ರಷ್ಯಾದ 38 ಅಂತಸ್ತಿನ ಕಟ್ಟಡದ ಮೇಲೆ ಉಕ್ರೇನ್ ಡ್ರೋನ್ ಡಿಕ್ಕಿ; ಇಬ್ಬರಿಗೆ ಗಾಯ

ಕೀವ್ (ಉಕ್ರೇನ್) – ರಷ್ಯಾದ ಸೆರಾಟೋವನಲ್ಲಿರುವ 38 ಅಂತಸ್ತಿನ ವಸತಿ ಕಟ್ಟಡ ‘ವೋಲ್ಗಾ ಸ್ಕೈ’ ಮೇಲೆ ಉಕ್ರೇನ್ ಡ್ರೋನ್‌ನಿಂದ ದಾಳಿ ಮಾಡಿದೆ. 2001ರ ಮಧ್ಯದಲ್ಲಿ, ಅಮೇರಿಕೆಯ ನ್ಯೂಯಾರ್ಕ ನಗರದ ವಿಶ್ವವ್ಯಾಪಾರ ಕೇಂದ್ರ’ (ವರ್ಲ್ಡ ಟ್ರೇಡ್ ಸೆಂಟರ’)ದ ಎರಡು ಕಟ್ಟಡಗಳ ಮೇಲೆ ಜಿಹಾದಿ ಭಯೋತ್ಪಾದಕರು ಯಾವ ರೀತಿ ವಿಮಾನವನ್ನು ಡಿಕ್ಕಿ ಹೊಡೆಸಿ ದಾಳಿ ಮಾಡಿದ್ದರೋ, ಅದೇ ರೀತಿ ಉಕ್ರೇನ್ ಈ ಕಟ್ಟಡಗಳ ಮೇಲೆ ಡ್ರೋನ್ ಮೂಲಕ ಡಿಕ್ಕಿ ಹೊಡೆಸಿತು; ಆದರೆ ಈ ದಾಳಿಯಲ್ಲಿ ಇಲ್ಲಿಯವರೆಗೆ ಕೇವಲ ಇಬ್ಬರಿಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಕಟ್ಟಡದ ಕೆಳಗೆ ನಿಲ್ಲಿಸಲಾಗಿದ್ದ 20ಕ್ಕಿಂತ ಹೆಚ್ಚು ವಾಹನಗಳಿಗೆ ಹಾನಿಯಾಗಿವೆ. ಉಕ್ರೇನ್ ಗಡಿಯಿಂದ ಸೆರಾಟೊವ್ ನಗರ 900 ಕಿ.ಮಿ. ಅಂತರದಲ್ಲಿದೆ.

ಉಕ್ರೇನ್ ರಶಿಯಾದ ಮೇಲೆ 20 ಡ್ರೋನ್ ಗಳ ಮೂಲಕ ದಾಳಿ ನಡೆಸಿತ್ತು, ಅವುಗಳಲ್ಲಿ ಅತ್ಯಧಿಕ 9 ಡ್ರೋನ್ ಗಳನ್ನು ಸೆರಾಟೊವ್ ನಗರದ ಮೇಲೆ ದಾಳಿಗೆ ಬಳಸಲಾಗಿದೆ. ಈ ಬಗ್ಗೆ ರಶಿಯಾದ ರಕ್ಷಣಾ ಸಚಿವಾಲಯ ಪ್ರತಿಕ್ರಿಯೆ ನೀಡಿದ್ದು, ಸಾರಾಟೊವ್ ನಲ್ಲಿ ಉಕ್ರೇನ್ ನ 9 ಡ್ರೋನಗಳನ್ನು ನಾವು ಹೊಡೆದು ಉರುಳಿಸಿದ್ದೇವೆ ಎಂದು ಹೇಳಿದೆ.

ಉಕ್ರೇನ್ ಮೇಲಿನ ದಾಳಿಯನ್ನು ತೀವ್ರಗೊಳಿಸಿದ ರಶಿಯಾ

ರಶಿಯಾ ಆಗಸ್ಟ 26 ರಂದು ಬೆಳಿಗ್ಗೆ ಕೀವ್ ಮತ್ತು ಉಕ್ರೇನ್ ನ ಇತರೆ ನಗರಗಳ ಮೇಲೆ ದಾಳಿ ನಡೆಸಿದೆ. ರಶಿಯಾದ ಸೇನೆಯು ಕೀವ್ ಮೇಲೆ ದೊಡ್ಡ ಪ್ರಮಾಣದಲ್ಲಿ ಕ್ಷಿಪಣಿ ಅಸ್ತ್ರಗಳನ್ನು ಹಾರಿಸಿದೆ. ಹಾಗೆಯೇ ಡ್ರೋನ್ ಮೂಲಕವೂ ಗುಂಡಿನ ದಾಳಿ ಮತ್ತು ಬಾಂಬ್ ದಾಳಿ ನಡೆಸಿದೆ.