IC-814 Hijack : ಕಂದಹಾರ್ ವಿಮಾನ ಅಪಹರಣದ ಸಮಯದಲ್ಲಿ, ಭಯೋತ್ಪಾದಕರು ಹಿಂದೂ ಪ್ರಯಾಣಿಕರನ್ನು ಇಸ್ಲಾಂ ಸ್ವೀಕರಿಸುವಂತೆ ಹೇಳಿದ್ದರು !

  • ಪ್ರತ್ಯಕ್ಷದರ್ಶಿ ಮಹಿಳೆಯಿಂದ ಮಾಹಿತಿ

  • ‘ಐಸಿ 814: ದಿ ಕಂದಹಾರ ಹೈಜಾಕ್’ ವೆಬ್ ಸರಣಿಯಲ್ಲಿ ಜಿಹಾದಿಗಳ ಪರವಹಿಸಲಾಗಿದೆ !

ನವದೆಹಲಿ – 1999 ರಲ್ಲಿ ಕಂದಹಾರ್ ವಿಮಾನ ಅಪಹರಣವನ್ನು ಆಧರಿಸಿದ `ನೆಟಫ್ಲಿಕ್ಸ’ ಮೇಲಿನ ವೆಬ್ ಸರಣಿಯಲ್ಲಿ ‘ಐಸಿ 814: ದಿ ಕಂದಹಾರ ಹೈಜಾಕ್’ ನಲ್ಲಿ ಜಿಹಾದಿ ಭಯೋತ್ಪಾದಕರ ಹೆಸರುಗಳನ್ನು ಹಿಂದೂ ಎಂದು ತೋರಿಸಲಾಗುತ್ತಿರುವುದು ಬಹಿರಂಗವಾಗುತ್ತಿದ್ದರೂ, ಸಂಪೂರ್ಣ ವೆಬ್ ಸರಣಿಯು ಭಾರತ ವಿರೋಧಿ ಮತ್ತು ಭಯೋತ್ಪಾದಕರ, ಪಾಕಿಸ್ತಾನದ ಪರವಾಗಿದೆಯೆಂದು ಈಗ ಬಹಿರಂಗವಾಗುತ್ತಿದೆ. ‘ಭಯೋತ್ಪಾದಕರು ಪ್ರಯಾಣಿಕರನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಹೇಳಿದ್ದರು, ಎಂದು ಇಂಡಿಯನ್ ಏರ್‌ಲೈನ್ಸ್ ವಿಮಾನದಲ್ಲಿ ಪ್ರತ್ಯಕ್ಷದರ್ಶಿಯಾಗಿರುವವರು ಈ ಮಾಹಿತಿ ನೀಡಿದ್ದಾರೆ.

ಈ ವಿಮಾನದಲ್ಲಿದ್ದ ಪ್ರವಾಸಿ ಪೂಜಾ ಕಟಾರಿಯಾ ಎ.ಎನ್‌.ಐ.ಗೆ ಮಾಹಿತಿ ನೀಡುತ್ತಾ, ಈ ವಿಮಾನದಲ್ಲಿ ಐವರು ಭಯೋತ್ಪಾದಕರು ಇದ್ದರು. ಈ ವಿಮಾನವು ಕಾಠ್ಮಂಡುವಿನಿಂದ ದೆಹಲಿಗೆ ಹೊರಟಿತ್ತು. ಹಾರಾಟದ ಅರ್ಧ ಗಂಟೆಯ ಬಳಿಕ ಭಯೋತ್ಪಾದಕರು ವಿಮಾನ ಅಪಹರಣವಾಗಿದೆಯೆಂದು ಮಾಹಿತಿ ನೀಡಿದರು. ಅಪಹರಣದ ಸುದ್ದಿ ಕೇಳಿ ನಾವು ಹೆದರಿದೆವು. ಭಯೋತ್ಪಾದಕರು ನಮಗೆ ತಲೆ ಕೆಳಗೆ ಹಾಕಲು ಹೇಳಿದರು. ನಾವು ಅಫಘಾನಿಸ್ತಾನದ ಕಂದಹಾರಗೆ ಯಾವಾಗ ತಲುಪಿದೆವು ಎನ್ನುವುದು ತಿಳಿಯಲೇ ಇಲ್ಲ. ಈ ಘಟನೆಯಿಂದ ಜನರ ಆರೋಗ್ಯ ಹದಗೆಟ್ಟಿತು. ಜನರು ಭಯಭೀತರಾದರು. ಇದೆಲ್ಲವನ್ನೂ ನೋಡಿ ಬರ್ಗರ ಹೆಸರಿನ ಒಬ್ಬ ಅತಿರೇಕಿ ಸ್ವಲ್ಪ ಮೆತ್ತಗಾದನು. ಅವನು ಜನರಿಗೆ ಸಹಾಯ ಮಾಡಿದನು. ಅವನು ಜನರಿಗೆ ಅಂತಾಕ್ಷರಿ (ಒಂದು ಶಬ್ದದ ಆಧಾರದ ಮೇಲೆ ಹಾಡನ್ನು ಹಾಡುವುದು ಮತ್ತು ಆ ಹಾದಿನ ಕೊನೆಯ ಅಕ್ಷರದ ಮೇಲೆ ಮತ್ತೊಬ್ಬ ವ್ಯಕ್ತಿಯು ಮತ್ತೊಂದು ಹಾಡು ಹಾಡುವುದು)ಆಡುವಂತೆ ಹೇಳಿದನು. ಮತ್ತೊಬ್ಬ ಭಯೋತ್ಪಾದಕನ ಹೆಸರು ‘ಡಾಕ್ಟರ್’ ಎಂದು ಇತ್ತು ಆತ ಇಸ್ಲಾಂ ಧರ್ಮ ಸ್ವೀಕರಿಸುವುದಕ್ಕಾಗಿ ಅನೇಕ ಭಾಷಣಗಳನ್ನು ಮಾಡಿದನು. ವಿಮಾನದಲ್ಲಿ ಉಪಸ್ಥಿತರಿದ್ದ ಇತರ 2 ಭಯೋತ್ಪಾದಕರನ್ನು `ಭೋಲಾ’ ಮತ್ತು ` ಶಂಕರ’ ಈ ಹೆಸರಿನಿಂದ ಕರೆಯುತ್ತಿದ್ದರು. ಯಾವಾಗ ವಿಮಾನ ಅಮೃತಸರದಲ್ಲಿ ಇಳಿಯಿತೋ ಆಗ ಭಾರತ ಸರಕಾರ ಕಮಾಂಡೋ ಕಾರ್ಯಾಚರಣೆ ನಡೆಸಬಹುದಿತ್ತು, ಮತ್ತು ವಿಮಾನ ಭಾರತದ ಗಡಿಯಿಂದ ಹೊರಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಂತಹ ದೇಶದ್ರೋಹಿ ವೆಬ್ ಸರಣಿಗಳನ್ನು ಏಕೆ ನಿರ್ಬಂಧಿಸುವುದಿಲ್ಲ ? ಇಂತಹ ಪ್ರಕರಣದಲ್ಲಿ ಸರಕಾರ ಯಾವಾಗಲೂ ಮೃದುಧೋರಣೆಯನ್ನು ತೆಗೆದುಕೊಳ್ಳುತ್ತಿದೆಯೆಂದು ಜನತೆಗೆ ಅನಿಸುತ್ತದೆ !