ಲೋಬಲ್‌ ವಿಲೇಜ್‌’ನಲ್ಲಿ ‘ಸೋಶಲ್‌ ಮಿಡಿಯಾ’ ಗಳಿಗೆ ಯಾವುದೇ ‘ಸೆನ್ಸಾರ್‌ಶಿಪ್’ (ನಿಯಂತ್ರಣಮಂಡಳ) ಇಲ್ಲದ ಕಾರಣ ಯಾವುದೇ ಘಟನೆಯ ನಂತರ ಮೊದಲ ಪ್ರತಿಕ್ರಿಯೆ ವ್ಯಕ್ತಪಡಿಸಲಾಗುತ್ತದೆ. ‘ಮೊದಲು ಪ್ರತಿಕ್ರಿಯೆ ಹಾಗೂ
ನಂತರ ಪರ್ಸೆಪ್ಶನ್’ (ತಿಳುವಳಿಕೆ) ನೀಡುವುದರಲ್ಲಿ ಈ ‘ಇಕೋಸಿಸ್ಟಮ್‌’ನ (ವ್ಯವಸ್ಥೆಯ) ಸದಸ್ಯರು ದೊಡ್ಡ ಪ್ರಮಾಣದಲ್ಲಿ ಕಾರ್ಯನಿರತರಾಗಿದ್ದಾರೆ. ಅವರ ಸವಾಲು ನಮ್ಮ ಮುಂದಿವೆ.

ಈ. ಕಳೆದ ೨-೩ ದಶಮಾನಗಳಿಂದ ಸತತವಾಗಿ ಚಲನಚಿತ್ರ ಗಳಿಂದ ಸನಾತನ ಧರ್ಮ ವಿರೋಧಿ ‘ನರೆಟಿವ್‌ ಸೆಟ್’ (ಕಾಲ್ಪನಿಕ ಕಥೆಕಟ್ಟುವ) ಮಾಡುವ ಪ್ರಯತ್ನ

ಈ ‘ಇಕೋಸಿಸ್ಟಮ್’ ಶಿಸ್ತುಬದ್ಧವಾಗಿ ಮಾಡಿದೆ. ಇಂದು ಸೌಭಾಗ್ಯದಿಂದ ‘ದ ಕಾಶ್ಮೀರ್‌ ಫೈಲ್ಸ್‌’, ‘ದ ಕೇರಳ ಸ್ಟೋರಿ’, ‘ಅಜ್ಮೇರ ೯೨’, ‘ಆರ್ಟಿಕಲ್‌ ೩೭೦’ ಈ ಚಲನಚಿತ್ರಗಳ ಮೂಲಕ ಸುಳ್ಳು ‘ನೆರೇಟಿವ್‌’ನ ವಿಷಯದಲ್ಲಿ ವಾಸ್ತವವನ್ನು ಬೆಳಕಿಗೆ ತರುವ ಕಾರ್ಯ ಆರಂಭವಾಗಿದೆ.

ಉ. ‘ಅಕಾಡೆಮಿ’, ಅಂದರೆ ಶಿಕ್ಷಣಕ್ಷೇತ್ರದಲ್ಲಿ ಅರ್ಬನ್‌ ನಕ್ಸಲವಾದಿ

ವಿಚಾರಗಳ ಸಾಯಿಬಾಬಾನಂತಹ ಪ್ರಾಧ್ಯಾಪಕರಿಂದ ಶಿಸ್ತುಬದ್ಧ ವಾಗಿ ವಿದ್ಯಾರ್ಥಿಗಳ ವೈಚಾರಿಕ ಧಾರಣೆಗಳನ್ನು ನಾಶಗೊಳಿಸುವ ಕಾರ್ಯ ಅನೇಕ ವರ್ಷಗಳಿಂದ ನಡೆಯುತ್ತಿದೆ. ಅವರ ಬೌದ್ಧಿಕ ಸವಾಲು ನಮ್ಮ ಮುಂದಿವೆ.

