ತುರ್ತುಪರಿಸ್ಥಿತಿಯ ಮೇಲಾಧಾರಿತ `ಎಮರ್ಜೆನ್ಸಿ’ ಚಲನಚಿತ್ರದ ಮೇಲೆ ಜಬಲಪುರ ಉಚ್ಚನ್ಯಾಯಾಲದಿಂದ ನಿರ್ಬಂಧ

ಸಿಖ್ ಸಂಘಟನೆಯ ವಾದವನ್ನು ಕೇಳಿದ ಬಳಿಕ ನಿರ್ಣಯ ನೀಡುವುದಾಗಿ ಸೆನ್ಸಾರ ಮಂಡಳಿಯ ಆದೇಶ !

ಜಬಲ್ಪುರ (ಮಧ್ಯಪ್ರದೇಶ) – ನಟಿ ಮತ್ತು ಭಾಜಪ ಸಂಸದೆ ಕಂಗನಾ ರಾಣಾವತ ಇವರು ಪ್ರಮುಖ ಪಾತ್ರದಲ್ಲಿರುವ `ಎಮರ್ಜೆನ್ಸಿ’ ಚಲನಚಿತ್ರಕ್ಕೆ ಅನುಮತಿ ಪಡೆಯುವುದರಲ್ಲಿ ದಿನದಿಂದ ದಿನಕ್ಕೆ ಅಡೆತಡೆಗಳು ಹೆಚ್ಚಾಗುತ್ತಿವೆ. ಒಂದೆಡೆ ಕಾಂಗ್ರೆಸ್ಸಿನ ತುರ್ತುಪರಿಸ್ಥಿತಿಯ ಕಾಲದ ತಿರುಚಿದ ಸತ್ಯವನ್ನು ತೆರೆದಿಡುವ ಈ ಚಲನಚಿತ್ರಕ್ಕೆ ಅದರ ನಾಯಕರಿಂದ ಎಲ್ಲಾ ಶಕ್ತಿಯನ್ನು ಉಪಯೋಗಿಸಿ ವಿರೋಧಿಸಲಾಗುತ್ತಿದೆ. ಮತ್ತೊಂದೆಡೆ, ಈಗ ಎರಡು ಸಿಖ್ ಸಂಘಟನೆಗಳು ಈ ಚಲನಚಿತ್ರದ `ಟ್ರೇಲರ್’ (ಜಾಹೀರಾತು) ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಜಬಲಪುರ ಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ನ್ಯಾಯಾಲಯವು ಚಲನಚಿತ್ರದ ಪ್ರಸಾರವನ್ನು ನಿರ್ಬಂಧಿಸಿದೆ. ಸಿಖ್ ಸಮುದಾಯದ ಪ್ರತಿನಿಧಿಗಳ ವಾದವನ್ನು ಮೊದಲು ಕೇಳಬೇಕು. ತದನಂತರ ಚಲನಚಿತ್ರಕ್ಕೆ ಅನುಮತಿ ನೀಡಬೇಕು ಎಂದು ನ್ಯಾಯಾಲಯವು ಸೆನ್ಸಾರ್ ಮಂಡಳಿಗೆ ಆದೇಶ ನೀಡಿದೆ.

1. ‘ಜಬಲ್‌ಪುರ ಸಿಖ್‌ ಸಂಗತ್’ ಮತ್ತು ‘ಶ್ರೀ ಗುರುಸಿಂಗ ಸಭಾ ಇಂದೋರ’ ಇವರು ಅರ್ಜಿ ಸಲ್ಲಿಸಿ ಚಲನಚಿತ್ರವನ್ನು ನಿರ್ಬಂಧಿಸುವಂತೆ ಒತ್ತಾಯಿಸಿದ್ದರು.

2. ಬೋರ್ಡ್‌ನ ಡೆಪ್ಯುಟಿ ಸಾಲಿಸಿಟರ್ ಜನರಲ್ ಪುಷ್ಪೇಂದ್ರ ಯಾದವ್ ಅವರು ಮುಖ್ಯ ನ್ಯಾಯಮೂರ್ತಿ ಸಂಜೀವ ಸಚ್‌ದೇವ ಮತ್ತು ನ್ಯಾಯಮೂರ್ತಿ ವಿನಯ ಸರಾಫ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ಉತ್ತರಿಸಿದರು.

3. ಯಾದವ ಮಾತನಾಡಿ, ಚಲನಚಿತ್ರಕ್ಕೆ ಕೇವಲ ಆನ್ ಲೈನ್ ಪ್ರಮಾಣಪತ್ರದ ಸಂಖ್ಯೆಯನ್ನು ಮಾತ್ರ ನೀಡಲಾಗಿದೆ. ಇತರೆ ಪ್ರಮಾಣ ಪತ್ರಗಳನ್ನು ನೀಡುವುದು ಬಾಕಿ ಉಳಿದಿದೆ ಎಂದು ಹೇಳಿದ್ದಾರೆ.

4. ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ ಚಲನಚಿತ್ರವನ್ನು ಈಗಾಗಲೇ ನಿಷೇಧಿಸಲಾಗಿದೆ.

ಸಂಪಾದಕೀಯ ನಿಲುವು

  • ಭಾರತದಲ್ಲಿ ಕಾಂಗ್ರೆಸ್ ಘೋಷಿಸಿದ ತುರ್ತು ಪರಿಸ್ಥಿತಿಯು ಕರಾಳ ಇತಿಹಾಸವಾಗಿದೆ. ಆದುದರಿಂದ ಈ ಸತ್ಯವನ್ನು ಜನತೆಗೆ ತಲುಪಿಸಲು ಭಾಜಪ ಸರಕಾರ ಮುಂದಾಗಬೇಕಿದೆ!
  • ಹಿಂದೂ ಧರ್ಮದ ಕಟುವಾದ ವಿಡಂಬನೆಗಳನ್ನು ಮಾಡಿದ ನೂರಾರು ಚಲನಚಿತ್ರಗಳು ಬಂದಿವೆ; ಆದರೆ ಹಿಂದೂಗಳು ನ್ಯಾಯಸಮ್ಮತವಾಗಿ ವಿರೋಧಿಸುತ್ತಿದ್ದರೂ ಅದನ್ನು ಏಕೆ ಗಮನಿಸುತ್ತಿಲ್ಲ ಎಂಬುದಕ್ಕೆ ವ್ಯವಸ್ಥೆಯು ಉತ್ತರವನ್ನು ನೀಡಬೇಕಾಗಿದೆ !