ಧಾರ್ಮಿಕ ಭಾವನೆಗೆ ಧಕ್ಕೆ ತರುವ ‘ಲಂಗೋಟಿ ಮ್ಯಾನ್’ ಚಿತ್ರಕ್ಕೆ ಸೆನ್ಸಾರ್‌ ಬೋರ್ಡ್ ಅನುಮತಿ ನೀಡಬಾರದು ! – ಹಿಂದೂ ಜನಜಾಗೃತಿ ಸಮಿತಿ

ಬೆಂಗಳೂರು – ‘ಲಂಗೋಟಿ ಮ್ಯಾನ್’ ಕನ್ನಡ ಚಲನಚಿತ್ರದ ಟ್ರೇಲರ್‌ನಲ್ಲಿ ಒಬ್ಬ ಜನಿವಾರಧಾರಿ ಮತ್ತು ಲಂಗೋಟಿ ಧರಿಸಿದ ಬ್ರಾಹ್ಮಣ ವ್ಯಕ್ತಿಯನ್ನು ಹಾಸ್ಯಾಸ್ಪದ ರೀತಿಯಲ್ಲಿ ತೋರಿಸಿರುವುದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಈ ಚಲನಚಿತ್ರದ ಮೂಲಕ ಸಮಾಜದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ಹಾಗಾಗಿ ಸೆನ್ಸಾರ್‌ ಬೋರ್ಡ್ ಈ ಚಲನಚಿತ್ರಕ್ಕೆ ಅನುಮತಿ ನೀಡಬಾರದು, ಒಂದು ವೇಳೆ ನೀಡಿದ್ದಲ್ಲಿ ಕೂಡಲೇ ಅದನ್ನು ಹಿಂಪಡೆಯಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಬೆಂಗಳೂರು ಜಿಲ್ಲಾ ಸಮನ್ವಯಕ ಶ್ರೀ. ಶರತ ಕುಮಾರ್‌ ಹೇಳಿದ್ದಾರೆ.

ಅವರು ನೀಡಿದ ಪ್ರತಿಕ್ರಿಯೆ ಮುಂದಿನಂತಿದೆ

೧. ಚಲನಚಿತ್ರ ನಿರ್ದೇಶಕರು-ನಿರ್ಮಾಪಕರು ಇದೇ ರೀತಿ ಅನ್ಯ ಧರ್ಮೀಯರ ಸಾಂಸ್ಕೃತಿಕ ಉಡುಪುಗಳನ್ನು ಹಾಸ್ಯಾಸ್ಪದವಾಗಿ ತೋರಿಸುವ ಧೈರ್ಯವನ್ನು ತೋರಿಸುವರೇ ?

೨. ಸ್ಯಾಂಡಲ್‌ವುಡ್‌ ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತರುವ ಚಿತ್ರಗಳಿಗೆ ಅನುಮತಿ ನೀಡಲಾಗುತ್ತಿದೆ.

೩. ವಾಸ್ತವದಲ್ಲಿ ಇಂತಹ ವಿವಾದಗಳು ಏಳದಂತೆ ಮುತುವರ್ಜಿ ವಹಿಸಿವುದು ಸೆನ್ಸಾರ್‌ ಮಂಡಳಿಯ ಜವಾಬ್ದಾರಿಯಾಗಿದೆ. ಈ ರೀತಿಯ ಚಿತ್ರಗಳಿಗೆ ಅನುಮತಿ ನೀಡುವುದೆಂದರೆ ಮಂಡಳಿಯ ಬೇಜವಾಬ್ದಾರಿಯಾಗಿದೆ. ಹಿಂದೂ ಸಮಾಜ ಇದನ್ನು ಎಂದಿಗೂ ಸಹಿಸುವುದಿಲ್ಲ.