ಸಾಧಕರೇ, ನಿಮ್ಮ ಸೇವೆಗಳ ಜವಾಬ್ದಾರಿಯನ್ನು ಹೊಂದಿರುವ ಸಾಧಕರನ್ನು ಅರ್ಥ ಮಾಡಿಕೊಳ್ಳಿ !

(ಪೂ.) ಶ್ರೀ. ಸಂದೀಪ ಆಳಶಿ

‘ಸನಾತನದ ಕಾರ್ಯವು ವೇಗವಾಗಿ ಬೆಳೆಯುತ್ತಿದೆ. ‘ಎಲ್ಲ ಸೇವೆಗಳ ಕ್ಷೇತ್ರಗಳಲ್ಲಿ ಕಾರ್ಯ ಹೆಚ್ಚು ಮತ್ತು ಅದನ್ನು ಮಾಡಲು ಸಾದಕರು ಕಡಿಮೆ’, ಎಂಬಂತಹ ಸ್ಥಿತಿಯಿದೆ. ಬಹಳಷ್ಟು ಸಾಧಕರಿಗೆ ತಮ್ಮ ಸೇವೆಗಳ ಜವಾಬ್ದಾರ ಸಾಧಕರ ಸಂದರ್ಭದಲ್ಲಿ ‘ಆ ಸಾಧಕರು ಬಹಳ ಸೇವೆಗಳನ್ನು ಹೇಳುತ್ತಾರೆ, ಮೇಲಿಂದ ಮೇಲೆ ತಪ್ಪು ತೋರಿಸುತ್ತಾರೆ, ಸೇವೆ ಪೂರ್ಣಗೊಳಿಸುವ ಬಗ್ಗೆ ಮೇಲಿಂದ ಮೇಲೆ ಬೆಂಬತ್ತುತ್ತಾರೆ, ನಮ್ಮ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದಿಲ್ಲ’ ಎಂಬಂತಹ ಅಡಚಣೆಗಳು ಇರುತ್ತವೆ. ಜವಾಬ್ದಾರ ಸಾಧಕರು ‘ಸಾಧಕರಿಂದ ಸೇವೆಯನ್ನು ಪೂರ್ಣ ಮಾಡಿಸಿಕೊಳ್ಳುವುದರೊಂದಿಗೆ ಅವರನ್ನು ಪ್ರೀತಿಯಿಂದ ಅರ್ಥಮಾಡಿಕೊಳ್ಳುವುದು’, ಇದು ಅವರ ಸಮಷ್ಟಿ ಸಾಧನೆಯ ಒಂದು ಭಾಗವೇ ಆಗಿದೆ. ಇದರಲ್ಲಿ ಹೆಚ್ಚಿನ ಬಾರಿ ಜವಾಬ್ದಾರ ಸಾಧಕರು ಕಡಿಮೆ ಬೀಳುತ್ತಾರೆ; ಆದುದರಿಂದ ಅವರು ಈ ಬಗ್ಗೆ ಪ್ರಯತ್ನವನ್ನು ಹೆಚ್ಚಿಸಬೇಕು.

ಸಾಧಕರೂ ‘ನಾವು ಸ್ವತಃ ಜವಾಬ್ದಾರ ಸಾಧಕರಾಗಿದ್ದೇವೆ’, ಎಂಬ ನಿಲುವಿಟ್ಟುಕೊಂಡು ವಿಚಾರ ಮಾಡಿದರೆ, ಅವರಿಗೆ ಜವಾಬ್ದಾರ ಸಾಧಕರನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ, ಅವರ ಅಡಚಣೆಗಳೂ ಗಮನಕ್ಕೆ ಬರುತ್ತವೆ ಮತ್ತು ಅವರ ಬಗ್ಗೆ ಇರುವ ಒಂದು ರೀತಿಯ ನಕಾರಾತ್ಮಕತೆಯ ಅಥವಾ ವೈಮನಸ್ಸಿನ ಭಾವನೆ ಕಡಿಮೆಯಾಗಲು ಸಹಾಯವಾಗುತ್ತದೆ. ಸಾಧಕರು ತಮಗೆ ತಾವೇ ಮುಂದಿನ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು.

