2026ರ ಮಾರ್ಚ್ ವೇಳೆಗೆ ದೇಶದಲ್ಲಿ ನಕ್ಸಲರ ಅಂತ್ಯ ! – ಕೇಂದ್ರ ಗೃಹ ಸಚಿವ ಅಮಿತ್ ಶಾ

ರಾಯ್‌ಪುರ (ಛತ್ತೀಸ್‌ಗಢ) – ಮಾರ್ಚ್ 2026 ರ ಮೊದಲು ದೇಶದಲ್ಲಿ ನಕ್ಸಲಿಸಂ ಕೊನೆಗೊಳ್ಳುವುದು, ಇದರ ವಿರುದ್ಧದ ಅಭಿಯಾನ ಈಗ ನಿರ್ಣಾಯಕ ಹಂತದಲ್ಲಿದೆ. ಈ ಸಮಸ್ಯೆಯನ್ನು ಕಠಿಣ ಮತ್ತು ದಯೆ ತೋರದ ರಣತಂತ್ರದೊಂದಿಗೆ ಆಕ್ರಮಣ ಮಾಡುವ ಸಮಯ ಬಂದಿದೆ. ಈ ಸಮಸ್ಯೆ ಈಗ ಛತ್ತೀಸ್‌ಗಢದ ಕೆಲವು ಆಯ್ದ ಪ್ರದೇಶಗಳಿಗೆ ಸೀಮಿತವಾಗಿದೆ, ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ನಕ್ಸಲ್ ವಾದಿಗಳ ಕುರಿತು 7 ರಾಜ್ಯಗಳ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಅಮಿತ್ ಶಾ ಅವರು ಪ್ರಸ್ತುತ ಛತ್ತೀಸ್‌ಗಢ ರಾಜ್ಯದಲ್ಲಿ 3 ದಿನಗಳ ಪ್ರವಾಸದಲ್ಲಿದ್ದಾರೆ.

ರಾಜ್ಯಗಳು ನಕ್ಸಲಿಸಂಗೆ ಸಂಬಂಧಿಸಿದ ಅಂತರರಾಜ್ಯ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು. 2 ತಿಂಗಳೊಳಗೆ ನಕ್ಸಲರ ಶರಣಾಗತಿ ನೀತಿಯನ್ನು ಹೊಸ ಸ್ವರೂಪಕ್ಕೆ ತರಲಾಗುವುದು. ದೇಶದಲ್ಲಿ ನಕ್ಸಲ್ ಹಿಂಸಾಚಾರ ಪ್ರಕರಣಗಳು ಕಡಿಮೆಯಾಗುತ್ತಿವೆ. 2020 ರ ಗರಿಷ್ಠ ಮಟ್ಟದ ತುಲನೆಯಲ್ಲಿ ನಕ್ಸಲೀಯರ ಹಿಂಸಾಚಾರದಲ್ಲಿ ಶೇ. 73 ರಷ್ಟು ಕಡಿಮೆಯಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ದೇಶದಿಂದ ಜಿಹಾದಿ ಭಯೋತ್ಪಾದನೆ ಮತ್ತು ಎಲ್ಲಾ ರೀತಿಯ ಜಿಹಾದಿ ಮನಸ್ಥಿತಿಯನ್ನು ಕೊನೆಗೊಳಿಸುವ ದಿನಾಂಕವನ್ನು ಕೇಂದ್ರ ಸರಕಾರವು ಘೋಷಿಸಬೇಕು !