NETFLIX Controversy : ಭವಿಷ್ಯದಲ್ಲಿ ನಾವು ಕಲಾ ಕೃತಿಯಲ್ಲಿ ರಾಷ್ಟ್ರೀಯ ಭಾವನೆಯ ಗೌರವ ಕಾಪಾಡುವೆವು !

ವಿವಾದಿತ ವೆಬ್ ಸೀರೀಜ್ ಪ್ರಕರಣ; ನೆಟಪ್ಲಿಕ್ಸನಿಂದ ಸರಕಾರಕ್ಕೆ ಆಶ್ವಾಸನೆ !

ನವದೆಹಲಿ – ‘ನೆಟಪ್ಲಿಕ್ಸ’ನ ವೆಬ್ ಸೀರೀಜ್ ‘ಐಸಿ ೮೧೪ : ದ ಕಂಧಾರ ಹೈಜಾಕ್’ನಲ್ಲಿ ಜಿಹಾದಿ ಭಯೋತ್ಪಾದಕರ ನಿಜವಾದ ಹೆಸರು ಮರೆಮಾಚಿ ಅವರಿಗೆ ಹಿಂದೂ ಹೆಸರುಗಳು ನೀಡಿರುವುದರಿಂದ ಕೇಂದ್ರ ಸರಕಾರವು ‘ನೆಟಪ್ಲಿಕ್ಸ’ಗೆ ಸಮಂನ್ಸ ಕಳುಹಿಸಿ ಕರೆಸಿತ್ತು. ಈ ಕಂಪನಿಯ ಜೊತೆಗೆ ನಡೆದಿರುವ ಸಭೆಯಲ್ಲಿ ನೆಟಪ್ಲಿಕ್ಸ ನ ಭಾರತೀಯ ಮುಖ್ಯಸ್ಥೆ ಮೋನಿಕಾ ಶೇರಗಿಲ ಇವರು ‘ಭವಿಷ್ಯದಲ್ಲಿ ಪ್ರಸ್ತುತ ನಡೆಸಲಾಗುವ ಕಲಾಕೃತಿಯ ಬಗ್ಗೆ ನಾವು ಕಾಳಜಿ ವಹಿಸುವೆವು ಹಾಗೂ ರಾಷ್ಟ್ರೀಯ ಭಾವನೆಯನ್ನು ಗೌರವಿಸುವೆವು’, ಎಂದು ಆಶ್ವಾಸನೆ ನೀಡಿದ್ದಾರೆ.

ಈ ವೆಬ್ ಸೀರೀಜ್ ನಲ್ಲಿ ೧೯೯೯ ರಲ್ಲಿ ಭಾರತದ ವಿಮಾನ ಅಪಹರಣದ ಕಥೆ ತೋರಿಸಲಾಗಿದೆ. ಈ ಕಥೆಯಲ್ಲಿ ಅಪಹರಣದಲ್ಲಿ ಸಹಭಾಗಿ ಆಗಿರುವ ಭಯೋತ್ಪಾದಕರ ಹೆಸರುಗಳು ಚೀಫ್, ಡಾಕ್ಟರ್, ಬರ್ಗರ್, ಭೋಲಾ ಮತ್ತು ಶಂಕರ ಎಂದು ಹೆಸರುಗಳು ಇರಿಸಲಾಗಿದೆ. ಇದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟೀಕೆಗಳ ಸುರಿಮಳೆ ಆದ ನಂತರ ಕೇಂದ್ರ ಸರಕಾರವು ಹಸ್ತಕ್ಷೇಪ ಮಾಡುತ್ತಾ ನೆಟಪ್ಲಿಕ್ಸಗೆ ಸಮನ್ಸ್ ವಿಧಿಸಿತು.