೧. ನಮ್ಮೆಲ್ಲ ಅಡಚಣೆಗಳು ಜವಾಬ್ದಾರ ಸಾಧಕರಿಗೆ ಸಂಪೂರ್ಣ ವಾಗಿ ಗಮನಕ್ಕೆ ಬಂದೇ ಬರುತ್ತವೆ ಎಂದಿರುವುದಿಲ್ಲ. ಇಂತಹ ಸಮಯದಲ್ಲಿ ನಾವು ಸ್ವತಃ ಅಥವಾ ಇತರ ಯಾರದ್ದಾದರೂ ಸಹಾಯ ಪಡೆದು ಆ ಅಡಚಣೆಗಳನ್ನು ಜವಾಬ್ದಾರ ಸಾಧಕರಿಗೆ ಮನಮುಕ್ತತೆಯಿಂದ ಹೇಳುವುದು ಅಪೇಕ್ಷಿತವಿದೆ. ಈ ಮೂಲಕ ‘ನಮ್ಮ ಮನಸ್ಸಿನ ಸಂಘರ್ಷವನ್ನು ಕಡಿಮೆ ಮಾಡಿ ಕೊಳ್ಳುವುದರೊಂದಿಗೆ ಜವಾಬ್ದಾರ ಸಾಧಕರಿಂದ ತಪ್ಪಾಗುತ್ತಿದ್ದರೆ ಅದನ್ನು ಅವರ ಗಮನಕ್ಕೆ ತಂದುಕೊಟ್ಟು ‘ಅವರಿಗೆ ಸಾಧನೆಯಲ್ಲಿ ಸಹಾಯ ಮಾಡುವುದು’, ಇದು ನಮ್ಮ ಸಾಧನೆಯ ಭಾಗವೇ ಆಗಿದೆ’, ಎಂದು ನಾವು ಗಮನಕ್ಕೆ ತೆಗೆದುಕೊಳ್ಳುತ್ತೇವೆಯೇ ?

೨. ‘ಜವಾಬ್ದಾರ ಸಾಧಕರ ಮಾಧ್ಯಮದಿಂದ ಗುರುಗಳೇ ನಮಗೆ ಸೇವೆಯನ್ನು ಹೇಳುತ್ತಿದ್ದು ಅವರೇ ನಮ್ಮಿಂದ ಅದನ್ನು ಪೂರ್ಣ ಮಾಡಿಸಿಕೊಳ್ಳುವವರಿದ್ದಾರೆ’, ಎಂಬ ಭಾವವನ್ನು ಅನೇಕ ಸಾಧಕರು ಇಟ್ಟುಕೊಂಡಾಗ ಅವರಿಗೆ ‘ಸೇವೆಯಲ್ಲಿ ಮನಸ್ಸಿನ ಸಂಘರ್ಷವಾಗುವುದಿಲ್ಲ ಮತ್ತು ಸೇವೆಯು ಆನಂದದಿಂದ ಮತ್ತು ಸಮಯಮಿತಿಯಲ್ಲಿ ಪೂರ್ಣವಾಗುತ್ತದೆ’, ಎಂಬ ಅನುಭೂತಿ ಬರುತ್ತದೆ. ಈ ರೀತಿಯ ಭಾವವನ್ನಿಡಲು ನಾವು ಪ್ರಯತ್ನಿಸು ತ್ತೇವೆಯೇ ? ಈ ಬಗ್ಗೆಯೂ ಸಾಧಕರು ವಿಚಾರ ಮಾಡಬೇಕು.

೩. ಜವಾಬ್ದಾರ ಸಾಧಕರು ನಮಗೆ ಹೇಳಿದ ಸೇವೆಗಳ ಬಗ್ಗೆ ಬೆಂಬತ್ತುವಿಕೆ ಮಾಡಿದರೆ, ನಮಗೆ ಮೇಲಿಂದ ಮೇಲೆ ಸಾಧನೆಯ ಪ್ರಯತ್ನಗಳ ಬಗ್ಗೆ ಹೇಳಿದಾಗ, ಇವೆಲ್ಲವನ್ನೂ ನಾವು ಸಾಧನೆಯ ದೃಷ್ಟಿಯಿಂದ ಸ್ವೀಕರಿಸಿ ಆ ರೀತಿ ಪ್ರಯತ್ನಿಸಿದರೆ, ಬೇಗನೇ ನಮ್ಮ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ.

೪. ಜವಾಬ್ದಾರ ಸಾಧಕರು ಹೇಳಿದಂತೆ ನಮಗೆ ಸೇವೆಯನ್ನು ವ್ಯವಸ್ಥಿತವಾಗಿ ಮಾಡಲು ಬರುವುದಿಲ್ಲ ಅಥವಾ ಸಮಯಮಿತಿಯಲ್ಲಿ ಪೂರ್ಣಗೊಳ್ಳುವುದಿಲ್ಲ, ಇದರ ಹಿಂದೆ ನಮ್ಮ ‘ಆಯೋಜನೆಯ ಅಭಾವ, ಕಾರ್ಯಪದ್ಧತಿಗಳ ಪಾಲನೆಯ ಅಭಾವ, ಸೇವೆಗಳ ಬಗೆಗಿನ ಅಧ್ಯಯನದಲ್ಲಿ ಕಡಿಮೆ ಬೀಳುವುದು’ ಇವುಗಳಂತಹ ಸ್ವಭಾವದೋಷಗಳು ಕಾರಣವಾಗಿರುತ್ತವೆ. ಈ ದೋಷಗಳ ಬಗ್ಗೆ ನಾವು ಮನಃಪೂರ್ವಕ ಚಿಂತನೆ ಮಾಡಿ ಅವುಗಳನ್ನು ದೂರ ಮಾಡಲು ಕಠೋರವಾಗಿ ಪ್ರಯತ್ನಿಸುತ್ತೇವೆಯೇ ?

