‘ಆಲ್ ಇಂಡಿಯಾ ಮುಸ್ಲಿಂ ಜಮಾತ್’ ಸಂಘಟನೆಯ ಬೇಡಿಕೆ
ಬರೇಲಿ (ಉತ್ತರಪ್ರದೇಶ) – ಇಸ್ಲಾಂ ಧರ್ಮದ ಸಂಸ್ಥಾಪಕ ಮಹಮ್ಮದ್ ಪೈಗಂಬರ್ ಇವರನ್ನು ಅವಮಾನಿಸುವ ಜನರಿಗೆ ಕಠಿಣ ಶಿಕ್ಷೆ ವಿಧಿಸಲು ‘ಪೈಗಂಬರ್-ಎ-ಇಸ್ಲಾಂ ಮಸೂದೆ’ ತರಲು ಮುಸಲ್ಮಾನ ಸಂಘಟನೆಗಳು ಆಗ್ರಹಿಸಿವೆ. ಇಲ್ಲಿ ‘ಆಲ್ ಇಂಡಿಯಾ ಮುಸ್ಲಿಂ ಜಮಾತ್’ನ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಈ ಬೇಡಿಕೆ ಮಾಡಲಾಯಿತು. ಅವರ ಪ್ರಕಾರ, ಈ ಕಾನೂನಿನಿಂದ ಇತರ ಎಲ್ಲಾ ಧರ್ಮದ ಪ್ರಮುಖ ಮತ್ತು ವ್ಯಕ್ತಿಯ ವಿರುದ್ಧ ಮಾಡಿರುವ ಅಪಮಾನಕಾರಿ ಟೀಕೆಗಳ ಮೇಲೆ ಕೂಡ ನಿಷೇಧ ಬರುವುದು ಎಂದು ಹೇಳಿದೆ. ಮೌಲಾನ ಶಹಬುದ್ದೀನ್ ರಜವಿ ಬರೆಲವಿ ಇವರು ಸರಕಾರ ಮತ್ತು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡುತ್ತಾ, ಬಹಳಷ್ಟು ಬಾರಿ ಯಾರಾದರೂ ಪೈಗಂಬರ್ ಇಸ್ಲಾಂ ಇವರ ಘನತೆಗೆ ಚ್ಯುತಿ ತರುತ್ತಾರೆ; ಆದರೆ ಎಲ್ಲಾ ಜನರು ಶಾಂತವಾಗಿ ಇರುತ್ತಾರೆ ಮತ್ತು ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ. (ಈ ರೀತಿಯ ಅವಮಾನದ ನಂತರ ದೇಶದಲ್ಲಿ ಮುಸಲ್ಮಾನರು ಎಂದಿಗು ಶಾಂತವಾಗಿ ಇರುವುದಿಲ್ಲ, ಅವರು ಕಾನೂನು ಕೈಗೆತ್ತಿಕೊಳ್ಳುತ್ತಾರೆ, ಇದು ಇಲ್ಲಿಯವರೆಗೆ ಕಂಡು ಬಂದಿದೆ ! – ಸಂಪಾದಕರು) ಆದ್ದರಿಂದ ಸಂಸತ್ತು ಅಥವಾ ವಿಧಾನಸಭೆಯಲ್ಲಿ ‘ಪೈಗಂಬರ್-ಎ-ಇಸ್ಲಾಂ ಮಸೂದೆ’ ತರಬೇಕು, ಅದರಿಂದ ಯಾರು ಕೂಡ ಅದರ ಗೌರವ ಕಡಿಮೆ ಮಾಡುವ ಪ್ರಯತ್ನ ಮಾಡುವುದಿಲ್ಲ. ಸರಕಾರ ಮನಸ್ಸು ಮಾಡಿದರೆ, ಈ ಮಸೂದೆಯ ಕರಡು ಯಾವುದೇ ಹೆಸರಿನಿಂದ ಜಾರಿಗೊಳಿಸಬಹುದು. ಪೈಗಂಬರ ಸಾಹೇಬರ ಅವಮಾನ ಮಾಡುವವರ ವಿರುದ್ಧ ಕಠಿಣ ಕಾನೂನು ಇರಬೇಕು. ಈ ಕಾನೂನು ಯಾವುದೇ ಧರ್ಮದ ಪ್ರಮುಖರು ಅಥವಾ ದೇವತೆಯ ಅವಮಾನ ಮಾಡುವವರ ಮೇಲೆ ಕ್ರಮ ಕೈಗೊಳ್ಳುವ ಹಾಗೆ ಇರಬೇಕು. ಪ್ರಸ್ತುತ ಕಾನೂನಿನಲ್ಲಿ ಕೊರತೆ ಇದೆ; ಆದ್ದರಿಂದಲೇ ಧಾರ್ಮಿಕ ಹಿಂಸಾಚಾರದ ಘಟನೆಗಳು ಘಟಿಸುತ್ತವೆ ಎಂದು ಹೇಳಿದರು.
