ಡಾ. ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ‘ಯುಎಪಿಎ’ ಕಲಂ ತೆಗೆದು ಹಾಕಿದ್ದಕ್ಕೆ ಮುಂಬಯಿ ಉಚ್ಚನ್ಯಾಯಾಲಯದಲ್ಲಿ ಅರ್ಜಿ

ಮುಂಬಯಿ – ಡಾ. ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಸಿಬಿಐನ ವಿಶೇಷ ನ್ಯಾಯಾಲಯವು ಆರೋಪಿಗಳನ್ನು ನಿರಪರಾಧಿಗಳೆಂದು ಖುಲಾಸೆಗೊಳಿಸಿದೆ ಮತ್ತು ಆರೋಪಿಗಳ ವಿರುದ್ಧ ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ’ ಅಡಿಯಲ್ಲಿ ಆರೋಪಿಗಳ ಮೇಲೆ ಹೊರಿಸಿದ್ದ ‘ಭಯೋತ್ಪಾದಕ ಕಾಯಿದೆಗಳು ಮತ್ತು ಕ್ರಿಮಿನಲ್ ಪಿತೂರಿ’ (ಯುಎಪಿಎ) ಕಾಯ್ದೆಯ ಸೆಕ್ಷನ್‌ಗಳನ್ನು ರದ್ದುಗೊಳಿಸಿತ್ತು. ಇದರ ವಿರುದ್ಧ ಡಾ. ನರೇಂದ್ರ ದಾಭೋಲ್ಕರ್ ಅವರ ಪುತ್ರಿ ಮುಕ್ತಾ ದಾಭೋಲ್ಕರ್ ಅವರು ಮುಂಬಯಿ ಉಚ್ಚನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.

ನ್ಯಾಯಮೂರ್ತಿ ರೇವತಿ ಮೋಹಿತೆ ಡೆರೆ ಮತ್ತು ನ್ಯಾಯಮೂರ್ತಿ ಪೃಥ್ವಿರಾಜ್ ಚವಾಣ್ ಅವರ ಖಂಡಪೀಠದ ಮುಂದೆ ಆಗಸ್ಟ್ 21 ರಂದು ಪ್ರಾಥಮಿಕ ವಿಚಾರಣೆ ನಡೆಯಿತು. ಈ ಅರ್ಜಿಯ ಮುಂದಿನ ವಿಚಾರಣೆ ಸೆಪ್ಟೆಂಬರ್ 23 ರಂದು ನಡೆಯಲಿದೆ. ಮುಕ್ತಾ ದಾಭೋಲ್ಕರ್ ಅವರು ನ್ಯಾಯವಾದಿ ಅಭಯ್ ನೆವಗಿ ಮೂಲಕ ಈ ಮೇಲ್ಮನವಿ ಸಲ್ಲಿಸಿದ್ದಾರೆ. ಡಾ. ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಡಾ. ವೀರೇಂದ್ರಸಿಂಹ ತಾವಡೆ, ನ್ಯಾಯವಾದಿ ಸಂಜೀವ್ ಪುನಾಳೆಕರ್ ಮತ್ತು ಸನಾತನ ಸಾಧಕ ಶ್ರೀ. ವಿಕ್ರಮ ಭಾವೆ ಅವರನ್ನು ಖುಲಾಸೆಗೊಳಿಸಿದೆ ಹಾಗೂ ಸರ್ವಶ್ರೀ ಸಚಿನ್ ಅಂದುರೆ ಮತ್ತು ಶರದ್ ಕಳಸ್ಕರ್ ಅವರಿಗೆ ಜೀವಾವಧಿಯ ಶಿಕ್ಷೆ ವಿಧಿಸಿದೆ.