ನವದೆಹಲಿ – ಕೇಜ್ರಿವಾಲ್ ಸರಕಾರವನ್ನು ವಿಸರ್ಜಿಸಿ ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ತರಬೇಕೆಂದು ಭಾಜಪ ಪಕ್ಷವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮದ್ಯದ ಹಗರಣದಲ್ಲಿ ಸುಮಾರು 6 ತಿಂಗಳಿನಿಂದ ಜೈಲಿನಲ್ಲಿರುವುದರಿಂದ ದೆಹಲಿಯಲ್ಲಿ ‘ಸಾಂವಿಧಾನಿಕ ಬಿಕ್ಕಟ್ಟು’ ನಿರ್ಮಾಣವಾಗಿದೆಯೆಂದು ಭಾಜಪ ಆರೋಪಿಸಿದೆ.
ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜೇಂದ್ರ ಗುಪ್ತಾ ಅವರ ನಾಯಕತ್ವದಡಿಯಲ್ಲಿ ಭಾಜಪ ಶಾಸಕರು ಆಗಸ್ಟ್ 30 ರಂದು ರಾಷ್ಟ್ರಪತಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು ಅದರ ಮಾಹಿತಿ ಈಗ ಬಹಿರಂಗವಾಗಿದೆ. ರಾಷ್ಟ್ರಪತಿ ಭವನವು ಈ ಮನವಿಯನ್ನು ಕೇಂದ್ರ ಗೃಹ ಕಾರ್ಯದರ್ಶಿಗೆ ಕಳುಹಿಸಿದೆ. ದೆಹಲಿಯಲ್ಲಿ ಸದ್ಯ ನಡೆಯುತ್ತಿರುವ ಸಾಂವಿಧಾನಿಕ ಬಿಕ್ಕಟ್ಟಿನ ಕಡೆಗೆ ಗಾಂಭೀರತೆಯಿಂದ ಗಮನ ಹರಿಸುವ ಅವಶ್ಯಕತೆಯಿದೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ. ಭಾಜಪ ತನ್ನ ಈ ಮನವಿಯಲ್ಲಿ ದೆಹಲಿ ಸರಕಾರದ ವ್ಯವಸ್ಥೆ, ಆರ್ಥಿಕ ಅವ್ಯವಸ್ಥೆಗಳು ಮತ್ತು ಜನರ ಸ್ಥಿತಿ ಈ ವಿಷಯಗಳ ಬಗ್ಗೆ ಕೂಡ ದೂರನ್ನು ನೀಡಿದೆ. ರಾಜಧಾನಿಯ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಸಂಪಾದಕೀಯ ನಿಲುವುಒಂದು ಪ್ರಮುಖ ರಾಜ್ಯದ ಮುಖ್ಯಮಂತ್ರಿ ಸುಮಾರು 6 ತಿಂಗಳಿನಿಂದ ಜೈಲಿನಲ್ಲಿದ್ದು ಮುಖ್ಯಮಂತ್ರಿ ಹುದ್ದೆಯಲ್ಲಿರುವುದು ಪ್ರಜಾಪ್ರಭುತ್ವದ ದೊಡ್ಡ ಅವಮಾನವಾಗಿದೆ. ರಾಜ್ಯದ ಜನತೆಯ ಪ್ರಶ್ನೆಗಳಿಗೆ ಉತ್ತರ ನೀಡಲು ಮುಖ್ಯಮಂತ್ರಿಗಳೇ ಲಭ್ಯವಿಲ್ಲವೆಂದರೆ ಇದು ಪ್ರಜಾಪ್ರಭುತ್ವದ ದೊಡ್ಡ ಸೋಲಲ್ಲವೇ? |