Malaysian PM Anwar Ibrahim : ಮೂರು ದಿನಗಳ ಭಾರತ ಪ್ರವಾಸ ಕೈಗೊಂಡ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ !

ಮಲೇಷ್ಯಾ ಪ್ರಧಾನಿಯವರ ಹಿಂದೂ ವಿರೋಧಿ ಮಾಹಿತಿ ವೈರಲ್ !

ಮಲೇಷ್ಯಾ ಪ್ರಧಾನಿ ದಾತೊ ಸೆರಿ ಅನ್ವರ್ ಬಿನ್ ಇಬ್ರಾಹಿಂ, ಪ್ರಧಾನಿ ನರೇಂದ್ರ ಮೋದಿ

ಕೌಲಾಲಂಪುರ್ (ಮಲೇಷ್ಯಾ) – ಮಲೇಷ್ಯಾ ಪ್ರಧಾನಿ ದಾತೊ ಸೆರಿ ಅನ್ವರ್ ಬಿನ್ ಇಬ್ರಾಹಿಂ ಅವರು ತಮ್ಮ ಮೂರು ದಿನಗಳ ಭಾರತ ಭೇಟಿಗಾಗಿ ಪ್ರಸ್ತುತ ನವದೆಹಲಿಯಲ್ಲಿದ್ದಾರೆ. ಇಬ್ರಾಹಿಂ ಅವರು ಮಲೇಷ್ಯಾ ಪ್ರಧಾನಿಯಾಗಿ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದಾರೆ. ಅನ್ವರ್ ಇಬ್ರಾಹಿಂ ಅವರ ಭೇಟಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುತ್ತದೆ ಎಂದು ಹೇಳಲಾಗಿದೆ. ಮತ್ತೊಂದೆಡೆ, ಅನ್ವರ್ ಇಬ್ರಾಹಿಂ ಅವರು ಹಿಂದೂ ವಿರೋಧಿ ಎಂಬ ಮಾಹಿತಿಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

1. ಅನ್ವರ್ ಇಬ್ರಾಹಿಂ ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯ ಜೀವನ ಆರಂಭಿಸಿದ್ದರು. 1971 ರಲ್ಲಿ, ಇಬ್ರಾಹಿಂ ಮಲೇಷ್ಯಾದಲ್ಲಿ ಮುಸ್ಲಿಂ ಯುವ ಚಳುವಳಿಯನ್ನು ಸ್ಥಾಪಿಸಿದ್ದರು.

2. 2023ರ ಆಗಸ್ಟ್‌ನಲ್ಲಿ ಹಿಂದೂ ಯುವಕನನ್ನು ಇಸ್ಲಾಂಗೆ ಮತಾಂತರಿಸಿದ ಪ್ರಕರಣದಲ್ಲಿ ಅನ್ವರ್ ಇಬ್ರಾಹಿಂ ಹೆಸರು ಕೇಳಿಬಂದಿತ್ತು. ಕ್ಲಾಂಗ್‌ನ ಮಸೀದಿಯಲ್ಲಿ ಶುಕ್ರವಾರದ ನಮಾಜ್ ನಂತರ ಹಿಂದೂ ಯುವಕನೊಬ್ಬನನ್ನು ಇಸ್ಲಾಂಗೆ ಮತಾಂತರಿಸಿರುವುದಾಗಿ ಇಬ್ರಾಹಿಂ ಹೇಳಿಕೊಂಡಿದ್ದರು. ಆದರೆ ಈ ವಿಷಯವನ್ನು ಮಲೇಷ್ಯಾ, ಭಾರತ ಸೇರಿದಂತೆ ಹಲವು ದೇಶಗಳು ಟೀಕಿಸಿದ್ದವು.

3. ಜಿಹಾದಿ ಭಯೋತ್ಪಾದಕರ ರೋಲ್ ಮಾಡೆಲ್ ಆಗಿರುವ ಜಾಕಿರ್ ನಾಯಿಕ್ ಭಾರತದಿಂದ ಪರಾರಿಯಾದ ನಂತರ 2017ರಿಂದ ಮಲೇಷ್ಯಾದಲ್ಲಿದ್ದಾನೆ. ಝಾಕಿರ್ ಅಲ್ಲಿನ ಪ್ರಧಾನಿ ಅನ್ವರ್ ಇಬ್ರಾಹಿಂ ಅವರೊಂದಿಗೆ ಹಲವಾರು ಬಾರಿ ಕಾಣಿಸಿಕೊಂಡಿದ್ದಾನೆ. ಭಾರತದಲ್ಲಿ ಹಲವಾರು ಗಂಭೀರ ಅಪರಾಧಗಳ ಅಡಿಯಲ್ಲಿ ಝಾಕಿರ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದು ಅವನನ್ನು ಪರಾರಿಯಾದ ಅಪರಾಧಿ ಎಂದು ಘೋಷಿಸಲಾಗಿದೆ. ಎಷ್ಟೇ ಪ್ರಯತ್ನ ಪಟ್ಟರೂ ಝಾಕಿರ್‌ನನ್ನು ವಾಪಸ್ ತರಿಸುವಲ್ಲಿ ಭಾರತ ಯಶಸ್ವಿಯಾಗಲಿಲ್ಲ. ಮಲೇಷ್ಯಾ ಸರಕಾರವು ಆತನನ್ನು ಬೆಂಬಲಿಸುತ್ತಿದೆ.

ಸಂಪಾದಕೀಯ ನಿಲುವು

ಭಾರತದಿಂದ ಪರಾರಿಯಾಗಿದ್ದ ಜಿಹಾದಿ ಜಾಕಿರ್ ನಾಯಿಕ್ ಮಲೇಷ್ಯಾದಲ್ಲಿದ್ದು, ಅಲ್ಲಿನ ಸರಕಾರ ಆತನಿಗೆ ಬೆಂಬಲ ನೀಡುತ್ತಿರುವುದು ಎಲ್ಲವನ್ನು ತಿಳಿಸುತ್ತದೆ !