ದೇಶವಿರೋಧಿ ವಿಷಯದ ಲೇಖನ ಪ್ರಸಾರ ಮಾಡಿದರೆ ಜೀವಾವಧಿ ಶಿಕ್ಷೆ

  • ಉತ್ತರಪ್ರದೇಶ ರಾಜ್ಯದ ಹೊಸ ಸಾಮಾಜಿಕ ಮಾಧ್ಯಮ ನೀತಿ

  • ಸರಕಾರಿ ಯೋಜನೆಗಳನ್ನು ಪ್ರಸಾರ ಮಾಡುವವರಿಗೆ ೨ ರಿಂದ ೮ ಲಕ್ಷ ರೂಪಾಯಿ ಸಿಗಲಿದೆ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ವಿಷಯಗಳ ಮೇಲೆ ಅಂಕುಶ ಇಡುವುದಕ್ಕಾಗಿ ಉತ್ತರಪ್ರದೇಶ ಸರಕಾರವು ‘ಉತ್ತರ ಪ್ರದೇಶ ಡಿಜಿಟಲ್ ಮೀಡಿಯಾ ಪಾಲಿಸಿ, ೨೦೨೪’ ಹೆಸರಿನ ಹೊಸ ಸಾಮಾಜಿಕ ಮಾಧ್ಯಮದ ನೀತಿ ರೂಪಿಸಿದೆ. ಇದರ ಪ್ರಕಾರ ರಾಷ್ಟ್ರ ವಿರೋಧಿ, ಅಕ್ಷೇಪಾರ್ಹ ಮತ್ತು ಅಶ್ಲೀಲ ಪೋಸ್ಟ್ ಬರೆಯುವವರಿಗೆ ಇನ್ನೂ ಜೀವಧಿ ಶಿಕ್ಷೆ ಆಗಬಹುದು. ಸರಕಾರದ ಯೋಜನೆಗಳ ಪ್ರಸಾರ ಮಾಡುವ ‘ಇನ್ಫ್ಲುಯೆನ್ಸರ್’ಗಳಿಗೆ (ಪ್ರಬೋಧನೆ ಮಾಡುವವರಿಗೆ) ಲಕ್ಷಾಂತರ ರೂಪಾಯಿ ದೊರೆಯಬಹುದು, ಹೀಗೂ ಕೂಡ ಇದರಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಚಿವ ಸಂಪುಟದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಚಿವ ಸಂಪುಟದ ಸಭೆಯ ನಂತರ ಸಚಿವ ಸಂಜಯ ನಿಶಾದ ಇವರು ಮಾತನಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಎಕ್ಸ್, ಇನ್ಸ್ತಾಗ್ರಾಮ್, ಫೇಸ್ಬುಕ್ ಮತ್ತು ಯೂಟ್ಯೂಬ್ ಮುಂತಾದವುಗಳಿಗಾಗಿ ಈ ನೀತಿ ರೂಪಿಸಲಾಗಿದೆ.
ಈ ನೀತಿಯ ಪ್ರಕಾರ ಆಕ್ಷೇಪಾರ್ಹ ಪೋಸ್ಟ್ ಗಳಿಗಾಗಿ ೩ ವರ್ಷದಿಂದ ಜೀವಾವಧಿವರೆಗೆ ಶಿಕ್ಷೆಯ ವ್ಯವಸ್ಥೆ ಇದೆ. ಯಾವುದಾದರೂ ಯಾಂತ್ರಿಕ ವ್ಯವಸ್ಥೆ ಅಥವಾ ಯಾವುದಾದರೂ ಕಂಪನಿಯಿಂದ ತಪ್ಪಾದ ಪೋಸ್ಟ್ ಅಪ್ ಲೋಡ್ ಮಾಡಿದರೆ ಸಂಬಂಧಪಟ್ಟವರ ವಿರುದ್ಧ ಕೂಡ ಕ್ರಮ ಕೈಗೊಳ್ಳಲಾಗುವುದು. ‘ಆಕ್ಷೇಪಾರ್ಹ ಪೋಸ್ಟ್’ ಈ ಪರಿಕಲ್ಪನೆಯಲ್ಲಿ ಅಸಭ್ಯತೆ, ಅಶ್ಲೀಲ ಮತ್ತು ದೇಶದ್ರೋಹಿ ವಿಷಯಗಳು ಸಮಾವೇಶವಿದೆ ಎಂದು ಹೇಳಿದರು.

ಸರಕಾರಿ ಯೋಜನೆಯ ಪ್ರಚಾರ ಮಾಡುವವರು ‘ಇನ್ಫ್ಲುಯೆನ್ಸರ್’ ಇವರಿಗೆ ೨ ರಿಂದ ೮ ಲಕ್ಷ ರೂಪಾಯಿ ಸಿಗಲಿದೆ !

ಉತ್ತರಪ್ರದೇಶ ಸರಕಾರವು ಸುತ್ತೋಲೆ ಹೊರಡಿಸಿದ್ದು ಇದರಲ್ಲಿ ಸರಕಾರದ ಯೋಜನೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಿದ್ಧಗೊಳಿಸಲಾಗುವುದೆಂದು ಹೇಳಿದೆ. ಇದರ ಪ್ರಕಾರ ‘ಇನ್ಫ್ಲುಯೆನ್ಸರ್’ ಇವರಿಗೆ ಫಾಲೋಆರ್ರ್ಸ್ ಮತ್ತು ಸಬ್ಸ್ಕ್ರೈಬ್ರ್ಸ್ ಎಷ್ಟು ಇದೆ ಎಂಬುದು ನೋಡಿ ಸರಕಾರಿ ಯೋಜನೆಯ ಪ್ರಸಾರ ಮಾಡುವ ಕೆಲಸ ನೀಡಲಾಗುವುದು. ಇಂಥ ‘ಇನ್ಫ್ಲುಯೆನ್ಸರ’ಗೆ ಪ್ರತಿ ತಿಂಗಳು ೨ ರಿಂದ ೮ ಲಕ್ಷ ರೂಪಾಯವರೆಗಿನ ಪ್ಯಾಕೇಜ್ ನೀಡಬಹುದು. ಎಕ್ಸ್, ಇನ್ಸ್ಟಾಗ್ರಾಮ್, ಶಾರ್ಟ್ಸ್, ಪ್ಯಾಡ್ ಕಾಸ್ಟ್, ಫೇಸ್ಬುಕ್ ಮತ್ತು ಯೂಟ್ಯೂಬ್ ಮೇಲಿನ ಇನ್ಫ್ಲುಯೆನ್ಸರಿಗೆ ಈ ಯೋಜನೆಯ ಲಾಭ ಸಿಗಬಹುದು ಎಂದು ಹೇಳಿದೆ.

ಸಂಪಾದಕೀಯ ನಿಲುವು

ಉತ್ತರಪ್ರದೇಶದಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಸರಕಾರ ಯಾವ ರೀತಿ ಆಡಳಿತ ನಡೆಸುತ್ತಿದೆ ಹಾಗೆ ದೇಶದಲ್ಲಿನ ಇತರ ರಾಜ್ಯದ ಸರಕಾರಗಳು ಈ ರೀತಿ ಆಡಳಿತ ಏಕೆ ನಡೆಸಲು ಸಾಧ್ಯವಿಲ್ಲ ? ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಉದ್ಭವಿಸುತ್ತಿದೆ ! ಭಾಜಪದ ಇತರ ಸರಕಾರಗಳು ಕೂಡ ಇದರ ಯೋಚನೆ ಮಾಡುವ ಅಗತ್ಯವಿದೆ !