ಜೌನ್‌ಪುರ (ಉತ್ತರ ಪ್ರದೇಶ) ನಲ್ಲಿನ ಕಥಿತ ಅಟಾಲಾ ಮಸೀದಿ, ಇದು ಅಟಾಲಾ ದೇವಿ ದೇವಸ್ಥಾನ ! – ಪುರಾತತ್ವ ಇಲಾಖೆ

ಜೌನ್‌ಪುರ (ಉತ್ತರ ಪ್ರದೇಶ) – ಅಟಾಲಾ ಮಾತಾ ದೇವಸ್ಥಾನದ ಪ್ರಕರಣವು ಆಗಸ್ಟ್ 21 ರಂದು ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ನ್ಯಾಯಾಲಯವು ಈ ಪ್ರಕರಣದಲ್ಲಿ ಸೆಪ್ಟೆಂಬರ್ 2, 2024 ರಂದು ತೀರ್ಪು ನೀಡಲಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮೊದಲ ಮಹಾನಿರ್ದೇಶಕ ಅಲೆಕ್ಸಾಂಡರ್ ಕನ್ನಿಂಗ್‌ಹ್ಯಾಮ್ ಅವರು ತಮ್ಮ ವರದಿಯಲ್ಲಿ ಅಟಾಲಾ ಮಸೀದಿಯ ವರ್ಣನೆಯನ್ನು ‘ಅಟಾಲಾ ದೇವಿ ದೇವಾಲಯ’ ಹೀಗೆ ಹೇಳಿದ್ದಾರೆ ಎಂದು ಹಿಂದೂ ಪಕ್ಷದ ನ್ಯಾಯವಾದಿಗಳು ನ್ಯಾಯಾಲಯದಲ್ಲಿ ತಿಳಿಸಿದರು.

ಕನೌಜ್ ರಾಜ ಜಯಚಂದ್ ರಾಥೋಡ್ ರವರು ಅಟಾಲಾ ದೇವಿ ದೇವಾಲಯವನ್ನು ನಿರ್ಮಿಸಿದ್ದರು. ಬ್ರಿಟಿಷ್ ಅಧಿಕಾರಿ ಜೆ.ಪಿ. ಹೆವಿಟ್ ಮತ್ತು ಇಬಿ ಹೋವೆಲ್ ಅವರು ಅಟಾಲಾ ಮಸೀದಿಯ ಕುಶಲತೆಯನ್ನು ‘ಹಿಂದೂ ಕಲೆಗಾರಿಕೆ’ ಎಂದು ಬಣ್ಣಿಸಿದ್ದಾರೆ. ಭಾರತೀಯ ಪುರಾತತ್ವ ಸರ್ವೇಕ್ಷಣಾದ ವರದಿಯಲ್ಲಿ ಅಟಾಲಾ ದೇವಿ ದೇವಸ್ಥಾನದ ಅನೇಕ ಛಾಯಾಚಿತ್ರಗಳನ್ನು ನೀಡಿದ್ದಾರೆ. ಅದರಲ್ಲಿ ಶಂಖ, ತ್ರಿಶೂಲ, ಕಮಲ ಇತ್ಯಾದಿ ಹಿಂದೂ ಚಿಹ್ನೆಗಳ ಸಮಾವೇಶ ಇದೆ. ಹಿಂದೂ ಪಕ್ಷದ ನ್ಯಾಯವಾದಿ, ಅಟಾಲಾ ಮಸೀದಿಯು ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಅಡಿಯಲ್ಲಿ ‘ಸಂರಕ್ಷಿತ ಸ್ಮಾರಕ’ ಇದೆ. ಆದ್ದರಿಂದ ಈ ಪ್ರಕರಣದಲ್ಲಿ ‘ಪ್ರಾರ್ಥನಾ ಸ್ಥಳಗಳ ಕಾಯಿದೆ,1991’ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ.