ಪಾಕಿಸ್ತಾನದ 23 ಪಂಜಾಬಿ ಮುಸಲ್ಮಾನರನ್ನು ಹತ್ಯೆ ಮಾಡಿದ ‘ಬಲೂಚ್ ಲಿಬರೇಶನ್ ಆರ್ಮಿ’

ಇಸ್ಲಾಮಾಬಾದ್ (ಪಾಕಿಸ್ತಾನ) – ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ‘ಬಲೂಚ್ ವಿಮೋಚನಾ ಸೇನೆಯ’ (ಬಿ.ಎಲ್‌.ಎ.) ಸಶಸ್ತ್ರ ಸದಸ್ಯರು ತಮ್ಮ ನಾಯಕ ನವಾಬ್ ಬುಗ್ತಿ ಅವರ ಪುಣ್ಯತಿಥಿಯ ನಿಮಿತ್ತ 23 ಪಂಜಾಬಿ ಮುಸಲ್ಮಾನರನ್ನು ಟ್ರಕ್‌ ಮತ್ತು ಬಸ್‌ಗಳಿಂದ ಹೊರಗೆಳೆದು ಹತ್ಯೆ ಮಾಡಿದ್ದಾರೆ. ಬಿ.ಎಲ್‌.ಎ ಸದಸ್ಯರು ಮೊದಲು ಈ ವಾಹನಗಳನ್ನು ತಡೆದರು ಮತ್ತು ಪ್ರಯಾಣಿಕರ ಗುರುತಿನ ಚೀಟಿಗಳನ್ನು ಪರಿಶೀಲಿಸಿದ ನಂತರ ಪಂಜಾಬಿ ಮೂಲದ ಮುಸಲ್ಮಾನರನ್ನು ಹತ್ಯೆಗೈದರು ಎಂದು ಹೇಳಲಾಗಿದೆ. ಆದರೆ ಸಾವಿನ ಸಂಖ್ಯೆ 62 ಎಂದು ಬಿ.ಎಲ್.ಎ ಹೇಳಿಕೊಂಡಿದೆ. ನಾಗರಿಕರ ವೇಷದಲ್ಲಿದ್ದ ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ಸಂಘಟನೆ ಹೇಳಿದೆ. ಈ ದಾಳಿಯಲ್ಲಿ 10 ವಾಹನಗಳಿಗೆ ಕೂಡ ಬೆಂಕಿ ಹಾಕಲಾಗಿದೆ.