೫. ‘ಜವಾಬ್ದಾರ ಸಾಧಕರು ನಮ್ಮ ಅಡಚಣೆಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ’, ಎಂದು ನಮ್ಮ ಅಡಚಣೆಗಳನ್ನು ಹಿರಿಯ ಸಾಧಕರಿಗೆ ಹೇಳುವಾಗ ಕೆಲವೊಮ್ಮೆ ನಾವು ಅರ್ಧದಷ್ಟು ಅಥವಾ ಏಕಪಕ್ಷೀಯವಾಗಿ ಅಥವಾ ನಮಗೆ ಅನುಕೂಲವಾಗುವ ರೀತಿಯಲ್ಲಿ ಹೇಳುತ್ತೇವೆ. ‘ಈ ರೀತಿ ಮಾಡುವುದು ಸಾಧನೆಯ ದೃಷ್ಟಿಯಿಂದ ಅಯೋಗ್ಯವಾಗಿದೆ’, ಎಂಬುದರ ನಾವು ವಿಚಾರ ಮಾಡುತ್ತೇವೆಯೇ ?

೬. ಕೆಲವೊಮ್ಮೆ ‘ನನಗೆ ಹೆಚ್ಚು ತಿಳಿಯುತ್ತದೆ’, ಎಂಬ ಅಹಂಕಾರದಿಂದಾಗಿ ಜವಾಬ್ದಾರ ಸಾಧಕರನ್ನು ಕಡಿಮೆ ಅಂದಾಜು ಮಾಡುವುದು, ಅವರಿಂದ ಯಾವುದಾದೊಂದು ನಿರ್ಣಯ ಬರಲು ತಡವಾದರೆ ಅದರ ಹಿಂದಿನ ಕಾರಣವನ್ನು ತಿಳಿದುಕೊಳ್ಳದೇ ಪ್ರತಿಕ್ರಿಯೆ ನೀಡುವುದು, ಅವರ ಬಗ್ಗೆ ಇತರ ಸಾಧಕರಲ್ಲಿ ನಕಾರಾತ್ಮಕತೆಯನ್ನು ಹರಡುವಂತಹ ಕೃತಿಗಳಾಗುತ್ತವೆ. ‘ಇದರಿಂದ ನಾವು ನಮ್ಮ ಸಾಧನೆಯ ಹಾನಿಯನ್ನೇ ಮಾಡಿಕೊಳ್ಳುತ್ತಿದ್ದೇವೆ’, ಎಂಬುದು ನಮ್ಮ ಗಮನಕ್ಕೆ ಬರುತ್ತದೆಯೇ ?

೭. ಜವಾಬ್ದಾರ ಸಾಧಕರು ಮೇಲಿಂದ ಮೇಲೆ ಸೇವೆಗಳ ಬೆಂಬತ್ತುವಿಕೆ ಏಕೆ ಮಾಡುತ್ತಾರೆ ? ಇದರ ಕಾರಣವೆಂದರೆ ಅವರಿಗೆ ಎಲ್ಲ ಸೇವೆಗಳ ವರದಿಯನ್ನು ಅವರ ಜವಾಬ್ದಾರ ಸಾಧಕರಿಗೆ ಕೊಡಲಿಕ್ಕಿರುತ್ತದೆ. ಬಹಷ್ಟು ಸೇವೆಗಳನ್ನು ಸಮಯಮಿತಿಯಲ್ಲಿ ಪೂರ್ಣಗೊಳಿಸಲಿಕ್ಕಿರುತ್ತದೆ. ಗುರುಕಾರ್ಯದ ಹಾನಿಯಾಗಬಾರದೆಂದು ಸಮಯಮಿತಿಯ ಬಂಧನವನ್ನು ಪಾಲಿಸುವುದು ಹೆಚ್ಚಿನ ಬಾರಿ ಅನಿವಾರ್ಯವಾಗಿರುತ್ತದೆ. ಇದಕ್ಕಾಗಿ ಜವಾಬ್ದಾರ ಸಾಧಕರೂ ಸ್ವತಃ ಬಹಳಷ್ಟು ಶ್ರಮವಹಿಸಿ ಪ್ರಯತ್ನನಿರತರಾಗಿರುತ್ತಾರೆ. ಅವರು ಸೇವೆಗಾಗಿ ಮೇಲಿಂದ ಮೇಲೆ ನಮ್ಮ ಬೆಂಬತ್ತುವಿಕೆಯನ್ನು ಮಾಡುವ ಹಿಂದಿನ ಈ ಕಾರಣವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆಯೇ ?

