ಆನ್‌ಲೈನ್ ಶಾಪಿಂಗ್‌ ವ್ಯವಸ್ಥೆಯ ಪರಿಣಾಮ; 300 ಕೋಟಿ ಮರಗಳ ನಾಶ

ನವ ದೆಹಲಿ – ಅಮೇರಿಕಾದ ಕೆಲವು ವಿಶ್ವವಿದ್ಯಾಲಯಗಳು ಇ-ಕಾಮರ್ಸ್ (ಆನ್‌ಲೈನ್ ಖರೀದಿ) ಮತ್ತು ಪರಿಸರದ ಹಾನಿ ಬಗ್ಗೆ ಅಧ್ಯಯನ ಮಾಡಿವೆ. ಈ ಅಧ್ಯಯನದಿಂದಾಗಿ ಇ-ಕಾಮರ್ಸ್ ಪ್ಯಾಕೇಜಿಂಗ್ ಸಾಮಗ್ರಿಗಳಿಗಾಗಿ ಸುಮಾರು 300 ಕೋಟಿ ಮರಗಳನ್ನು ನಾಶ ಮಾಡಲಾಗುತ್ತಿದೆ ಎಂಬ ಗಂಭೀರ ವಿಷಯವು ಬಹಿರಂಗವಾಗಿದೆ.

1. ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ಇ-ಕಾಮರ್ಸ್ ಸೇರಿದಂತೆ ಇನ್ನಿತರ ಕೈಗಾರಿಕೆಗಳಿಗೆ ಪ್ಯಾಕೇಜಿಂಗ್ ಸಾಮಗ್ರಿಗಳ ಅವಶ್ಯಕತೆ ಇರುತ್ತದೆ. ಇದರಲ್ಲಿ ಕಾಗದ, ರಟ್ಟು, ಕಟ್ಟಿಗೆ ಇತ್ಯಾದಿಗಳನ್ನು ಉಪಯೋಗಿಸಲಾಗುತ್ತದೆ. ಸಾಮಾನ್ಯವಾಗಿ ಮರಗಳಿಂದ ಈ ಸಾಮಗ್ರಿಗಳು ಸಿಗುತ್ತದೆ. ಆನ್ ಲೈನ್ ಶಾಪಿಂಗ ಪ್ರಮಾಣ ಹೆಚ್ಚಾದ ಕೂಡಲೇ ಕಾಗದ ಮತ್ತು ರಟ್ಟಿನ ಬೇಡಿಕೆ ಹೆಚ್ಚಾಗುತ್ತದೆ.

2. ಪ್ಯಾಕೇಜಿಂಗ್ ಹೊರತುಪಡಿಸಿ, ಮರದ ಪೀಠೋಪಕರಣಗಳು, ಕಟ್ಟಡ ನಿರ್ಮಾಣ ಸಾಮಗ್ರಿ, ಗೃಹೋಪಯೋಗಿ ವಸ್ತುಗಳನ್ನು ತಯಾರಿಸಲಾಗುತ್ತದೆ. ಇದಕ್ಕಾಗಿ, ಪ್ರತಿ ವರ್ಷ ಲಕ್ಷಾಂತರ ಮರಗಳನ್ನು ಕಡಿಯಲಾಗುತ್ತದೆ. ಅನೇಕ ಬಾರಿ ಪ್ಯಾಕೇಜಿಂಗ್ ಸಾಮಗ್ರಿಗಳನ್ನು ಕೇವಲ ಒಮ್ಮೆ ಮಾತ್ರ ಬಳಸಲಾಗುತ್ತದೆ ಮತ್ತು ನಂತರ ಅವುಗಳನ್ನು ಎಸೆಯಲಾಗುತ್ತದೆ.

3. ಆನ್‌ಲೈನ್ ಸೇವೆಗಳು, ಕ್ಲೌಡ್ ಕಂಪ್ಯೂಟಿಂಗ್, ಡೇಟಾ ಸೆಂಟರ್‌ಗಳು ಮತ್ತು ಸ್ಟ್ರೀಮಿಂಗ್ ಸೇವೆಗಳಿಗೆ ಹೆಚ್ಚಿನ ಊರ್ಜೆಯ ಅಗತ್ಯವಿರುತ್ತದೆ. ಡೇಟಾ ಕೇಂದ್ರಗಳು ಹೆಚ್ಚು ಊರ್ಜೆ ಬಳಸುತ್ತವೆ. ಇದರಿಂದ ಕಾರ್ಬನ್ ಹೊರಸೂಸುವಿಕೆ ಹೆಚ್ಚಾಗುತ್ತದೆ.

4. ಆನ್‌ಲೈನ್ ಶಾಪಿಂಗ್‌ಗೆ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ನಂತಹ ಡಿಜಿಟಲ್ ಸಾಧನಗಳು ಬೇಕಾಗುತ್ತವೆ. ಈ ಉಪಕರಣಗಳು ಹಳೆಯದಾದ ಬಳಿಕ ಅವುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲಾಗುವುದಿಲ್ಲ. ಈ ಕಾರಣದಿಂದಾಗಿ ಇ-ತ್ಯಾಜ್ಯದ ಕಸ ಹೆಚ್ಚಾಗುತ್ತದೆ.

5. ಎಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರಿಸಲು ಲಿಥಿಯಂ, ಕೋಬಾಲ್ಟ್ ಮತ್ತು ಇತರ ಖನಿಜಗಳನ್ನು ಪಡೆಯಲು ಗಣಿಗಾರಿಕೆಯನ್ನು ಮಾಡಲಾಗುತ್ತದೆ. ಇದರಿಂದಾಗಿ ನೈಸರ್ಗಿಕ ಸಂಪನ್ಮೂಲಗಳಿಗೆ ಹೆಚ್ಚಿನ ಹಾನಿಯಾಗಲಿದೆ. ಜಾಗತಿಕ ತಾಪಮಾನ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಇಂಗಾಲದ ಹೊರಸೂಸುವಿಕೆ ಇವೆಲ್ಲದರ ಪರಿಣಾಮ ಪರಿಸರದ ಮೇಲಾಗುತ್ತದೆ.

ಸಂಪಾದಕೀಯ ನಿಲುವು

ಆರ್ಥಿಕ ಮತ್ತು ವೈಜ್ಞಾನಿಕ ಪ್ರಗತಿಯಿಂದ ಅಪಾಯಗಳ ವಿಷಯದ ಬಗ್ಗೆ ಜಾಗತಿಕ ಮಟ್ಟದಲ್ಲಿ ಚಿಂತನೆಯಾಗಿ ಅದರ ಮೇಲೆ ಪರಿಹಾರಗಳನ್ನು ಕಂಡುಹಿಡಿಯುವುದು ಆವಶ್ಯಕವಾಗಿದೆ !