ಜಾರಖಂಡ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಒಡಿಶಾ ರಾಜ್ಯಗಳಲ್ಲಿ ದ್ವಿಗುಣಗೊಂಡ ಚರ್ಚಗಳ ಸಂಖ್ಯೆ

  • ಬುಡಕಟ್ಟು ಜನಾಂಗದವರ ಪ್ರದೇಶಗಳಲ್ಲಿ ಚರ್ಚ್‌ಗಳ ನಿರ್ಮಾಣ

  • ಧಾರ್ಮಿಕ ಮತಾಂತರದಿಂದಾಗಿ ಛತ್ತೀಸ್‌ಗಢದ ಹಲವು ಗ್ರಾಮಗಳಲ್ಲಿ ಕ್ರಿಶ್ಚಿಯನ್ನರೇ ಬಹುಸಂಖ್ಯಾತರು

ರಾಂಚಿ (ಜಾರಖಂಡ) – ಜಾರಖಂಡ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಒಡಿಶಾ ಈ ನಾಲ್ಕು ರಾಜ್ಯಗಳಲ್ಲಿ, ಕಳೆದ 10 ವರ್ಷಗಳಲ್ಲಿ ಚರ್ಚ್‌ಗಳ ಸಂಖ್ಯೆ ದ್ವಿಗುಣಗೊಂಡಿದೆ. ಸಮೀಕ್ಷೆಯೊಂದರ ಪ್ರಕಾರ 2011-12ರಲ್ಲಿ ಈ ರಾಜ್ಯಗಳಲ್ಲಿ 12 ಸಾವಿರ 300 ಚರ್ಚ್‌ಗಳಿದ್ದವು. ಆದರೆ ಅದೀಗ 25 ಸಾವಿರಕ್ಕಿಂತಲೂ ಹೆಚ್ಚಾಗಿವೆಯೆಂದು ದೈನಿಕ ‘ದಿವ್ಯ ಮರಾಠಿ’ ಪತ್ರಿಕೆ ವರದಿ ಮಾಡಿದೆ. ಜಾರಖಂಡನ ಗುಮಲಾ ಜಿಲ್ಲೆಯ ಹಲವು ಗ್ರಾಮಗಳಲ್ಲಿ 90%ರಷ್ಟು ಜನರು ಕ್ರೈಸ್ತರಾಗಿದ್ದಾರೆ. ಅವರೀಗ ತಮ್ಮ ಮನೆಯ ಹೊರಗೆ ಕ್ರಾಸ್ ಚಿನ್ಹೆಯನ್ನು ಹಚ್ಚುತ್ತಾರೆ.

ಆದಿವಾಸಿಗಳ ಪ್ರದೇಶದಲ್ಲಿ ಅಕ್ರಮವಾಗಿ ಚರ್ಚ್ ಗಳನ್ನು ನಿರ್ಮಿಸಲಾಗುತ್ತಿದೆ!

ಅಕ್ರಮ ಧರ್ಮಾಂತರ ಮತ್ತು ಚರ್ಚ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಸರಕಾರಿ ನ್ಯಾಯವಾದಿ ರಾಮ್ ಪ್ರಕಾಶ್ ಪಾಂಡೆ ಅವರು ಈ ಬಗ್ಗೆ ಮಾತನಾಡಿ, ಆದಿವಾಸಿಗಳನ್ನು ಮತಾಂತರ ಮಾಡುವ ಮೂಲಕ ಅವರ ಭೂಮಿಯನ್ನು ಅತಿಕ್ರಮಿಸಲಾಗುತ್ತಿದೆ. ನಂತರ ಅಲ್ಲಿ ಚರ್ಚ್‌ಗಳು, ಶಾಲೆಗಳು, ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿವೆ. ನಿಯಮಗಳ ಪ್ರಕಾರ, ಓರ್ವ ಬುಡಕಟ್ಟಿನ ಜನಾಂಗದವನು ಇನ್ನೊಬ್ಬ ಬುಡಕಟ್ಟು ಜನಾಂಗದವನಿಗೆ ಮಾತ್ರ ತನ್ನ ಭೂಮಿಯನ್ನು ನೀಡಬಹುದು; ಬುಡಕಟ್ಟು ಜನಾಂಗದವರು ಹೆಚ್ಚಿರುವ ಗ್ರಾಮಗಳಲ್ಲಿ ಕಟ್ಟಿರುವ ಎಲ್ಲ ಚರ್ಚಗಳು ಆದಿವಾಸಿಗಳ ಭೂಮಿಯ ಮೇಲೆಯೇ ಕಟ್ಟಲಾಗಿದೆ ಎಂದವರು ಆತಂಕ ವ್ಯಕ್ತಪಡಿಸಿದರು.

ಜಶಪೂರ (ಛತ್ತೀಸಗಡ) ನ್ಯಾಯಾಲಯದ ಆದೇಶದ ನಂತರವೂ ಅತಿಕ್ರಮಣಕಾರರ ಮೇಲೆ ಕ್ರಮ ಕೈಕೊಂಡಿಲ್ಲ.

