ಜೌನಪುರ (ಉತ್ತರಪ್ರದೇಶ) – ಇಲ್ಲಿಯ ಒಂದು ಗ್ರಾಮದಲ್ಲಿ ‘ಲವ್ ಜಿಹಾದ್’ನ ಪ್ರಕರಣ ಬೆಳಕಿಗೆ ಬಂದಿದೆ. ನನ್ನ ಮಗಳನ್ನು ಓರ್ವ ಮುಸಲ್ಮಾನನು ಅಪಹರಣ ಮಾಡಿದ್ದಾನೆಂದು ಹುಡುಗಿಯ ತಂದೆ ನೀಡಿದ್ದಾರೆ. ಪೊಲೀಸ ಠಾಣೆಯ ಪ್ರಭಾರಿ ದಿವ್ಯ ಪ್ರಕಾಶ ಸಿಂಹ ಇವರು, ಈ ದೂರಿನ ಆಧಾರದಲ್ಲಿ ಆರೋಪಿಯ ವಿರುದ್ಧ ದೂರು ದಾಖಲಿಸಲಾಗಿದೆ. ‘ಸಂತ್ರಸ್ತ ಹುಡುಗಿಯು ವಂಚನೆಯ ಆರೋಪ ಮಾಡಿದರೆ ಇದು ‘ಲವ್ ಜಿಹಾದ’ದ ಪ್ರಕರಣ ಎಂದು ಸ್ಪಷ್ಟವಾಗುವುದು’, ಎಂದು ಅವರು ಹೇಳಿದರು.
ಆಗಸ್ಟ್ ೩೧ ರಂದು ಬುರ್ಖಾಧರಿಸಿರುವ ಓರ್ವ ಹಿಂದೂ ಯುವತಿ ಆಕೆಯ ಮುಸಲ್ಮಾನ ಪ್ರಿಯಕರನ ಜೊತೆಗೆ ವಿವಾಹವಾಗಲು ನ್ಯಾಯಾಲಯಕ್ಕೆ ತಲುಪಿದಳು, ಜೌನಪುರದ ನ್ಯಾಯಾಲಯದಲ್ಲಿ ಸಂಚಲನ ಮೂಡಿತು. ಹುಡುಗಿಯ ಹಣೆಯ ಮೇಲೆ ಕುಂಕುಮ ಕೂಡ ಇತ್ತು. ಹುಡುಗಿ ಅಪ್ರಾಪ್ತ ಇರುವುದೆಂದು ತಿಳಿಯುತ್ತಲೇ ಅಲ್ಲಿ ಉಪಸ್ಥಿತ ಇರುವ ಜನರಿಗೆ ಇದರಲ್ಲಿ ಏನು ಅಪಚಾರ ಇದೆ ಎಂದು ಅನುಮಾನ ಬಂದಿತು. ಪೊಲೀಸರು ನ್ಯಾಯಾಲಯಕ್ಕೆ ಬಂದು ಇಬ್ಬರನ್ನೂ ವಶಕ್ಕೆ ಪಡೆದರು.
ಆರೋಪಿ ಮುಸಲ್ಮಾನ ಯುವಕನ ಅಪ್ರಾಪ್ತ ಹಿಂದೂ ಯುವತಿಯ ಜೊತೆಗೆ ಪ್ರೇಮಸಂಬಂಧ ಇತ್ತು ಆಗಸ್ಟ್ ೨೯ ರಂದು ಮುಸಲ್ಮಾನ ಯುವಕನು ಹಿಂದೂ ಹುಡುಗಿಯ ಅಪಹರಣ ಮಾಡಿದ್ದನು. ಹುಡುಗಿಯ ತಂದೆಯು ಹುಡುಗನ ವಿರುದ್ಧ ಅಪಹರಣದ ದೂರು ದಾಖಲಿಸಿದ್ದರು. ಪೊಲೀಸರು ಇಬ್ಬರನ್ನು ಹುಡುಕುತ್ತಿದ್ದರು. ಇದೇ ಕಾಲಾವಧಿಯಲ್ಲಿ ಆರೋಪಿ ಮುಸಲ್ಮಾನ ಯುವಕ ಬುರ್ಖಾಧಾರಿ ಸಂತ್ರಸ್ತ ಹುಡುಗಿಯ ಜೊತೆಗೆ ನ್ಯಾಯಾಲಯಕ್ಕೆ ತಲುಪಿದ್ದನು. ಜನರು ಅವರನ್ನು ನೋಡುತ್ತಲೇ ಅಲ್ಲಿ ಗೊಂದಲ ಸೃಷ್ಟಿಯಾಯಿತು ಮತ್ತು ಇದರ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು. ಈ ಪ್ರಕರಣದಲ್ಲಿ ತನಿಖೆ ಮುಂದುವರೆದಿದೆ ಎಂದು ಪೊಲೀಸ ಅಧಿಕಾರಿ ದಿವ್ಯ ಪ್ರಕಾಶ ಸಿಂಹ ಇವರು ಹೇಳಿದರು.
ಸಂಪಾದಕೀಯ ನಿಲುವುಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಇದ್ದರೂ ಕೂಡ ಲವ್ ಜಿಹಾದಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳದ ಕಾರಣ ಅಲ್ಲಿ ಮೇಲಿಂದ ಮೇಲೆ ಈ ರೀತಿಯ ಕೃತ್ಯ ನಡೆಸುವ ಧೈರ್ಯ ಮಾಡುತ್ತಾರೆ. ಇದು ಪೊಲೀಸರಿಗೆ ಲಜ್ಜಾಸ್ಪದ ! |