Sweden Immigration Policy Impact: ವಲಸೆಗೆ ಸಂಬಂಧಿಸಿದ ಹೊಸ ಕಠಿಣ ನೀತಿಯಿಂದಾಗಿ ಭಾರತೀಯ ನಾಗರಿಕರು ಸ್ವೀಡನ್ ತೊರೆಯುತ್ತಿದ್ದಾರೆ !

ಸ್ಟಾಕ್‌ಹೋಮ್ (ಸ್ವೀಡನ್) – ಸ್ವೀಡನ್‌ನಲ್ಲಿ ವಲಸೆ ನೀತಿಗಳಲ್ಲಿ ಬದಲಾವಣೆಯಾದ ನಂತರ ಹೆಚ್ಚಿನ ಸಂಖ್ಯೆಯ ಭಾರತೀಯರು ಸ್ವೀಡನ್ ತೊರೆಯುತ್ತಿದ್ದಾರೆ. ಈ ವರ್ಷದ ಮೊದಲ ಆರು ತಿಂಗಳಲ್ಲಿ ಸ್ವೀಡನ್ ತೊರೆಯುವ ಭಾರತೀಯರ ಸಂಖ್ಯೆಯಲ್ಲಿ ಶೇ.171 ರಷ್ಟು ಹೆಚ್ಚಳವಾಗಿದೆ. ಜನವರಿ ಮತ್ತು ಜೂನ್ 2024 ರ ನಡುವೆ 2 ಸಾವಿರದ 837 ಭಾರತೀಯರು ಸ್ವೀಡನ್ ತೊರೆದಿದ್ದಾರೆ. ಕಳೆದ ವರ್ಷದ ಮೊದಲ ಆರು ತಿಂಗಳಲ್ಲಿ 1 ಸಾವಿರದ 46 ಭಾರತೀಯರು ಸ್ವೀಡನ್ ತೊರೆದಿದ್ದರು. ಇದು 1998 ರ ನಂತರ ಮೊದಲ ಬಾರಿಗೆ ನಡೆಯುತ್ತಿದೆ.

ಡಿಸೆಂಬರ್ 2023 ರಲ್ಲಿ ಉಲ್ಫ್ ಕ್ರಿಸ್ಟರ್ಸನ್ ಪ್ರಧಾನ ಮಂತ್ರಿಯಾದ ನಂತರ, ವಲಸೆ ನೀತಿಯನ್ನು ಬದಲಾಯಿಸಿದರು. ಅವರು ಕೆಲಸದ ಪರವಾನಗಿಗಳು ಮತ್ತು ವೀಸಾಗಳ ಬಗ್ಗೆ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚು ಕೌಶಲ್ಯ ಹೊಂದಿರುವ ವಲಸಿಗರಿಗೆ ನೀಡಲಾದ ‘ವರ್ಕ್ ಪರ್ಮಿಟ್’ಗಳ ಸಂಖ್ಯೆಯು ಶೇ. 20 ರಷ್ಟು ಕಡಿಮೆಯಾಗಿದೆ.

ಕೆನಡಾದಲ್ಲಿ ಆಶ್ರಯ ಪಡೆಯುವ ಭಾರತೀಯರ ಸಂಖ್ಯೆಯಲ್ಲಿ ಹೆಚ್ಚಳ !

ಮತ್ತೊಂದೆಡೆ, ಸ್ವೀಡನ್ ತೊರೆದು ಕೆನಡಾದಲ್ಲಿ ಆಶ್ರಯ ಪಡೆಯುವ ಭಾರತೀಯರ ಸಂಖ್ಯೆ ಹೆಚ್ಚುತ್ತಿದೆ. ಕಳೆದ 3 ತಿಂಗಳಲ್ಲಿ ಭಾರತೀಯ ನಾಗರಿಕರು ಆಶ್ರಯಕ್ಕಾಗಿ 6​ಸಾವಿರ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಅಂಕಿ ಅಂಶವು 2023 ರಲ್ಲಿ ಅದೇ ತ್ರೈಮಾಸಿಕಕ್ಕಿಂತ ಶೇ 500 ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ.

ಸಂಪಾದಕೀಯ ನಿಲುವು

ಅಧಿಕೃತ ವಲಸಿಗರ ಬಗ್ಗೆ ಸ್ವೀಡನ್ ಕಟ್ಟುನಿಟ್ಟಾದ ನೀತಿಯನ್ನು ಹೊಂದಿದೆ, ಆದರೆ ಭಾರತವು ನುಸುಳುಕೋರರ ಬಗ್ಗೆ ನಿಷ್ಕ್ರಿಯವಾಗಿದೆ, ಇದು ನಾಚಿಕೆಗೇಡಿನ ಸಂಗತಿ !