ಊ. ಜ್ಯುಡಿಶಿಯರಿ, ಅಂದರೆ ನ್ಯಾಯಪಾಲಿಕೆಯಲ್ಲಿ ಕುಳಿತಿರುವ ಅರ್ಬನ್‌ ನಕ್ಸಲವಾದಿಗಳಿಂದಲೂ ನಾವು ಅಷ್ಟೇ ಜಾಗರೂಕರಾಗಿರ ಬೇಕಾಗಿದೆ; ಏಕೆಂದರೆ ಅವರು ನ್ಯಾಯಪೀಠದಲ್ಲಿ ಕುಳಿತು ಸನಾತನ ಧರ್ಮವಿರೋಧಿ ನಿರ್ಣಯಗಳನ್ನು ನೀಡುತ್ತಿದ್ದಾರೆ.

೧ ಆ. ವೈಚಾರಿಕ ಧ್ರುವೀಕರಣದ ಕಾಲ : ಕಳೆದ ೧೦ ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವೈಚಾರಿಕ ಧ್ರುವೀಕರಣ, ಅಂದರೆ ‘ಪೊಲರೈಸೇಶನ್’ ನಡೆಯುತ್ತಿದೆ. ಉದ್ಯೋಗ, ರಾಜಕಾರಣ, ಮಿಡಿಯಾ, ಕಲಾಕ್ಷೇತ್ರ, ಕ್ರೀಡಾಕ್ಷೇತ್ರ ಇತ್ಯಾದಿ ಯಾವುದೇ ಕ್ಷೇತ್ರ ಈ ‘ಪೊಲರೈಸೇಶನ್‌’ನಿಂದ ಅಲಿಪ್ತವಾಗಿಲ್ಲ. ಮುಂದಿನ ೫
ವರ್ಷಗಳು ಈ ‘ಪೊಲರೈಸೇಶನ್‌’ನ ದೃಷ್ಟಿಯಲ್ಲಿ ಅತ್ಯಂತ ಮಹತ್ವದ್ದಾಗಿವೆ. ಅದಕ್ಕಾಗಿ ನಾವೆಲ್ಲರೂ ಪ್ರಭಾವಪೂರ್ಣವಾಗಿ ಬೌದ್ಧಿಕ-ವೈಚಾರಿಕ ಯೋಗದಾನ ನೀಡಬೇಕಾಗುವುದು .

