|
ಮೊರಾದಾಬಾದ್ (ಉತ್ತರ ಪ್ರದೇಶ) – ಜಿಲ್ಲೆಯ ಪೈಗಂಬರಪುರ ಸುಖವಾಸಿಲಾಲ್ ಎಂಬ ಗ್ರಾಮದಲ್ಲಿ, ಮಾ ಶ್ರೀ ಚಾಮುಂಡಮಾತೆಯ ದೇವಾಲಯವಿದೆ, ಇದು ಆ ಪ್ರದೇಶದ ಎಲ್ಲಾ ಹಿಂದೂಗಳ ಪ್ರಮುಖ ಶ್ರದ್ಧಾಸ್ಥಾನವಾಗಿದೆ. ಈ ದೇವಸ್ಥಾನದಲ್ಲಿ ಇಬ್ಬರು ಬುರ್ಖಾ ಹಾಕಿದ ಮಹಿಳೆಯರು ಹಾಗೂ ಅಪರಿಚಿತ ವ್ಯಕ್ತಿಯೊಬ್ಬರು ಮಾಂಸ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿಸುತ್ತಾ ಗ್ರಾಮಸ್ಥರು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ವೇಳೆ ಭಜರಂಗದಳ ಕಾರ್ಯಕರ್ತರು ಘಟನೆಯನ್ನು ವಿರೋಧಿಸಿದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಆ.16 ರಂದು ಗ್ರಾಮದ ಶ್ರೀ ಚಾಮುಂಡಮಾತಾ ದೇವಸ್ಥಾನದ ಶ್ರೀ ಚಾಮುಂಡಮಾತೆಯ ವಿಗ್ರಹದ ಮುಂದೆಯೇ ಮಾಂಸದ ತುಂಡುಗಳು ಪತ್ತೆಯಾಗಿದ್ದವು. ಅದು ಕೋಳಿ ಮಾಂಸ ಎಂದು ಹೇಳಲಾಗುತ್ತದೆ. ಈ ಹಿಂದೆ ಈ ದೇವಾಲಯದಿಂದ ಗಂಟೆಗಳನ್ನು ಕಳವು ಮಾಡಲಾಗಿತ್ತು ಮತ್ತು ವಿಗ್ರಹಗಳನ್ನು ಸಹ ಒಡೆಯಲಾಗಿದೆ ಎಂದು ಹೇಳಲಾಗುತ್ತದೆ.
ಈ ಘಟನೆಯ ನಂತರ, ದೇವಾಲಯದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಯಿತು. ದೇವಾಲಯದ ಮುಖ್ಯ ದ್ವಾರದಲ್ಲಿ ಮಾಂಸದ ತುಂಡುಗಳ ಜೊತೆಗೆ ರಕ್ತವು ನೆಲದ ಮೇಲೆ ಚೆಲ್ಲಿರುವುದು ವೀಡಿಯೊದಲ್ಲಿ ಕಾಣುತ್ತದೆ.
Meat thrown by 2 burqa-clad women in front of the Murti at Maa Chamunda Devi Mandir
📍Paigambarpur village (Uttar Pradesh)
Pro-Hindu organisations protest
When will we realise that until such villages are renamed ‘Rampur’, such incidents will continue unabated?
Whether… pic.twitter.com/n0TlR7rD1Z
— Sanatan Prabhat (@SanatanPrabhat) August 19, 2024
ಸಂಪಾದಕೀಯ ನಿಲುವು
|