ವಕೀಲೆಯ ಮೇಲೆ ಬಲಾತ್ಕಾರ ಮಾಡಿದ ಸಮಾಜವಾದಿ ಪಕ್ಷದ ನಾಯಕ; ದೂರು ದಾಖಲಿಸಿಕೊಳ್ಳಲು ಪೊಲೀಸರಿಂದ ಮೀನಾಮೇಷ

ಮವು (ಉತ್ತರಪ್ರದೇಶ) – ಇಲ್ಲಿಯ ಸಮಾಜವಾದಿ ಪಕ್ಷದ ಮಾಜಿ ಪ್ರದೇಶ ಸಚಿವ ಮತ್ತು ಮವು ಬಾರ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ವೀರೇಂದ್ರ ಬಹದ್ದೂರ್ ಪಾಲ್ ಇವನ ವಿರುದ್ಧ ಬಲತ್ಕಾರದ ಪ್ರಕರಣದಲ್ಲಿ ದೂರು ದಾಖಲಿಸಲಾಗಿದೆ. ವಕೀಲೆ ನೀಡಿರುವ ದೂರಿನ ಪ್ರಕಾರ ಪಾಲ್ ಇವರು ಆಕೆಗೆ ಸಾರಾಯಿ ಕೊಡಿಸಿ ಬಲಾತ್ಕಾರ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ಕೂಡ ಅವರು ತಯಾರಿಸಿ ಮತ್ತು ಬೆದರಿಸಿ ಆಗ್ಗಾಗೆ ಬಲಾತ್ಕಾರ ಮಾಡಿದ್ದಾರೆ. ಈ ಪ್ರಕರಣದಲ್ಲಿ ವಕೀಲೆ ದೂರು ನೋಂದಾಯಿಸಲು ಪೊಲೀಸ ಠಾಣೆಗೆ ಹೋದಾಗ ಪೊಲೀಸರು ದೂರು ದಾಖಲಿಸಿ ಕೊಳ್ಳಲಿಲ್ಲ. ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರನ್ನು ಮೊರೆ ಹೋದಾಗ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ದೂರು ದಾಖಲಿಸಿದ ನಂತರ ವೀರೇಂದ್ರ ಬಹದ್ದೂರ್ ಪಾಲ್ ಪರಾರಿ ಆಗಿದ್ದು ಪೊಲೀಸರು ಅವನನ್ನು ಹುಡುಕುತ್ತಿದ್ದಾರೆ.

ಬಲಾತ್ಕಾರದ ಕೇಂದ್ರವಾಗಿರುವ ಸಮಾಜವಾದಿ ಪಕ್ಷ !

೧. ಅಯೋಧ್ಯೆಯಲ್ಲಿನ ಪುರಾ ಕಲಂದರ್ ಪ್ರದೇಶದಲ್ಲಿನ ಮೋಯೀದ ಖಾನ್ ಇವನು ಓರ್ವ ಅಪ್ರಾಪ್ತ ಹುಡುಗಿಯ ಮೇಲೆ ಮೇಲಿಂದ ಮೇಲೆ ಬಲಾತ್ಕಾರ ಮಾಡಿದನು. ಈ ಪ್ರಕರಣದಲ್ಲಿ ಅವನನ್ನು ಬಂಧಿಸಲಾಗಿದೆ.

೨. ಕನೌಜ್ ಇಲ್ಲಿ ಸಮಾಜವಾದಿ ಪಕ್ಷದ ನಾಯಕ ನವಾಬ ಸಿಂಹ ಯಾದವ್ ಇವನು ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ನಡೆಸಿರುವ ಪ್ರಕರಣದಲ್ಲಿ ಅವನನ್ನು ಬಂಧಿಸಲಾಗಿದೆ.

ಸಂಪಾದಕೀಯ ನಿಲುವು

  • ಕೊಲೆ, ಬಲಾತ್ಕಾರ ಮತ್ತು ಭ್ರಷ್ಟಾಚಾರ ನಡೆಸುವವರಿಂದ ತುಂಬಿರುವ ಸಮಾಜವಾದಿ ಪಕ್ಷ ! ಈ ಪಕ್ಷವನ್ನು ಏಕೆ ನಿಷೇಧಿಸಬಾರದು ?
  • ಓರ್ವ ವಕೀಲೆಯು ದೂರು ದಾಖಲಿಸಲು ಹೋದಾಗ ಮೀನಮೇಶ ಎಣಿಸಿರುವ ಪೊಲೀಸರು ಸಾಮಾನ್ಯ ಸಂತ್ರಸ್ತೆ ಮಹಿಳೆಯ ಜೊತೆಗೆ ಹೇಗೆ ವರ್ತಿಸುವರು, ಇದರ ಯೋಚನೆ ಮಾಡದೆ ಇರುವುದೇ ಒಳಿತು !