Muslims Leaving Islam : ಜಗತ್ತಿನಾದ್ಯಂತದಲ್ಲಿನ ಮುಸಲ್ಮಾನರು ತಮ್ಮ ಧರ್ಮ ಬಿಡುತ್ತಿದ್ದಾರೆ !

  • ಅಮೇರಿಕಾದಲ್ಲಿನ ೧೩ ಲಕ್ಷ ಜನರು ಇಸ್ಲಾಂ ಧರ್ಮವನ್ನು ತ್ಯಜಿಸಿದ್ದಾರೆ !

  • ಇಸ್ಲಾಮಿನ ಕಲಿಕೆಯಲ್ಲಿ ಒಪ್ಪಿಗೆ ಇಲ್ಲದ್ದರಿಂದ ಧರ್ಮ ತ್ಯಜಿಸುತ್ತಿದ್ದಾರೆ ಎಂದು ಜನರ ಅಭಿಪ್ರಾಯ !

ನವ ದೆಹಲಿ – ‘ಪ್ಯೂ ರಿಸರ್ಚ್ ಸೆಂಟರ್’ನ ೨೦೧೯ ರ ವರದಿಯ ಪ್ರಕಾರ ಅಮೇರಿಕಾದಲ್ಲಿನ ಸುಮಾರು ಶೇಕಡ ೨೩ ರಷ್ಟು ಪ್ರೌಢರು, ಅಂದರೆ ೧೩ ಲಕ್ಷ ಮುಸಲ್ಮಾನರು ಇಸ್ಲಾಮ ಧರ್ಮವನ್ನು ತ್ಯಜಿಸಿದ್ದಾರೆ. ಇದರಲ್ಲಿನ ಸುಮಾರು ಶೇಕಡ ೭ರಷ್ಟು ಜನರು, ಇಸ್ಲಾಮಿನ ಕಲಿಕೆ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

೧. ಜರ್ಮನಿಯಲ್ಲಿ ಪ್ರತಿ ವರ್ಷ ೧೫ ರಿಂದ ೨೦ ಸಾವಿರ ಜನರಿಂದ ಇಸ್ಲಾಂ ತ್ಯಾಗ !

೨೦೨೦ ರಲ್ಲಿ ಜರ್ಮನಿಯ ವಾರ್ತಾ ಪತ್ರಿಕೆ ‘ಡೈ ವೇಲ್ಟ್’ನ ಒಂದು ವರದಿಯಲ್ಲಿ, ಪ್ರತಿ ವರ್ಷ ಜರ್ಮನಿಯಲ್ಲಿ ಸುಮಾರು ೧೫ ರಿಂದ ೨೦ ಸಾವಿರ ಜನರು ಇಸ್ಲಾಂ ಧರ್ಮವನ್ನು ತ್ಯಜಿಸುತ್ತಿದ್ದಾರೆ.

೨. ಯುಕೆಯಲ್ಲಿ ಪ್ರತಿ ವರ್ಷ ೧ ಲಕ್ಷ ಜನರಿಂದ ಇಸ್ಲಾಂ ತ್ಯಾಗ !

ಯುನೈಟೆಡ್ ಕಿಂಗ್ಡಂ, ಎಂದರೆ ಯುಕೆದಲ್ಲಿ ಅನೇಕರು ಇಸ್ಲಾಂ ಧರ್ಮವನ್ನು ತ್ಯಜಿಸುತ್ತಿದ್ದಾರೆ. ‘ಟೈಮ್ಸ್’ ಸಮಾಚಾರ ಪತ್ರಿಕೆಯ ಪ್ರಕಾರ, ಪ್ರತಿವರ್ಷ ಸುಮಾರು ಒಂದು ಲಕ್ಷ ಜನರು ಇಸ್ಲಾಂ ಧರ್ಮವನ್ನು ತ್ಯಜಿಸುತ್ತಿದ್ದಾರೆ.

೩. ಅಷ್ಟೇ ಅಲ್ಲದೆ ಮುಸಲ್ಮಾನ ದೇಶ ಇರಾನದಲ್ಲಿ ಕೂಡ ಮುಸಲ್ಮಾನರು ಇಸ್ಲಾಂ ಧರ್ಮವನ್ನು ತ್ಯಜಿಸಿ ಇತರ ಧರ್ಮವನ್ನು ಸ್ವೀಕರಿಸುತ್ತಿದ್ದಾರೆ. ಇರಾನಿನ ಓರ್ವ ಧಾರ್ಮಿಕ ನಾಯಕರು ೨೦೨೩ ರಲ್ಲಿ, ಬಖ್ತಿಯಾರಿ ಜನಾಂಗದ ಜನರು ಜೋರಾಷ್ಟ್ರೀಯನ್ ಧರ್ಮ ಸ್ವೀಕರಿಸುತ್ತಿದ್ದಾರೆ ಹಾಗೂ ಅನೇಕರು ಕ್ರೈಸ್ತ ಧರ್ಮ ಕೂಡ ಸ್ವೀಕರಿಸಿದ್ದಾರೆ ಎಂದು ಹೇಳಿದ್ದಾರೆ.

