ಬಿಕಾನೇರ (ರಾಜಸ್ಥಾನ) – ಸೆಪ್ಟೆಂಬರ್ 9 ರಿಂದ ಮರಳಿನ ಗುಡ್ಡಗಾಡಿನಲ್ಲಿ ಭಾರತ ಮತ್ತು ಅಮೇರಿಕಾ ಜಂಟಿ ಸಮರಾಭ್ಯಾಸ ಪ್ರಾರಂಭವಾಯಿತು. ಉಭಯ ದೇಶಗಳ ನಡುವಿನ ಇಲ್ಲಿಯವರೆಗಿನ ಅತಿದೊಡ್ಡ ಸಮರಾಭ್ಯಾಸ ಸೆಪ್ಟೆಂಬರ್ 22 ರವರೆಗೆ ಮುಂದುವರಿಯುತ್ತದೆ. ಎರಡು ಸೇನೆಗಳ ನಡುವಿನ ಸಮರಾಭ್ಯಾಸದ ಉದ್ದೇಶವು ಎರಡೂ ಸೇನೆಗಳ ನಡುವಿನ ಸಮನ್ವಯವನ್ನು ಬಲಪಡಿಸುವುದು ಮತ್ತು ದೇಶ ಮತ್ತು ಅಂತರರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಪರಿಹರಿಸುವುದಾಗಿದೆ. ಈ ಸಮರಾಭ್ಯಾಸದ ಅಡಿಯಲ್ಲಿ ಉಪ-ಸಾಂಪ್ರದಾಯಿಕ ಪ್ರದೇಶದಲ್ಲಿ ಜಂಟಿ ಮಿಲಿಟರಿ ಸಾಮರ್ಥ್ಯ ಮತ್ತು ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆಗಳನ್ನು ಹೆಚ್ಚಿಸುವತ್ತ ಗಮನಹರಿಸಲಾಗುವುದು. ಸಮರಾಭ್ಯಾಸಕ್ಕಾಗಿ ಅಮೇರಿಕಾ ಸೈನಿಕರು ಸೆಪ್ಟೆಂಬರ್ 8 ರ ಸಾಯಂಕಾಲ ‘ಮಹಾಜನ ಫಾಯರಿಂಗ್ ರೇಂಜ್’ಗೆ ತಲುಪಿದರು.
ಎರಡೂ ದೇಶಗಳ ಸೈನಿಕರು ಪರಸ್ಪರ ಶಸ್ತ್ರಾಸ್ತ್ರಗಳ ಪರಿಶೀಲನೆ ನಡೆಸಿದರು. ಭಾರತೀಯ ಸೈನಿಕರು ಅಮೇರಿಕಾ ಸೈನಿಕರಿಗೆ ಆಕಾಶದಿಂದ ಇಳಿದು ಶತ್ರುಗಳ ನೆಲೆಗಳನ್ನು ಧ್ವಂಸ ಮಾಡಲು ತರಬೇತಿ ನೀಡಲಿದ್ದಾರೆ. ಭಾರತದಲ್ಲಿ ತಯಾರಾದ ಆಯುಧಗಳ ಪ್ರದರ್ಶನವನ್ನು ಏರ್ಪಡಿಸಲಿದ್ದಾರೆ. ಭಾರತೀಯ ಸೈನಿಕರು ಅಮೇರಿಕೆಯ ಶಸ್ತ್ರಾಸ್ತ್ರಗಳ ತರಬೇತಿ ಪಡೆಯಲಿದ್ದಾರೆ. ಭಾರತೀಯ ಸೈನಿಕರು ‘ಎಕೆ 203’ ರೈಫಲ್‌ನಂತಹ ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಲಿದ್ದಾರೆ.
ಭಾರತದಲ್ಲಿ ಇದೇ ಮೊದಲ ಬಾರಿಗೆ ಅಮೇರಿಕಾದಿಂದ ‘ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಂ’ ಬಳಕೆ !
ಅಮೇರಿಕೆಯಿಂದ ಇದೇ ಮೊದಲ ಬಾರಿ ಭಾರತೀಯ ಸೇನೆಯ ‘ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್’ನಲ್ಲಿ ‘ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಮ್’ ಅನ್ನು ನಿಯೋಜಿಸಲಿದೆ. ಈ ಯಂತ್ರವು ದೂರದವರೆಗೆ ನಿಖರವಾದ ದಾಳಿಯನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ.