ಜಗತ್ತಿನಲ್ಲಿ ಅರಾಜಕತೆ ಸೃಷ್ಟಿಸಿ ರಕ್ತಪಾತ ನಡೆಸುವ ಕಮ್ಯುನಿಸ್ಟ್ ಮತ್ತು ಜಿಹಾದಿಗಳ ಷಡ್ಯಂತ್ರ ! – ಅಭಿಜಿತ ಜೋಗ, ಪ್ರಸಿದ್ಧ ಲೇಖಕರು

ಅಭಿಜಿತ ಜೋಗ ಮತ್ತು ಚೇತನ್ ರಾಜಹಂಸ

ಪುಣೆ – ಅಂತರಾಷ್ಟ್ರೀಯ ಮಹತ್ವಾಕಾಂಕ್ಷೆಗಳಿರುವ ಮೂರು ಶಕ್ತಿಗಳು ಇಂದು ಜಗತ್ತಿನಲ್ಲಿ ಕಾರ್ಯನಿರತವಾಗಿದೆ. ‘ಡಿಪ ಸ್ಟೇಟ್’, ಕಮ್ಯುನಿಸ್ಟ್ ಹಾಗೂ ‘ಸೆಮಿಟಿಕ್ ಧರ್ಮ’ (ಮಧ್ಯ ಪೂರ್ವದಲ್ಲಿ ಉದಯಿಸಿದ ಧರ್ಮಗಳು) ಇರುವ ಕ್ರೈಸ್ತ ಚರ್ಚ್ ಮತ್ತು ಜಿಹಾದಿ ಇಸ್ಲಾಂ ! ನಮ್ಮ ಗುರುತು ಮತ್ತು ಆತ್ಮ ಗೌರವ ಕಾಪಾಡುವ ಹಾಗೂ ದೇಶ ಹಿತದ ಸ್ವತಂತ್ರ ನೀತಿ ರೂಪಿಸುವ ರಾಷ್ಟ್ರಗಳು ಅವರ ಕಣ್ಣಿಗೆ ಚುಚ್ಚುತ್ತದೆ. ಈ ದೇಶಗಳಲ್ಲಿ ಅರಾಜಕತೆ ಮತ್ತು ಹಿಂಸಾಚಾರ ಭೋಗಿಲೆಬ್ಬಿಸಿ ರಕ್ತಪಾತ ನಡೆಸಲು ಈ ಶಕ್ತಿಗಳು ಪ್ರಯತ್ನಿಸುತ್ತಿರುತ್ತವೆ. ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ಇದರ ಯಶಸ್ವಿ ಪ್ರಯೋಗ ಆಯಿತು ಮತ್ತು ಈಗ ಭಾರತದಲ್ಲಿ ಕೂಡ ಅದೇ ನಡೆಯುತ್ತಿದೆ ಎಂದು ‘ಅಸತ್ಯಮೇವ ಜಯತೆ’ ಈ ಪುಸ್ತಕದ ಲೇಖಕರು ಮತ್ತು ಕಮ್ಯುನಿಷ್ಟರ ಆಳವಾದ ಸಂಶೋಧಕ ಶ್ರೀ. ಅಭಿಜೀತ ಜೋಗ್ ಇವರು ಗಂಭೀರ ಹೇಳಿಕೆ ನೀಡಿದರು.

ಕಾರ್ಯಕ್ರಮಕ್ಕೆ ಉಪಸ್ಥಿತ ಹಿಂದೂ ಧರ್ಮಪ್ರೇಮಿಗಳು

ಅವರು ಸನಾತನ ಸಂಸ್ಥೆ ಆಯೋಜಿಸಿರುವ ಅಂಧಶ್ರದ್ಧಾ ನಿರ್ಮೂಲನ ಕಿ ಛುಪಾ ಶಹರಿ ನಕ್ಸಲವಾದ’ ಈ ವಿಷಯದ ಕುರಿತು ಇಲ್ಲಿಯ ಟಿಳಕವಾಡ ಪರಿಸರದಲ್ಲಿ ಇರುವ ‘ಲೋಕಮಾನ್ಯ ಸಭಾಗೃಹ’ದಲ್ಲಿ ಆಯೋಜಿಸಿರುವ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಆ ಸಮಯದಲ್ಲಿ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರು ಶ್ರೀ. ಚೇತನ ರಾಜಹಂಸ ಇವರು ಕೂಡ ಉಪಸ್ಥಿತರಿಗೆ ಮಾರ್ಗದರ್ಶನ ನೀಡಿದರು.

ಡಾ. ದಾಭೋಲ್ಕರ್-ಪಾನಸರೆ ಹತ್ಯೆಯಲ್ಲಿ ಸನಾತನ ಸಂಸ್ಥೆಯನ್ನು ಸಿಲುಕಿಸುವ ಹಿಂದೆ ಅಂನಿಸ ಮತ್ತು ನಗರ ನಕ್ಸಲಿಸಂ ಕೈವಾಡ ! – ಚೇತನ ರಾಜಹಂಸ ,ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ

ಚೇತನ ರಾಜಹಂಸ

ಸನಾತನ ಧರ್ಮ ನಾಶ ಮಾಡುವುದಕ್ಕಾಗಿ ನಗರ ನಕ್ಸಲಿಸಂನಿಂದ ನಿರಂತರ ಷಡ್ಯಂತ್ರಗಳು ರೂಪಿಸಲಾಗುತ್ತಿದೆ. ಡಾಕ್ಟರ್ ನರೇಂದ್ರ ದಾಬೋಲ್ಕರ್- ಕಾ. ಗೋವಿಂದ ಪಾನಸರೆ ಮುಂತಾದ ಪ್ರಗತಿಪರರ ಹತ್ಯೆಯ ಪ್ರಕರಣದಲ್ಲಿ ಸನಾತನ ಸಂಸ್ಥೆಯನ್ನು ತಪ್ಪಿತಸ್ಥನ್ನಾಗಿ ಮಾಡಲು ಅಂಧಶ್ರದ್ಧಾ ನಿರ್ಮೂಲನೆ ಸಮಿತಿ ಮತ್ತು ನಗರ ನಕ್ಸಲಿಸಂ ಇವರು ಷಡ್ಯಂತ್ರ ರೂಪಿಸಿದ್ದರು. ಇವರಿಂದ ಸನಾತನ ಸಂಸ್ಥೆಯನ್ನು ತಪ್ಪಿತಸ್ಥನನ್ನಾಗಿ ಮಾಡಿ ಬಲಿಪಶು ಮಾಡುವ ಪ್ರಯತ್ನ ಮಾಡುತ್ತಿದ್ದರು. ನಗರ ನಕ್ಸಲಿಸಂ ಜೊತೆಗೆ ಸಂಬಂಧ ಹೊಂದಿರುವ ಡಾ. ದಾಭೋಲ್ಕರ್, ಕಾ. ಪಾನಸರೆ, ಪ್ರಾ. ಕಲ್ಬುರ್ಗಿ, ಕಮ್ಯುನಿಸ್ಟ್ ಪತ್ರಕರ್ತೆ ಗೌರಿ ಲಂಕೇಶ್ ಈ ೪ ಹತ್ಯಗಳನ್ನು ದೇಶದಲ್ಲಿನ ಕಮ್ಯುನಿಸ್ಟ್ ವಿಚಾರಧಾರೆಯ ಗಣ್ಯರು ‘ಪ್ರಶಸ್ತಿ ಹಿಂತಿರುಗಿಸುವುದು’ ಈ ಅಭಿಯಾನದಿಂದ ಅವರು ಭಾರತದಲ್ಲಿ ವಾಸಿಸಲು ಭಯ ಅನಿಸುತ್ತದೆ ಎಂದು ಕೂಗಾಡಲು ಆರಂಭಿಸಿದ್ದರು. ಮ. ಗಾಂಧಿಯ ಹತ್ಯೆಯ ನಂತರ ದೇಶದಲ್ಲಿನ ಇದೆ ೪ ಹತ್ಯೆಗಳ ನಡೆದಿರುವಂತಹ ವಾತಾವರಣ ನಿರ್ಮಿಸಲಾಯಿತು; ಆದರೆ ಭಾರತದಲ್ಲಿ ಕಳೆದ ೨೫ ವರ್ಷಗಳಲ್ಲಿ ನಕ್ಸಲರಿಂದ ೧೪ ಸಾವಿರಗಿಂತಲೂ ಹೆಚ್ಚಿನ ಸೈನಿಕರು, ಪೊಲೀಸರು, ರಾಜಕೀಯ ನಾಯಕರು ಹಾಗೂ ಸಾಮಾನ್ಯ ಜನರ ಹತ್ಯೆಗಳು ನಡೆದಿದ್ದವು, ದೇಶಾದ್ಯಂತ ಕಮಲೇಶ ತಿವಾರಿ, ಕಿಶನ್ ಬರವಾಡ, ಪ್ರವೀಣ್ ನೆಟ್ಟಾರು, ಪ್ರಶಾಂತ ಪೂಜಾರಿ ಇವರಂತಹ ಸಾವಿರಾರು ಹಿಂದುತ್ವವಾದಿಗಳ ಯಾವೆಲ್ಲ ಹತ್ಯೆಗಳು ಮಾಡಲಾಯಿತು, ಇದರ ಬಗ್ಗೆ ಎಂದಿಗೂ ಚರ್ಚಿಸಲಾಗುವುದಿಲ್ಲ ಎಂದು ಹೇಳಿದರು.

