|
ನವ ದೆಹಲಿ – ಬಿಹಾರದ ಸರಕಾರಿ ಅನುದಾನಿತ ಕೆಲವು ಮದರಸಾಗಳಲ್ಲಿ ಧಾರ್ಮಿಕ ಕಟ್ಟರವಾದವನ್ನು ಕಲಿಸಲಾಗುತ್ತಿದೆ. ಇಲ್ಲಿ ಹಿಂದೂಗಳಿಗೆ ‘ಕಾಫಿರ್’ (ಮೂರ್ತಿಪೂಜಕರು, ನಾಸ್ತಿಕರು ಇತ್ಯಾದಿ) ಎಂದು ಹೇಳಲಾಗುತ್ತದೆ. ಇಲ್ಲಿ ಕಲಿಸಲಾಗುವ ಅನೇಕ ಪುಸ್ತಕಗಳು ಪಾಕಿಸ್ತಾನದಲ್ಲಿ ಮುದ್ರಣಗೊಂಡಿರುವುದು ಬೆಳಕಿಗೆ ಬಂದಿದೆ. ಸರಕಾರ ಮದರಸಾ ಬೋರ್ಡ್‌ಅನ್ನು ವಿಸರ್ಜಿಸಬೇಕು ಎಂದು `ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗ’ದ ಅಧ್ಯಕ್ಷ ಪ್ರಿಯಾಂಕ್ ಕಾನೂನಗೊ ಅವರು ಒತ್ತಾಯಿಸಿದ್ದಾರೆ.
1. ಪ್ರಿಯಾಂಕ ಕಾನೂನಗೊ ಅವರು ತಮ್ಮ ಎಕ್ಸ್ ನಲ್ಲಿ ಕೆಲವು ಪುಸ್ತಕಗಳ ಛಾಯಾಚಿತ್ರಗಳನ್ನು ಪ್ರಕಟಿಸಿದ್ದಾರೆ ಮತ್ತು ಅದರಲ್ಲಿ, ‘ತಲೀಮ್ ಉಲ್ ಇಸ್ಲಾಂ’ ಮತ್ತು ಇತರ ಪುಸ್ತಕಗಳನ್ನು ಬಿಹಾರ ರಾಜ್ಯದ ಸರಕಾರಿ ಅನುದಾನಿತ ಮದರಸಾಗಳಲ್ಲಿ ಕಲಿಸಲಾಗುತ್ತಿದೆ ಎಂದು ಬರೆದಿದ್ದಾರೆ. ಈ ಪುಸ್ತಕಗಳಲ್ಲಿ ಮುಸ್ಲಿಮೇತರರನ್ನು ‘ಕಾಫಿರ್’ ಎಂದು ಉಲ್ಲೇಖಿಸಲಾಗಿದೆ. ಈ ಮದರಸಾಗಳಲ್ಲಿ ಹಿಂದೂ ಮಕ್ಕಳಿಗೂ ಪ್ರವೇಶ ನೀಡಲಾಗುತ್ತದೆ, ಎನ್ನುವ ಮಾಹಿತಿ ಸಿಕ್ಕಿದೆ; ಆದರೆ ಬಿಹಾರ ಸರಕಾರ ಸಂಖ್ಯೆಯ ಪ್ರಮಾಣದ ವಿಷಯದಲ್ಲಿ ಅಧಿಕೃತ ಮಾಹಿತಿಯನ್ನು ನೀಡುತ್ತಿಲ್ಲ.
2. ‘ಬಿಹಾರ ಮದರಸಾ ಬೋರ್ಡ್’ಯ ಸಂದರ್ಭವನ್ನು ಉಲ್ಲೇಖಿಸುತ್ತಾ, ಪ್ರಿಯಾಂಕ ಕಾನೂನುಗೊ ತಮ್ಮ ಮಾತನ್ನು ಮುಂದುವರಿಸಿ, ಮದರಸಾದ ಪಠ್ಯಪುಸ್ತಕದಲ್ಲಿ `ಯುನಿಸೆಫ’ ಸಿದ್ಧಪಡಿಸಿದೆ. ಯುನಿಸೆಫ್ ಮತ್ತು ಮದರಸಾ ಬೋರ್ಡ್ ನಡೆಸಲಾಗುತ್ತಿರುವ ಓಲೈಕೆಯ ಇದು ತುದಿಯಾಗಿದೆ. ಬಾಲ-ಸಂರಕ್ಷಣೆಯ ಹೆಸರಿನಡಿಯಲ್ಲಿ ಸರಕಾರದಿಂದ ದೇಣಿಗೆ ಮತ್ತು ಅನುದಾನವನ್ನು ಪಡೆದು ಕಟ್ಟರವಾದಿ ಅಭ್ಯಾಸಕ್ರಮವನ್ನು ಸಿದ್ಧಪಡಿಸುವುದು ಇದು `ಯುನಿಸೆಫ’ ಕೆಲಸವಲ್ಲ. ಈ ಕೃತ್ಯ ಭಾರತೀಯ ಸಂವಿಧಾನ ವಿರುದ್ಧವಾಗಿದೆ. ಈ ವಿಷಯದಲ್ಲಿ ವಿಶ್ವಸಂಸ್ಥೆಯಿಂದ ತನಿಖೆ ಮತ್ತು ಮೇಲ್ವಿಚಾರಣೆ ನಡೆಸಬೇಕು.