೪. ೧೯೮೧ ರಿಂದ ೨೦೨೦ ಈ ಸಮಯದಲ್ಲಿ ಮಧ್ಯಪೂರ್ವದಲ್ಲಿನ ಧರ್ಮದ ಬಗ್ಗೆ ಎಲ್ಲಾಕ್ಕಿಂತ ದೊಡ್ಡ ಸಮೀಕ್ಷೆ ನಡೆಸಲಾಗಿದೆ. ಮಿಶಿಗನ್ ವಿದ್ಯಾಪೀಠವು ನಡೆಸಿರುವ ಈ ಸಮೀಕ್ಷೆಯಲ್ಲಿ, ಟ್ಯೂನಿಶಿಯಾ, ಮೊರೊಕ್ಕೋ ಮತ್ತು ಇರಾಕ್ ಇವುಗಳಂಥ ಮುಸಲ್ಮಾನ ದೇಶದಲ್ಲಿ ಇಸ್ಲಾಂನ ಅನುಕರಣೆ ಮಾಡುವ ಜನರು ಈಗ ತಮ್ಮನ್ನು ನಾಸ್ತಿಕನೆಂದು ಹೇಳುತ್ತಿದ್ದಾರೆ.

೫. ಮುಸಲ್ಮಾನ ದೇಶದಲ್ಲಿ ಯಾರೇ ಇಸ್ಲಾಮ ತ್ಯಜಿಸಿದರೆ, ಅವರಿಗೆ ಕಠಿಣ ಶಿಕ್ಷೆ ವಿಧಿಸುತ್ತಾರೆ; ಆದ್ದರಿಂದ ಬಹಳಷ್ಟು ಜನರು ಅವರ ವರ್ತನೆಯಲ್ಲಿ ಅವರು ಮುಸಲ್ಮಾನರೆಂದು ತೋರಿಸುತ್ತಾರೆ, ಆದರೆ ಪ್ರತ್ಯಕ್ಷದಲ್ಲಿ ಅವರು ಈಗ ಮುಸಲ್ಮಾನರಾಗಿ ಇದ್ದಾರೆ’, ಎಂದು ದೃಢವಾಗಿ ಹೇಳಲು ಸಾಧ್ಯವಿಲ್ಲ.

ಲೆಬನಾನದಲ್ಲಿನ ಸುಮಾರು ಶೇಕಡ ೪೩ ರಷ್ಟು ಮುಸಲ್ಮಾನರು ಮನೆಯಲ್ಲಿ ಇಸ್ಲಾಂ ಪಾಲನೆ ಮಾಡುತ್ತಿಲ್ಲ !

ಲೆಬನಾನದಲ್ಲಿನ ಸುಮಾರು ಶೇಕಡ ೪೩ ರಷ್ಟು ಜನರು, ಅವರು ಮನೆಯಲ್ಲಿ ಅಥವಾ ಅವರ ವೈಯಕ್ತಿಕ ಸ್ಥಳಗಳಲ್ಲಿ ಇಸ್ಲಾಂವನ್ನು ಪಾಲಿಸುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ‘ಅರಬ ಬ್ಯಾರೋಮೀಟರ್’ ಈ ಸಂಶೋಧನೆ ನಡೆಸುವ ಸಂಸ್ಥೆಯಿಂದ ಸುಮಾರು ೨೫ ಸಾವಿರ ಜನರೊಂದಿಗೆ ಮಾತನಾಡಿ ಈ ವರದಿ ತಯಾರಿಸಿತ್ತು.

 

ಸಂಪಾದಕೀಯ ನಿಲುವು

ಭಾರತದಲ್ಲಿ ಹಿಂದುಗಳಿಗೆ ಆಮಿಷ ಒಡ್ಡಿ, ವಂಚಿಸಿ ಅಥವಾ ಬಲವಂತವಾಗಿ ಮತಾಂತರ ಮಾಡಲಾಗುತ್ತದೆ; ಆದರೆ ಜಗತ್ತಿನಾದ್ಯಂತ ಕ್ರೈಸ್ತ ಮತ್ತು ಇಸ್ಲಾಂ ತಾವಾಗಿ ಧರ್ಮ ತ್ಯಜಿಸುವುದು ಅಥವಾ ನಾಸ್ತಿಕರಾಗುವ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹಿಂದೂ ಧರ್ಮದಲ್ಲಿ ಯಾರು ಎಂದು ತಾವಾಗಿ ಧರ್ಮವನ್ನು ಬಿಡುವುದಿಲ್ಲ, ಇದರಿಂದ ಅದರ ಮಹತ್ವ ತಿಳಿಯುತ್ತದೆ !