೨. ಬೌದ್ಧಿಕ ಕಾರ್ಯದ ಅವಶ್ಯಕತೆ

೨ ಆ. ರಣನೀತಿಯನ್ನು ನಿರ್ಧರಿಸುವ ನಿಲುವನ್ನು (ಸ್ಟ್ರಟ್‌ಜಿಕ್‌ ನೆರೇಟಿವ್‌ ಸೆಟ್ಟಿಂಗ್) ಅಳವಡಿಸುವುದು : ಈ ಮಹತ್ವದ ಕಾರ್ಯ ವನ್ನು ಭವಿಷ್ಯದಲ್ಲಿ ನಾವೆಲ್ಲರೂ ಮಾಡಬೇಕಾಗುವುದು. ೧೯೪೭ ರಿಂದ ಭಾರತದಲ್ಲಿ ವೈಚಾರಿಕ, ಶೈಕ್ಷಣಿಕ, ಸಾಹಿತ್ಯಕ, ರಾಜಕೀಯ ಹಾಗೂ ಮಾಧ್ಯಮ ಈ ಕ್ಷೇತ್ರಗಳಲ್ಲಿ ಸಾಮ್ಯವಾದಿಗಳ ವರ್ಚಸ್ಸು ಉಳಿದಿದೆ. ಅವರು ಪ್ರತಿದಿನ ಈ ಎಲ್ಲ ಮಾಧ್ಯಮಗಳನ್ನು ಉಪಯೋಗಿಸಿ ದೇಶವಿರೋಧಿ ಹಾಗೂ ಸನಾತನ ಧರ್ಮವಿರೊಧಿ ವಿಚಾರಗಳನ್ನು ಪ್ರಸಾರ ಮಾಡುತ್ತಾರೆ. ಅವರನ್ನು ವಿರೋಧಿಸಲು ನಾವುಕೂಡ ರಣತಂತ್ರವನ್ನು ಸಿದ್ಧಪಡಿಸುವ ನಿಲುವನ್ನು ನಿರ್ಧರಿಸಬೇಕು. ‘ವಕ್ಫ್ ಬೋರ್ಡ್‌’ನ ‘ಲ್ಯಾಂಡ್‌ ಜಿಹಾದ್‌’ನ ವಿಷಯದಲ್ಲಿ ಧಾರ್ಮಿಕ ಅಂಶವನ್ನು ಮುಂದಿಟ್ಟುಕೊಂಡು ಸಹಾನುಭೂತಿ ಗಳಿಸುವ ಜನರಿಗೆ ಉತ್ತರ ನೀಡಲು ‘ಸಬ್‌ ಭೂಮಿ ಗೋಪಾಲಕೀ’ ಎಂಬುದು ನಮ್ಮ ‘ಸ್ಟ್ರೇಟಜಿಕ್‌ ನೆರೇಟಿವ್’ ಆಗಿರಬೇಕು.