3. ಪ್ರಿಯಾಂಕ ಕಾನುನುಗೋ ಮಾತನಾಡಿ, ಮದರಸಾ ಯಾವುದೇ ರೂಪದಲ್ಲಿ ಮಕ್ಕಳ ಮೂಲಭೂತ ಶಿಕ್ಷಣದ ಸ್ಥಳವಲ್ಲ. ಮಕ್ಕಳಿಗೆ ಶಾಲೆಗಳಲ್ಲಿ ಶಿಕ್ಷಣ ನೀಡಬೇಕು. ಕನಿಷ್ಠಪಕ್ಷ ಮದರಸಾಗಳಲ್ಲಿ ಹಿಂದೂ ಮಕ್ಕಳಿಗೆ ಶಿಕ್ಷಣ ನೀಡಬೇಡಿ. ಕನೂನಗೊ ಅವರು ಪೋಸ್ಟ್‌ನಲ್ಲಿ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರ ಜೊತೆಗೆ ವಿಶ್ವಸಂಸ್ಥೆಯನ್ನು ‘ಟ್ಯಾಗ್’ (ಸೂಚಿಸುವುದು) ಮಾಡಿದ್ದಾರೆ.
ಪುಸ್ತಕಗಳಲ್ಲಿ ಏನು ಮುದ್ರಿಸಲಾಗಿದೆ ?
1. ಪ್ರಿಯಾಂಕ ಕಾನುನಗೋ ಅವರು ಪ್ರಸಾರ ಮಾಡಿದ ‘ಸ್ಕ್ರೀನ್‌ಶಾಟ್’ನ ಮೇಲೆ ‘ತಾಲೀಮ್ ಉಲ್ ಇಸ್ಲಾಂ’ (ಇಸ್ಲಾಂನ ಶಿಕ್ಷಣ). ಈ ಶೀರ್ಷಿಕೆಯಿದೆ. `ನಿನ್ನನ್ನು ಯಾರು ನಿರ್ಮಾಣ ಮಾಡಿದರು? ಈ ಮೊದಲ ಪ್ರಶ್ನೆಯ ಉತ್ತರದಲ್ಲಿ `ಅಲ್ಲಾ ನನ್ನನ್ನು ಮತ್ತು ಜಗತ್ತಿಲ ಎಲ್ಲವನ್ನೂ ನಿರ್ಮಾಣ ಮಾಡಿದ್ದಾನೆ’ ಎಂದು ಬರೆಯಲಾಗಿದೆ.
2. ಎರಡನೆಯ ಪ್ರಶ್ನೆಯಲ್ಲಿ, ‘ಅಲ್ಲಾಹನು ಜಗತ್ತನ್ನು ಹೇಗೆ ಸೃಷ್ಟಿಸಿದನು?’ ಇದರ ಉತ್ತರ `ಅಲ್ಲಾನು ತನ್ನ ಶಕ್ತಿಯಿಂದ ಮತ್ತು ಆದೇಶದಿಂದ ಜಗತ್ತನ್ನು ನಿರ್ಮಾಣ ಮಾಡಿದನು’ ಎಂದು ಬರೆಯಲಾಗಿದೆ.
3. ಈ ಪುಸ್ತಕದಲ್ಲಿ ಯಾರು ಅಲ್ಲಾನ ಮೇಲೆ ವಿಶ್ವಾಸವಿಡುವುದಿಲ್ಲವೋ, ಅವರನ್ನು `ಕಾಫಿರ್’ ಎಂದು ಕರೆಯಲಾಗುತ್ತದೆ ಮತ್ತು ಯಾರು ಇತರರನ್ನು ಪೂಜಿಸುತ್ತಾರೆಯೋ, ಅವರನ್ನು ‘ಮುಶ್ರಿಕ್’ ಎಂದು ಕರೆಯಲಾಗಿದೆ.
4. ಇದೇ ಪುಸ್ತಕದಲ್ಲಿ ಕೇಳಿರುವ ಇನ್ನೊಂದು ಪ್ರಶ್ನೆಯೆಂದರೆ, ‘ಬಹುದೇವರನ್ನು ನಂಬುವವರು (ಒಂದಕ್ಕಿಂತ ಹೆಚ್ಚು ದೇವರನ್ನು ನಂಬುವವರು) ಮೋಕ್ಷವನ್ನು ಪಡೆಯುತ್ತಾರೆಯೇ?’ ಉತ್ತರದಲ್ಲಿ `ಎಂದಿಗೂ ಇಲ್ಲ’ ಎಂದು ಬರೆಯಲಾಗಿದೆ. ಅಲ್ಲದೇ, ಬಹುದೇವರನ್ನು ನಂಬುವವರಿಗೆ ಶಿಕ್ಷಿಸಲಾಗುತ್ತದೆ ಎಂದೂ ಹೇಳಲಾಗಿದೆ.
5. ಇದಲ್ಲದೇ ಪುಸ್ತಕಗಳ ಹಲವು ಪುಟಗಳಲ್ಲಿ ಇಸ್ಲಾಮಿಕ್ ಚಿಹ್ನೆಗಳನ್ನು ಮುದ್ರಿಸಲಾಗಿದೆ. ಈ ಚಿಹ್ನೆಗಳಲ್ಲಿ ಸೌದಿ ಅರೇಬಿಯಾದ ಮಸೀದಿ ‘ಅಲ್ ನವಾಬಿ’ ಯೂ ಸೇರಿದೆ.
(‘UNICEF’ ಎಂದರೆ ‘ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್’)
In Bihar, madr@$$a$ running on government grants it is taught that Hindus are ‘Kafir’ – Pakistan published books are used ! – @KanoongoPriyank @NCPCR_ Chairperson
In the madr@$$a$, it is taught that Hindus are ‘Kafir’.
The madr@$$a curriculum was prepared by @UNICEF
The NCPCR… pic.twitter.com/ulPvSAWJZT
— Sanatan Prabhat (@SanatanPrabhat) August 20, 2024
ಸಂಪಾದಕೀಯ ನಿಲುವು
|