‘ಮುಸಲ್ಮಾನರಿಗೆ ತೊಂದರೆ ನೀಡಲಾಗುತ್ತಿದೆಯಂತೆ !’
ಕಳ್ಳನಿಗೊಂದು ಪಿಳ್ಳೆ ನೆವ ಎಂದು ಹೇಳುವ ಬರೆಲವಿ ! ಭಾರತದಲ್ಲಿ ಮುಸಲ್ಮಾನರಿಗೆ ತೊಂದರೆ ನೀಡಲಾಗುತ್ತಿಲ್ಲ ಮುಸಲ್ಮಾನರೇ ಹಿಂದುಗಳಿಗೆ ತೊಂದರೆ ನೀಡುತ್ತಿದ್ದಾರೆ, ಇದೇ ಸತ್ಯ ಇದೆ !
ಮೌಲಾನಾ ಶಾಬುದ್ದೀನ್ ರಜವಿ ಬರೆಲವಿ ಮಾತು ಮುಂದುವರಿಸಿ, ಲವ್ ಜಿಹಾದ್, ಸಮೂಹದಿಂದ ಕೊಲೆ, ಮತಾಂತರ, ಭಯೋತ್ಪಾದಕರಿಗೆ ಧನ ಸಹಾಯ ಮತ್ತು ಭಯೋತ್ಪಾದನೆಯ ಹೆಸರಿನಲ್ಲಿ ಮುಸಲ್ಮಾನರಿಗೆ ಹೆದರಿಸಿ ತೊಂದರೆ ನೀಡಲಾಗುತ್ತಿದೆ. ಇದನ್ನು ನಿಲ್ಲಿಸಬೇಕು. ಕೆಲವು ಕಟ್ಟರವಾದಿ ಸಂಘಟನೆ ಮುಸಲ್ಮಾನರ ಹುಡುಗಿಯರಿಗೆ ಹೆದರಿಸುತ್ತಾ ಮತ್ತು ಹಗಲುಗನಸುಗಳನ್ನು ತೋರಿಸಿ ವಿವಾಹವಾಗಲು ಪ್ರಯತ್ನ ಮಾಡುತ್ತಾರೆ. (ಇದಕ್ಕೆ ಹೇಳುವುದು ಆಚಾರ ಹೇಳೋದು ಬದನಕಾಯಿ ತಿನ್ನೋದು ! – ಸಂಪಾದಕರು) ಇದನ್ನು ತಿಳಿದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ‘ಪ್ಲೇಸಸ್ ಆಫ್ ವರ್ಷಿಪ್ ಆಕ್ಟ್ ೧೯೯೧’ ರ ಕಾನೂನಿನ ಪ್ರಕಾರ ಧಾರ್ಮಿಕ ಸ್ಥಳಗಳ ಸ್ಥಿತಿ ಶಾಶ್ವತ ಉಳಿಯಬೇಕು. ಆದರೂ ಕೂಡ ಅನೇಕ ಮೊಕದ್ದಮೆ ನ್ಯಾಯಾಲಯದಲ್ಲಿ ಬಾಕಿ ಇದೆ. ಇದರಿಂದ ದೇಶದಲ್ಲಿನ ವಾತಾವರಣ ಕಲುಷಿತವಾಗಿದೆ. ಸಮಾನ ನಾಗರಿಕ ಸಂಹಿತೆ ಮುಸಲ್ಮಾನರಿಗೆ ಒಪಪ್ಇಗೆ ಇಲ್ಲ ಎಂದು ಹೇಳಿದರು.
ಸಂಪಾದಕೀಯ ನಿಲುವುಹಿಂದುಗಳ ದೇವಸ್ಥಾನದ ಮೇಲೆ, ಧಾರ್ಮಿಕ ಮೆರವಣಿಗೆಯ ಮೇಲೆ, ಹಿಂದೂಗಳ ಮೇಲೆ ದಾಳಿ ಮಾಡುವವರು, ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಉಗುಳು ಜಿಹಾದ್ ಮುಂತಾದ ಜಿಹಾದ್ ನಡೆಸುವವರಿಗೆ ಕಠಿಣ ಶಿಕ್ಷೆ ವಿಧಿಸಲು ಮುಸಲ್ಮಾನ ಸಂಘಟನೆಗಳು ಏಕೆ ಆಗ್ರಹಿಸುವುದಿಲ್ಲ ? |