೨ ಆ. ಸನಾತನ ಧರ್ಮವನ್ನು ನಷ್ಟಗೊಳಿಸಲು ಪ್ರಯತ್ನಿಸುವ ಅರ್ಬನ್‌ ನಕ್ಸಲವಾದಿಗಳನ್ನು ತಡೆಯುವುದು : ಇದು ಕೂಡ ಪ್ರಸ್ತುತ ಕಾಲದ ಮಹತ್ವದ ಕಾರ್ಯವಾಗಿದೆ. ಇಂದು ಸನಾತನ ಧರ್ಮವನ್ನು ನಷ್ಟಗೊಳಿಸುವ ಷಡ್ಯಂತ್ರ ನಡೆಯುತ್ತಿದೆ. ‘ಡಿಸ್‌ಮ್ಯಂಟ್ಲಿಂಗ್‌ ಗ್ಲೋಬಲ್‌ ಹಿಂದುತ್ವ ಕಾನ್ಫರೆನ್ಸ್‌’ (ಜಾಗತಿಕ ಸ್ತರದಲ್ಲಿನ ಹಿಂದುತ್ವವನ್ನು ಉಚ್ಚಾಟನೆ ಮಾಡಲಿಕ್ಕಾಗಿ ಪರಿಷತ್ತು) ‘ಸನಾತನ ಇರೇಡಿಕೇಶನ್‌ ಕಾನ್ಫರೆನ್ಸ್‌’ (ಸನಾತನ ಧರ್ಮವನ್ನು ನಷ್ಟಗೊಳಿಸಲಿಕ್ಕಾಗಿ ಪರಿಷತ್ತು) ಈ ಹಿಂದೂ ಧರ್ಮವಿರೋಧಿ ಪರಿಷತ್ತುಗಳನ್ನು ಆಯೋಜನೆ ಮಾಡಲಾಗುತ್ತಿದೆ. ಮಂದಿರಗಳಲ್ಲಿ ಪಾರಂಪರಿಕ ಉಡುಪುಗಳನ್ನು ಧರಿಸುವುದನ್ನು ವಿರೋಧಿಸಲಾಗುತ್ತಿದೆ. ‘ಧರ್ಮವೆಂದರೆ ಆಫೀಮಿನಗುಳಿಗೆ ಎಂದು ತಿಳಿಯುವ ಸಾಮ್ಯವಾದಿ ಮಹಿಳೆಯರು ಕೇರಳದ ಶಬರಿಮಲೈ ಮಂದಿರದಲ್ಲಿ ಪ್ರವೇಶ ನೀಡಬೇಕೆಂದು ಆಂದೋಲನ ನಡೆಸುತ್ತಿದ್ದಾರೆ. ಕೊರೋನಾದ ಕಾಲದಲ್ಲಿ ೨೦೨೧ ರಲ್ಲಿ ಹರಿದ್ವಾರದಲ್ಲಿ ನಡೆದಿರುವ ಕುಂಭಮೇಳವನ್ನು ದೇಶದ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳಿಂದ ಖಳನಾಯಕನ ಹಾಗೆ ಚಿತ್ರಿಸಲಾಯಿತು. ಅವರ ಉದ್ದೇಶ ಸನಾತನ ಧರ್ಮ, ಕುಂಭಮೇಳ ಹಾಗೂ ಅದರ ಆಯೋಜನೆ ಮಾಡುವ ರಾಷ್ಟ್ರವಾದಿ ಸರಕಾರ ವನ್ನು ಗುರಿಯಾಗಿಸುವುದೇ ಆಗಿತ್ತು. ಇವೆಲ್ಲವೂ ಸನಾತನ ಧರ್ಮವಿರೋಧಿ ಷಡ್ಯಂತ್ರಗಳಾಗಿವೆ ಹಾಗೂ ಅವುಗಳನ್ನು ಪ್ರತಿದಿನ ಅರ್ಬನ್‌ ನಕ್ಸಲರು ರಚಿಸುತ್ತಿದ್ದಾರೆ. ಇಂತಹವರನ್ನು ತಡೆಗಟ್ಟಲು ನಾವು ಬೌದ್ಧಿಕ ಸಿದ್ಧತೆ ಮಾಡಬೇಕಾಗಿದೆ.
೨ ಇ. ಹಿಂದೂ ರಾಷ್ಟ್ರದ ಸಮರ್ಥನೆಗಾಗಿ ಭೂಮಿಕೆಯನ್ನು ಪ್ರಸ್ತುತಪಡಿಸುವುದು : ಮುಂಬರುವ ಸಮಯದಲ್ಲಿ ಇದೊಂದು ಮಹತ್ವದ ಹೊಣೆ ನಮ್ಮೆಲ್ಲರದ್ದಾಗಿರುವುದು. ‘ಭಾರತ ಅನಾದಿ ಕಾಲದಿಂದಲೂ ಹಿಂದೂ ರಾಷ್ಟ್ರವೆ ಆಗಿತ್ತು, ಇಂದು ಕೂಡ ಇದೆ, ಭವಿಷ್ಯದಲ್ಲಿಯೂ ಅನಂತ ಕಾಲದವರೆಗೆ ಇರುವುದು’, ಎನ್ನುವ ದೃಢ ವಿಶ್ವಾಸ ಹಿಂದೂಗಳದ್ದಾಗಿರಬೇಕು. ಹಿಂದೂ ರಾಷ್ಟ್ರದ ನಿಲುವನ್ನು ರಾಜನೈತಿಕ, ಸಂವಿಧಾನಾತ್ಮಕ, ಧಾರ್ಮಿಕ, ಐತಿಹಾಸಿಕ ಇಂತಹ ಅನೇಕ ಅಂಗಗಳ ಮೂಲಕ ನಾವು ಭಾರತದ ಮುಂದೆ ಇಡಬೇಕಾಗಿದೆ. ಪ್ರತಿಯೊಬ್ಬರೂ ತಮ್ಮ ಅಭ್ಯಾಸಕ್ಕನುಸಾರ, ತಮ್ಮ ತಿಳುವಳಿಕೆಗನುಸಾರ, ಹಿಂದೂ ರಾಷ್ಟ್ರ-ವಿರೋಧಿಗಳನ್ನು ಖಂಡಿಸಲು ಸುಲಭವಾಗುವಂತೆ ಹಿಂದೂ ರಾಷ್ಟ್ರವನ್ನು ಸಮರ್ಥನೆ ಮಾಡಬೇಕು. ನಮ್ಮ ಗುರುದೇವರು ಹಾಗೂ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ೧೯೯೮ ರಲ್ಲಿ ಸಂಕಲನ ಮಾಡಿದ ‘ಈಶ್ವರೀ ರಾಜ್ಯದ ಸ್ಥಾಪನೆ’ ಈ ಗ್ರಂಥದಲ್ಲಿ, ‘ಹಿಂದೂ ರಾಷ್ಟ್ರವೆಂದರೆ, ‘ಅಧ್ಯಾತ್ಮವನ್ನು ಆಧರಿಸಿರುವ ರಾಜ್ಯವ್ಯವಸ್ಥೆ’ ಎಂದು ಹೇಳಿದ್ದರು ! ಭಾರತದಲ್ಲಿ ಅಧ್ಯಾತ್ಮದ ಆಧಾರದಲ್ಲಿ ರಾಜ್ಯವ್ಯವಸ್ಥೆ ಬಂದರೆ ಮಾತ್ರ ಅದು ವಿಶ್ವಕಲ್ಯಾಣದ ಕಾರ್ಯ ಮಾಡಲು ಸಾಧ್ಯ. ಅದಕ್ಕಾಗಿ ಅವರು ಹಿಂದೂ ರಾಷ್ಟ್ರದ ಸಂಕಲ್ಪನೆ ಮಾಡುವಾಗ ಕೇವಲ ಹಿಂದೂಹಿತದ ರಾಜ್ಯವ್ಯವಸ್ಥೆ ಎನ್ನುವ ಅರ್ಥವನ್ನು ಸೀಮಿತವಾಗಿಡದೆ, ವಿಶ್ವಕಲ್ಯಾಣಕ್ಕಾಗಿ ಕಾರ್ಯನಿರತ ಸಾತ್ತ್ವಿಕ ರಾಷ್ಟ್ರ, ಎನ್ನುವ ವ್ಯಾಪಕ ಅರ್ಥವನ್ನು ಹೇಳಿದ್ದಾರೆ.