ಜಶಪೂರ (ಛತ್ತೀಸಗಢ) ಜಿಲ್ಲೆಯಲ್ಲಿ 2007ರಲ್ಲಿ, ಆದಿವಾಸಿ ಭೂಮಿಯ ಮೇಲೆ ಚರ್ಚಗಳನ್ನು ಕಟ್ಟಲಾಗಿರುವ 250 ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿದ್ದವು. ನ್ಯಾಯಾಲಯ ಆ ಎಲ್ಲ ಭೂಮಿಯನ್ನು ಅತಿಕ್ರಮಣದಿಂದ ಮುಕ್ತಗೊಳಿಸುವಂತೆ ಆದೇಶಿಸಿತ್ತು. 2009ರಲ್ಲಿ ಅಂದಿನ ಜಿಲ್ಲಾಧಿಕಾರಿ ಅತಿಕ್ರಮಣ ತೆರವಿಗೆ ಬಡಾ ಕರೋಡಕ್ಕೆ ತೆರಳಿದ್ದಾಗ ಅವರನ್ನು ಅಲ್ಲಿಯ ಜನರು ಚರ್ಚನಲ್ಲಿ ಒತ್ತೆಯಾಳಾಗಿ ಇರಿಸಿದ್ದರು. ತದನಂತರ ಇಲ್ಲಿಯವರೆಗೆ ಆ ಭೂಮಿಯ ಮೇಲಿನ ಅತಿಕ್ರಮಣವನ್ನು ಯಾರೂ ತೆರವುಗೊಳಿಸಲಿಲ್ಲ. 2007ರಿಂದ 2024ರ ಕಾಲಾವಧಿಯಲ್ಲಿ 116 ಹೊಸ ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಪ್ರಕರಣದಲ್ಲಿ ಬುಡಕಟ್ಟು ಜನಾಂಗದವರ ಭೂಮಿಯ ಮೇಲೆಯೇ ಚರ್ಚ ಕಟ್ಟಲಾಗಿದೆಯೆಂದು ಮತ್ತು ಅವುಗಳನ್ನು ವಶಕ್ಕೆ ಪಡೆದಿರುವ ದೂರುಗಳಿವೆ.

ಛತ್ತೀಸ್‌ಗಢದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಮತಾಂತರ

ಛತ್ತೀಸ್‌ಗಢದ ಸನ್ನಾ ಬ್ಲಾಕ್‌ನಲ್ಲಿ 50 ಹಳ್ಳಿಗಳಿವೆ. ಅಲ್ಲಿನ 5 ಗ್ರಾಮಗಳಲ್ಲಿ ಯಾರೂ ಕ್ರಿಶ್ಚಿಯನ್ ಧಾರ್ಮ ಸ್ವೀಕರಿಸಿಲ್ಲ. ಸರಾಯಿತೋಲಿ ಗ್ರಾಮದಲ್ಲಿ 100ಕ್ಕೂ ಹೆಚ್ಚು ಕ್ರೈಸ್ತ ಕುಟುಂಬಗಳಿವೆ. ಅಲ್ಲೀಗ ಒಂದೇ ಒಂದು ಹಿಂದೂ ಕುಟುಂಬ ಉಳಿದಿದೆ. ಪಾರಸಪೂರದಲ್ಲಿಯೂ ಹಿಂದೂಗಳ ಕೇವಲ ಮೂರು ಮನೆಗಳು ಉಳಿದಿವೆ. ಅದೇ ರೀತಿ ಕರಡಿಹದಲ್ಲಿ ಶೇ. 90 ರಷ್ಟು ಕ್ರಿಶ್ಚಿಯನ್ ಆಗಿದ್ದಾರೆ. ಜಶಪೂರದಲ್ಲಿ ಒಂದು ಚರ್ಚ ಇತ್ತು. ಈಗ 50 ಚರ್ಚ್ ಗಳಾಗಿವೆ. ವಿಚಿತ್ರವೆಂದರೆ ಈ ಹಿಂದೂಗಳ ಮತಾಂತರವಾದ ಬಳಿಕವೂ ಅವರ ಹೆಸರನ್ನು ಬದಲಾಯಿಸುವುದಿಲ್ಲ. ಇದರಿಂದಾಗಿ ಮತಾಂತರಗೊಂಡವರ ಹೆಸರಿನಿಂದ ಅವರು ಕ್ರಿಶ್ಚಿಯನ್ನರೆಂದು ಗುರುತಿಸುವುದು ಕಷ್ಟವಾಗಿದೆ.

ಸಂಪಾದಕೀಯ ನಿಲುವು

ಕೇಂದ್ರ ಸರಕಾರವು ಆದಷ್ಟು ಬೇಗನೆ ಮತಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸಬೇಕು ಮತ್ತು ಈ ಹಿಂದೂಗಳನ್ನು ಹಾಗೂ ಆದಿವಾಸಿಗಳ ರಕ್ಷಣೆ ಮಾಡಬೇಕು, ಇಲ್ಲದಿದ್ದರೆ ಈ ರಾಜ್ಯಗಳಲ್ಲಿ ಹಿಂದೂಗಳು ಹೆಸರಿಗೂ ಸಹ ಉಳಿಯುವುದಿಲ್ಲ.