ಬರೇಲಿ (ಉತ್ತರಪ್ರದೇಶ) – ಇಲ್ಲಿ ಆಲಾ ಹಜರತ್ ನ ಉರುಸನಲ್ಲಿ (ಮುಸಲ್ಮಾನರ ಧಾರ್ಮಿಕ ಮೆರವಣಿಗೆಯಲ್ಲಿ) ಸಹಭಾಗಿಯಾಗಲು ಬಂದಿದ್ದ ಕೆಲವು ಯುವಕರು ಶುಕ್ರವಾರ ಆಗಸ್ಟ್ ೩೦ ರಂದು ಮಧ್ಯಾಹ್ನ ಖಲೀಲ್ ವೃತ್ತದಲ್ಲಿ ನಮಾಜಗಾಗಿ ರಸ್ತೆಯಲ್ಲಿ ಕುಳಿತಾಗ ಪೊಲೀಸರು ಅವರನ್ನು ಎಬ್ಬಿಸಿದರು. ‘ಇದು ಯುವಕರು ರಸ್ತೆಯ ಮೇಲೆ ನಮಾಜ ಮಾಡುವುದಕ್ಕಾಗಿ ಕುಳಿತಿರುವುದರಿಂದ ಸಂಚಾರ ದಟ್ಟಣೆ ನಿರ್ಮಾಣವಾಗಿತ್ತು. ಅದನ್ನು ಪರಿಹರಿಸಲು ಈ ಯುವಕರನ್ನು ಅಲ್ಲಿಂದ ಓಡಿಸಿದರು. ಪಕ್ಕದಲ್ಲಿಯೇ ಉರುಸ್ ಆಚರಿಸುವ ಮೈದಾನ ಇರುವುದರಿಂದ ಅವರಿಗೆ ಅಲ್ಲೇ ನಮಾಜ ಮಾಡಲು ಹೇಳಲಾಯಿತು, ಎಂದು ಪೊಲೀಸರು ಹೇಳಿದರು. (ಖಾಲಿ ಮೈದಾನ ಲಭ್ಯ ಇರುವಾಗಲೂ ಕೂಡ ಮುಸಲ್ಮಾನರೂ ರಸ್ತೆಯಲ್ಲಿ ನಮಾಜ ಮಾಡುತ್ತಾರೆ. ಇದರಿಂದ ಅವರು ಉದ್ದೇಶಪೂರ್ವಕ ಇಂತಹ ಕೃತಿಗಳು ಮಾಡುತ್ತಾರೆ ಎಂದು ಕಂಡು ಬರುತ್ತದೆ ! – ಸಂಪಾದಕರು)
೧. ಅಖಿಲ ಭಾರತೀಯ ರಝಾ ಕೃತಿ ಸಮಿತಿಯ ಯುವ ಶಾಖೆಯ ಅಧ್ಯಕ್ಷ ಮೌಲಾನ ಅಬ್ದುಲ್ ರಝಾ ಕಾದರಿ ಇವರು ಈ ಪ್ರಕರಣದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಕೋತವಾಲಿ ಪೋಲಿಸರು ಅಸಭ್ಯವಾಗಿ ವರ್ತಿಸಿದ್ದಾರೆ, ಆದ್ದರಿಂದ ಆರೋಪಿ ಪೊಲೀಸರನ್ನು ಅಮಾನತು ಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ. (ಪೊಲೀಸರು ಕಾನೂನಿನ ಪ್ರಕಾರ ಕೃತಿ ಮಾಡಿದರು ಹಾಗೂ ಮುಸಲ್ಮಾನರು ಕಾನೂನಿನ ವಿರುದ್ಧ ವರ್ತಿಸಿರುವುದು. ಹೀಗೆ ಇರುವಾಗಲೂ ಕೂಡ ಅವರ ಪರವಾಗಿ ಮಾತನಾಡುವ ಕಾದರಿ ಇವರ ಮೇಲೆ ಮೊದಲು ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ ! – ಸಂಪಾದಕರು)
೨. ಉರುಸ್ ಕುರಿತು ಬಿದ್ದಿ ಪತ್ರಕಗಳು ಇಲ್ಲಿ ಅಂಟಿಸಲಾಗಿದ್ದವು. ಅದನ್ನು ರಾತ್ರಿಯ ಸಮಯದಲ್ಲಿ ಹರಿಯಲಾಗಿದೆ. ಸಂಬಂಧಿತರ ಮೇಲೆ ಕ್ರಮ ಕೈಗೊಳ್ಳಬೇಕು, ಎಂದು ಕೂಡ ಕಾದರಿ ಇವರು ಆಗ್ರಹಿಸಿದ್ದಾರೆ.
ಮುಸಲ್ಮಾನರ ಮೆರವಣಿಗೆಗೆ ಹಿಂದುಗಳ ವಿರೋಧ
‘ಖಜೂರಿಯ ಜುಲ್ಫಿಕಾರ್’ ಪ್ರದೇಶದಲ್ಲಿ ಮಧ್ಯಾಹ್ನ ಮಸೀದಿಯ ಮೇಲೆ ಹೋದಿಸಿರುವ ಚಾದರದ ಮೆರವಣಿಗೆ ನಡೆಸಲಾಗಿರುವುದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮದಲ್ಲಿ ವಾಸಿಸುವ ಹಿಂದೂ ಜನಾಂಗದವರು ಇದನ್ನು ‘ಹೊಸ ಪರಂಪರೆ’ ಎಂದು ವಿರೋಧಿಸಿದರು. ಇಜ್ಜತನಗರ್ ಪೊಲೀಸ ಠಾಣೆಯ ಪೊಲೀಸ ಅಧಿಕಾರಿ ಯಶ ಪಾಲಸಿಂಹ ಇವರು, ಗ್ರಾಮದಿಂದ ಚಾದರದ ಮೆರವಣಿಗೆ ಬಂದಿಲ್ಲ. ಅದನ್ನು ನಡೆಸಲು ಕೆಲವರು ಪ್ರಯತ್ನ ಮಾಡಿದ ನಂತರ ಅದಕ್ಕೆ ವಿರೋಧ ವ್ಯಕ್ತವಾಯಿತು. ನಂತರ ಗ್ರಾಮದ ೩೦೦ ಮೀಟರ್ ಒಳಗೆ ಯಾವುದೇ ಮೆರವಣಿಗೆ ಬರುವುದಿಲ್ಲ ಎಂದು ಎರಡು ಪಕ್ಷದವರು ಒಪ್ಪಿಕೊಂಡರು ಎಂದು ಹೇಳಿದರು.
ಸಂಪಾದಕೀಯ ನಿಲುವುಸಂಪೂರ್ಣ ದೇಶದಲ್ಲಿ ಈ ರೀತಿಯ ಕೃತಿಗಳ ಮೇಲೆ ನಿಷೇಧ ಹೇರುವುದಕ್ಕಾಗಿ ಆದೇಶ ನೀಡಬೇಕು. ಧಾರ್ಮಿಕ ಕೃತಿಗಳ ಮೂಲಕ ಸಂಚಾರ ದಟ್ಟಣೆ ಮಾಡಿ ಯಾರಾದರೂ ಜಾತ್ಯತೀತ ದೇಶದಲ್ಲಿ ಜನರಿಗೆ ತೊಂದರೆ ನೀಡುತ್ತಿದ್ದರೆ, ಅವರ ಮೇಲೆ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ ! |