೮. ಜವಾಬ್ದಾರ ಸಾಧಕರು ಮೇಲಿಂದ ಮೇಲೆ ತಪ್ಪುಗಳನ್ನು ಏಕೆ ಹೇಳುತ್ತಾರೆ ? ‘ತಪ್ಪುಗಳಿಂದಾಗಿ ನಮ್ಮ ಸಾಧನೆ ಖರ್ಚಾಗಬಾರದು ಮತ್ತು ಗುರುಕಾರ್ಯಕ್ಕಾಗಿ ನಾವು ಬೇಗನೆ ಸಿದ್ಧರಾಗಬೇಕು’, ಎಂಬ ಶುದ್ಧ ಆಶಯ ಅವರ ಮನಸ್ಸಿನಲ್ಲಿರುತ್ತದೆ. ಅವರ ಈ ಪ್ರೀತಿ ನಮಗೆ ಅರ್ಥವಾಗುತ್ತದೆಯೇ ?

೯. ಜವಾಬ್ದಾರ ಸಾಧಕರ ಬಳಿ ಬಹಳ ಸೇವೆಗಳ ಜವಾಬ್ದಾರಿ ಇದ್ದರೂ, ನಮ್ಮಂತೆ ಅವರಿಗೂ ಶರೀರ, ಮನಸ್ಸು ಮತ್ತು ಬುದ್ಧಿ ಇವುಗಳ ಮಿತಿ ಇರುತ್ತದೆ. ಆದರೂ ಅವರು ಗುರುಕಾರ್ಯ ವಾಗಬೇಕೆಂದು ಶರೀರ, ಮನಸ್ಸು ಮತ್ತು ಬುದ್ಧಿಯ ಬಹಳ ತ್ಯಾಗ ಮಾಡುತ್ತಾರೆ. ಈ ಬಗ್ಗೆ ನಮ್ಮ ಮನಸ್ಸಿನಲ್ಲಿ ಅವರ ಬಗ್ಗೆ ಕೃತಜ್ಞತೆಯ ಭಾವ ಇದೆಯೇ ?

೧೦. ನಾವು ಜವಾಬ್ದಾರ ಸಾಧಕರ ಬಗ್ಗೆ ಹಿರಿಯ ಸಾಧಕರ ಬಳಿ ಅಡಚಣೆಯನ್ನು ಹೇಳುತ್ತೇವೆ, ಆಗ ಜವಾಬ್ದಾರ ಸಾಧಕರು ಇಲ್ಲಿಯವರೆಗೆ ನಮಗಾಗಿ ಪ್ರೀತಿಯಿಂದ ಮಾಡಿದ ಕೃತಿಗಳ ಬಗ್ಗೆಯೂ ನಾವು ಹೇಳುತ್ತೇವೆಯೇ ?

೧೧. ನಮಗೆ ನೀಡಿದ ಒಂದು ಸೇವೆಯನ್ನು ಪೂರ್ಣಗೊಳಿಸುವುದು ಸುಲಭವಾಗಿರುತ್ತದೆ; ಆದರೆ ಜವಾಬ್ದಾರ ಸಾಧಕರಂತೆ ಅನೇಕ ಸೇವೆಗಳ ಜವಾಬ್ದಾರಿಯನ್ನು ತೆಗೆದುಕೊಂಡು ಅದನ್ನು ಪೂರ್ಣತ್ವಕ್ಕೆ ಕೊಂಡೊಯ್ಯುವುದು, ಕಠಿಣವಾಗಿರುತ್ತದೆ. ‘ಅವರಲ್ಲಿನ ಯಾವ ಗುಣಗಳಿಂದಾಗಿ ಅವರಿಗೆ ಅದು ಹೊಂದುತ್ತದೆ’, ಎಂಬುದರ ಅಧ್ಯಯನ ಮಾಡಿ ಆ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಲು ನಾವು ಮನಃಪೂರ್ವಕ ಪ್ರಯತ್ನಿಸುತ್ತೇವೆಯೇ ?’

– (ಪೂ.) ಸಂದೀಪ ಆಳಶಿ (೭.೮.೨೦೨೪)