ಡಾ. ದಾಭೋಲ್ಕರ್ ಹತ್ಯೆಯ ಘಟನೆಯಲ್ಲಿ ನ್ಯಾಯಾಲಯದಿಂದ ಹಿಂದೂ ಜನಜಾಗೃತಿ ಸಮಿತಿಯ ಡಾ. ವೀರೇಂದ್ರ ಸಿಂಹ ತಾವಡೇ, ಸನಾತನ ಸಂಸ್ಥೆಯ ಸಾಧಕ ಶ್ರೀ. ವಿಕ್ರಮ ಭಾವೆ ಮತ್ತು ಹಿಂದೂ ವಿಧಿಜ್ಞ ಪರಿಷತ್ತಿನ ನ್ಯಾಯವಾದಿ ಸಂಜೀವ ಪುನಾಳೇಕರ ಇವರನ್ನು ಖುಲಾಸೆಗೊಳಿಸಿದರು. ಡಾ. ತಾವಡೇ ಇವರಿಗೆ ಈ ಪ್ರಕರಣದಲ್ಲಿ ೮ ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಯಿತು. ಇದು ಅವರ ಮೇಲಿನ ಅನ್ಯಾಯವಾಗಿದೆ. ಡಾ. ತಾವಡೇ ಇವರ ವಿರುದ್ಧ ಕೇಂದ್ರ ತನಿಖಾದಳ ದೃಢವಾದ ಸಾಕ್ಷಿಗಳು ಪ್ರಸ್ತುತಪಡಿಸಲು ಸಾಧ್ಯವಾಗಲಿಲ್ಲ. ಅದರ ನಂತರ ಕೂಡ ಡಾ. ತಾವಡೆ ಇವರಿಗೆ ಜಾಮೀನು ದೊರೆಯದೆ ಇರುವುದು, ಇದು ಅನ್ಯಾಯವೇ ಆಗಿದೆ. ಶ್ರೀ. ವಿಕ್ರಮ ಬಾವೆ ಇವರು ೨ ವರ್ಷ ಮತ್ತು ನ್ಯಾಯವಾದಿ ಸಂಜೀವ ಪುನಾಳೆಕರ ಇವರು ೪೨ ದಿನ ಜೈಲಿನಲ್ಲಿ ಇರಬೇಕಾಯಿತು. ಈ ಮೂರು ಜನರಿಗೆ ಆಗಿರುವ ವೈಯಕ್ತಿಕ ನಷ್ಟ ಯಾರು ಭರಿಸುವರು ? ಎಂದು ಶ್ರೀ. ಚೇತನ ರಾಜಹಂಸ ಇವರು ಮಹತ್ವಪೂರ್ಣ ಪ್ರಶ್ನೆಯನ್ನು ಮುಂದಿಟ್ಟರು.