ಹಿಂದೂ ಜನಜಾಗೃತಿ ಸಮಿತಿಯೂ ಹಿಂದೂ ರಾಷ್ಟ್ರದ ಸಂವಿಧಾನಾತ್ಮಕ ನಿಲುವನ್ನು ಮಂಡಿಸುವಾಗ ‘ಭಾರತೀಯ ಸಂವಿಧಾನದಲ್ಲಿ ಸಂವಿಧಾನಬಾಹಿರ ಪದ್ಧತಿಯಲ್ಲಿ ಸೇರಿಸಿರುವ ‘ಸೆಕ್ಯುಲರ್’ (ನಿಧರ್ಮಿ) ಶಬ್ದವನ್ನು ವರ್ಜಿಸಿ ‘ಹಿಂದೂ ರಾಷ್ಟ್ರ’ ಈ ಶಬ್ದವನ್ನು ಸಮಾವೇಶಗೊಳಿಸಿರಿ’, ಎಂಬ ಬೇಡಿಕೆಯನ್ನು ಮುಂದಿಡುತ್ತಿದೆ. ಹೀಗೆಯೆ ಪ್ರತಿಯೊಬ್ಬರಲ್ಲಿಯೂ ತಮ್ಮ ಅಭ್ಯಾಸಕ್ಕನುಸಾರ ಹಾಗೂ ತಿಳುವಳಿಕೆಗನುಸಾರ ಹಿಂದೂ ರಾಷ್ಟ್ರವನ್ನು ಸಮರ್ಥಿಸುವ ನಿಲುವು ಇರಬಹುದು. ಅಂತಹವರು ಕೂಡ ಅದನ್ನು ಮಂಡಿಸುವ ಅವಶ್ಯಕತೆಯಿದೆ.

