ವಕೀಲರು ಅಲ್ತಾಫ ಪರವಾಗಿ ಕಾನೂನು ಹೋರಾಟ ಮಾಡದಂತೆ ಮುಸ್ಲಿಂ ಸಂಘಟನೆಯಿಂದ ಕರೆ

ಕಾರ್ಕಳದಲ್ಲಿನ ಹಿಂದೂ ಯುವತಿ ಮೇಲೆ ಅಲ್ತಾಫ ಬಲಾತ್ಕಾರ ಮಾಡಿದ ಪ್ರಕರಣ

ಉಡುಪಿ – ಕಾರ್ಕಳದಲ್ಲಿ ಅಲ್ತಾಫ್ ನು ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯ ಮಾಡಿಕೊಮಡಿದ್ದ ಹಿಂದೂ ಯುವತಿಯನ್ನು ಭೇಟಿಯಾಗಲು ಕರೆಸಿ, ಅವಳ ಮೇಲೆ ಬಲಾತ್ಕಾರ ಮಾಡಿದ್ದನು. ಈ ಘಟನೆಯನ್ನು ಮುಸ್ಲಿಂ ಸಂಘಟನೆಗಳು ನಿಷೇಧಿಸಿವೆ. ‘ಹಿಂದೂ ಸಹೋದರಿಯರ ಮೇಲಿನ ಅತ್ಯಾಚಾರ ಪ್ರಕರಣವನ್ನು ನಾವು ಖಂಡಿಸುತ್ತೇವೆ. ಯಾವುದೇ ಮುಸ್ಲಿಂ ನ್ಯಾಯವಾದಿಗಳು ಆರೋಪಿಯ ಪರವಾಗಿ ಕಾನೂನು ಹೋರಾಟ ಮಾಡಬಾರದು’ ಎಂದು ‘ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ’ ಮನವಿ ಮಾಡಿದೆ. ಈ ಸಂಘಟನೆಯ ಮಾಜಿ ಕಾರ್ಯದರ್ಶಿ ಮಹಮ್ಮದ ಷರೀಫ ಮಾತನಾಡಿ, ಯುವತಿಗೆ ಮದ್ಯದಲ್ಲಿ ಮಾದಕ ಪದಾರ್ಥವನ್ನು ಸೇರಿಸಿ ಕುಡಿಸಿ ಅವಳ ಮೇಲೆ ಬಲಾತ್ಕಾರ ಮಾಡಿದ್ದಾನೆ. ಅಲ್ತಾಫ್ ನಂತಹ ವಿಕೃತ ಮನ:ಸ್ಥಿತಿಯ ಕಾಮುಕರಿಗೆ ಕಠಿಣ ಶಿಕ್ಷೆಯಾಗಬೇಕು. ಕಾರ್ಕಳದಲ್ಲಿ ನಾವು ಸೌಹಾರ್ದತೆಯ ಇತಿಹಾಸವನ್ನು ಕಾಪಾಡಿಕೊಂಡು ಬಂದಿದ್ದೇವೆ. ಹೊರ ಜಿಲ್ಲೆಗಳಿಂದ ಬಂದಿರುವ ಅಲ್ತಾಫನಂತಹ ಜನರು ಬಾಡಿಗೆ ಮನೆಯಲ್ಲಿದ್ದುಕೊಂಡು ಇಂತಹ ಕೃತ್ಯಗಳನ್ನು ಮಾಡುತ್ತಾರೆ. ಈ ಕೃತ್ಯ ಮಾನವತೆಯ ಮೇಲೆ ಮಾಡಿರುವ ಅತ್ಯಾಚಾರವಾಗಿದೆ. ಕೇವಲ ಹಿಂದೂ ಸಮಾಜ ಮಾತ್ರವಲ್ಲದೆ ಸಂಪೂರ್ಣ ಸಮಾಜ ಜಾಗೃತವಾಗುವ ಅಗತ್ಯವಿದೆ. ಈ ಪ್ರಕರಣದಲ್ಲಿ ಮಾದಕ ಪದಾರ್ಥವನ್ನು ಉಪಯೋಗಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಮಾದಕ ಪದಾರ್ಥ ಬಹಳ ಸುಲಭವಾಗಿ ದೊರೆಯುತ್ತದೆ. ಮಾದಕ ಪದಾರ್ಥಗಳ ಜಾಲವನ್ನು ಬಯಲಿಗೆಳೆದು, ಅದಕ್ಕೆ ಸಂಬಂಧಿಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಾವು ನಮ್ಮ ಸಮುದಾಯದಿಂದಲೇ ಅಲ್ತಾಫನನ್ನು ಹೊರಹಾಕಲು ನಿರ್ಧರಿಸಿದ್ದೇವೆ. ಇಂತಹ ಜನರಿಂದ ನಮ್ಮ ಸಮುದಾಯದ ಹೆಸರು ಕೆಡುತ್ತದೆ. ನಮ್ಮ ಸಮುದಾಯದ ಯಾವುದೇ ನ್ಯಾಯವಾದಿಗಳು ಅವನ ಪರವಾಗಿ ಕಾನೂನು ಹೋರಾಟ ಮಾಡಬಾರದು ಎಂದು ನಮ್ಮ ವಿನಂತಿಯಾಗಿದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇಂತಹವರಿಗೆ ಷರಿಯತ್ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯನ್ನು ವಿಧಿಸುವಂತೆ ಮುಸ್ಲಿಂ ಸಂಘಟನೆಗಳು ಮನವಿ ಮಾಡುತ್ತವೆಯೇ?