ನಿರಾಶ್ರಿತ ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್ ರ ಭಾರತದಲ್ಲಿ ಇರುವ ಅವಧಿ ಮುಕ್ತಾಯ !
ನವ ದೆಹಲಿ – ಬಾಂಗ್ಲಾದೇಶ ಮತ್ತು ಅಲ್ಲಿನ ರಾಜಕೀಯಕ್ಕೂ ನನಗೆ ಯಾವುದೇ ಸಂಬಂಧವಿಲ್ಲ. ನಾನು ಹಲವು ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದೇನೆ. ನಾನು ಸ್ವೀಡನ್ ಪ್ರಜೆಯಾಗಿ ಭಾರತದಲ್ಲಿ ವಾಸಿಸುತ್ತಿದ್ದೇನೆ. ಬಾಂಗ್ಲಾದೇಶದ ಪ್ರಸ್ತುತ ಸಂಘರ್ಷದ ಮೊದಲು ಭಾರತದಲ್ಲಿ ನನ್ನ ವಾಸ್ತವ್ಯದ ಅವಧಿ ಮುಗಿದಿದೆ. ವರ್ಷ 2017 ರಲ್ಲಿ, ತಾಂತ್ರಿಕ ಕಾರಣಗಳಿಂದ ಅನುಮೋದನೆ (ಅನುಮತಿ)ವಿಳಂಬವಾಗಿತ್ತು; ಆದರೆ ಈಗ ಬಹಳ ಸಮಯ ಕಳೆದಿದೆ. ನಾನು ಸರಕಾರ ಮತ್ತು ಹಿರಿಯ ನಾಯಕರೊಂದಿಗೆ ಪರಿಚಿತಳೆಂದು ಜನರು ಭಾವಿಸುತ್ತಾರೆ; ಆದರೆ ಹಾಗಲ್ಲ. ನನಗೆ ಈಗ ಅನುಮತಿ ಸಿಗದಿದ್ದರೆ, ನಾನು ಸಾಯುತ್ತೇನೆ. ಈಗ ನನಗೆ ಎಲ್ಲಿಯೂ ಹೋಗುವ ಇಚ್ಛೆ ಇಲ್ಲ, ಎಂದು ಬಾಂಗ್ಲಾದೇಶದ ನಿರಾಶ್ರಿತ ಲೇಖಕಿ ತಸ್ಲೀಮಾ ನಸ್ರೀನ್ ಹೇಳಿಕೆ ನೀಡಿದ್ದಾರೆ. ತಸ್ಲೀಮಾ ನಸ್ರೀನ್ 2011 ರಿಂದ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಅವರಿಗೆ ದೇಶದಲ್ಲಿ ಇರುವ ಪರವಾನಗಿಯು ಜುಲೈ 27 ಕ್ಕೆ ಮುಗಿದಿದೆ. ಕೇಂದ್ರ ಸರಕಾರ ಇನ್ನೂ ನವೀಕರಿಸಿಲ್ಲ.