ಉತ್ತರ ಪ್ರದೇಶದ ಮದರಸಾದಲ್ಲಿ 100 ರೂಪಾಯಿಗಳ ನಕಲಿ ನೋಟುಗಳ ಮುದ್ರಣ !

ಮಹಾಕುಂಭಮೇಳದಲ್ಲಿ ಈ ನೋಟುಗಳನ್ನು ಚಲಾವಣೆಗೆ ತರಲು ಪ್ರಯತ್ನ !

ಪ್ರಯಾಗರಾಜ (ಉತ್ತರ ಪ್ರದೇಶ) – ಇಲ್ಲಿ ಒಂದು ಮದರಸಾದಲ್ಲಿ ನಕಲಿ ನೋಟು ಮುದ್ರಿಸುವ ಕಾರ್ಖಾನೆ ಪತ್ತೆಯಾಗಿದೆ. ಮದರಸಾದಲ್ಲಿ ಕಲಿಯುವ ವಿದ್ಯಾರ್ಥಿಗಳು ಮನೆಗೆ ತೆರಳಿದ ನಂತರ ಇಲ್ಲಿನ ಒಂದು ಕೊಠಡಿಯಲ್ಲಿ ಇರುವ ಕಾರ್ಖಾನೆಯಲ್ಲಿ 100 ರೂಪಾಯಿ ನೋಟುಗಳನ್ನು ಮುದ್ರಿಸಲಾಗುತ್ತಿತ್ತು. ರಾತ್ರಿಯಿಡೀ ಈ ಸ್ಥಳದಲ್ಲಿ ಮುದ್ರಣದ ಕಾರ್ಯ ನಡೆಯುತ್ತಿತ್ತು. ಈ ಪ್ರಕರಣದ ಮಾಹಿತಿ ಸಿಕ್ಕ ನಂತರ ಪೊಲೀಸರು ದಾಳಿ ನಡೆಸಿ 4 ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ಮದರಸಾದ ಮುಖ್ಯೋಪಾಧ್ಯಾಯ ಮೌಲ್ವಿ (ಇಸ್ಲಾಮಿಕ್ ಧಾರ್ಮಿಕನಾಯಕ) ಮುಹಮ್ಮದ್ ತಫ್ಸೀರುಲ್, ಆರಿಫೀನ್ ಜೊತೆಗೆ ಮುಹಮ್ಮದ್ ಅಫ್ಜಲ್ ಹಾಗೆಯೇ ಮುಹಮ್ಮದ್ ಸಾಹಿದ್ ಮತ್ತು ಜಹೀರ್ ಖಾನ್ ಅಲಿಯಾಸ್ ಅಬ್ದುಲ್ ಜಾಹಿರ್ ಸೇರಿದ್ದಾರೆ. ಘಟನೆಯ ಸ್ಥಳದಿಂದ ಅಪಾರ ಪ್ರಮಾಣದ ನಕಲಿ ನೋಟುಗಳು ಮತ್ತು ನೋಟುಗಳನ್ನು ಮುದ್ರಿಸುವ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಖಾನೆ 3 ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿತ್ತು. ಆರೋಪಿಗಳು ಮುಂದಿನ ವರ್ಷ ಇಲ್ಲಿ ಜರಗುವ ಮಹಾಕುಂಭ ಮೇಳದಲ್ಲಿ ಈ ನಕಲಿ ನೋಟುಗಳನ್ನು ದೊಡ್ಡ ಪ್ರಮಾಣದಲ್ಲಿ ಚಲಾವಣೆಗೆ ತರುವ ಸಿದ್ದತೆಯಲ್ಲಿ ಇದ್ದರು.

ಸಂಪಾದಕೀಯ ನಿಲುವು

ಮದರಸಾಗಳು ಜಿಹಾದಿ ಭಯೋತ್ಪಾದಕರ ಅಡ್ಡೆಯಾಗಿವೆ. ಇಲ್ಲಿ ಆಯುಧಗಳು ಪತ್ತೆಯಾಗುತ್ತವೆ, ಹಾಗೆಯೇ ಅತ್ಯಾಚಾರ ಮಾಡಲಾಗುತ್ತದೆ. ಈಗ ನಕಲಿ ನೋಟುಗಳನ್ನೂ ಮುದ್ರಿಸಲಾಗುತ್ತಿದೆ. ಇದನ್ನು ನೋಡಿದರೆ ದೇಶದ ಎಲ್ಲಾ ಮದರಸಾಗಳನ್ನು ಮುಚ್ಚುವುದು ಯೋಗ್ಯ ಅನ್ನಿಸುವುದು !