೩. ಕರೆ

ನಿಜವಾಗಿ ನೋಡಿದರೆ ವಿಚಾರವಂತರು ಬೌದ್ಧಿಕ ಮತಭೇದ ದಿಂದ ಸಂಘಟಿತರಾಗಲು ಸಾಧ್ಯವಾಗುತ್ತಿಲ್ಲ, ಎನ್ನುವುದು ಇದುವರೆಗಿನ ತಿಳುವಳಿಕೆಯಾಗಿತ್ತು ; ಆದರೆ ಈಗ ನಮಗೆ ಈ ಮಾನದಂಡವನ್ನು (ನಿಷ್ಕರ್ಷವನ್ನು) ಬದಲಾಯಿಸುವ ಸಮಯ ಬಂದಿದೆ. ವಿರೋಧಿಗಳಲ್ಲಿರುವ ಹಣದ ಸಾಮರ್ಥ್ಯ, ಅಧಿಕಾರಸಾಮರ್ಥ್ಯ, ವಿದೇಶಿ ದಲಾಲರ ಬೆಂಬಲ ಇತ್ಯಾದಿಗಳನ್ನು ಗಮನಿಸಿದಾಗ ಸನಾತನ ಧರ್ಮದ ರಕ್ಷಣೆಗಾಗಿ ಈಗ ನಾವು ಸಣ್ಣ ಸಣ್ಣ ಭೇದಭಾವಗಳನ್ನು ಮರೆತು ಸಂಘಟಿತರಾಗಬೇಕಾಗಿದೆ. ನಾವು ನಮ್ಮ ಬೌದ್ಧಿಕ ಬಲದ ಆಧಾರದಲ್ಲಿ ಸನಾತನ ಧರ್ಮ ಮತ್ತು ಸನಾತನ ಭಾರತವನ್ನು ರಕ್ಷಣೆ ಮಾಡಬೇಕಾಗಿದೆ. ಅದಕ್ಕಾಗಿ ನಾವು ಇಂದು ಇಲ್ಲಿ ಮಾತ್ರವಲ್ಲ, ಇನ್ನು ಮುಂದೆಯೂ ಬೌದ್ಧಿಕ ಸಂಘರ್ಷಕ್ಕಾಗಿ ವಿವಿಧ ಸ್ಥಳಗಳಲ್ಲಿ ಒಗ್ಗಟ್ಟಾಗಿ ಹೋರಾಡಲು ನಿರ್ಧರಿಸಬೇಕಾಗಿದೆ.
ಅಂತಿಮವಾಗಿ ನಾನು ಹೇಳಲು ಇಚ್ಛಿಸುವುದೇನೆಂದರೆ, ಬೌದ್ಧಿಕ ಆಕ್ರಮಣದಿಂದಾಗಿ ಇಂದು ಭಾರತೀಯ ಸಮಾಜ ‘ಬ್ರೈನ್‌ವಾಶ್ಡ್‌’ (ಬುದ್ಧಿಭೇದ) ಆಗಿದೆ. ಈಗ ನಿಜವಾಗಿಯೂ ಅವರ ಮತಿಸ್ವಚ್ಛತೆ (ಬುದ್ಧಿಸ್ವಚ್ಛತೆ) ಅಂದರೆ ‘ಬ್ರೈನ್‌ ವಾಶಿಂಗ್’ ಮಾಡುವ ಅವಶ್ಯಕತೆಯಿದೆ. ನಾವೆಲ್ಲ ಹಿಂದುತ್ವನಿಷ್ಠರು ಈ ಬೌದ್ಧಿಕ ಯುದ್ಧಕ್ಕೆ ಸಮರ್ಪಕವಾದ ಉತ್ತರ ನೀಡುವ ಅವಶ್ಯಕತೆಯಿದೆ !

– ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ.