ಮಾಸ್ಕೋ (ರಷ್ಯಾ) – ಉಕ್ರೇನ್‌ನ ಸೇನೆಯು ಅಂದಾಜು 10 ಕಿಮೀ ರಷ್ಯಾದೊಳಗೆ ನುಸುಳಿ 1 ಸಾವಿರ ಕಿಮೀ ಪ್ರದೇಶವನ್ನು ವಶಪಡಿಸಿಕೊಂಡಿದೆ. ಎರಡನೆಯ ಮಹಾಯುದ್ಧದ ನಂತರ ಮೊದಲ ಬಾರಿಗೆ, ರಷ್ಯಾದ ಪ್ರದೇಶವು ಶತ್ರುಗಳ ವಶಕ್ಕೆ ಹಾದುಹೋಯಿತು. ಆದ್ದರಿಂದ, ರಷ್ಯಾದ ಮಿಲಿಟರಿ ಪ್ರಚಂಡ ಒತ್ತಡದಲ್ಲಿದೆ ಮತ್ತು ಉಕ್ರೇನ್‌ಗೆ ಪ್ರತ್ಯುತ್ತರ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಪುಟಿನ್ ಬ್ರಿಟನ್ ನ ಲಂಡನ್ ಮತ್ತು ಅಮೆರಿಕದ ನ್ಯೂಯಾರ್ಕ್ ಮೇಲೆ ಪರಮಾಣುಬಾಂಬ್ ಹಾಕಬೇಕು ಎಂಬ ಬೇಡಿಕೆ ಈಗ ರಷ್ಯಾದಲ್ಲಿ ಜೋರಾಗಿದೆ. ರಷ್ಯಾದ ರಕ್ಷಣಾ ತಜ್ಞ ಸ್ಟಾನಿಸ್ಲಾವ್ ಕ್ರಾಪಿವ್ನಿಕ್ ಇವರು, ಇತ್ತೀಚೆಗೆ ರಷ್ಯಾ ಈಗಾಗಲೇ ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (NATO) ನೊಂದಿಗೆ ಯುದ್ಧ ಮಾಡುತ್ತಿದೆ ಎಂದು ಹೇಳಿದರು. ಈಗ ಲಂಡನ್ ಮತ್ತು ನ್ಯೂಯಾರ್ಕ್ ಅಣುಬಾಂಬ್ ಹಾಕಿ ಸೇಡು ತೀರಿಸಿಕೊಳ್ಳಬೇಕು ಎಂದು ಹೇಳಿದರು. ‘ಅಮೆರಿಕನ್ನರು ಪ್ರಾಣಿಗಳಾಗಿದ್ದಾರೆ ವಿನಃ, ಮನುಷ್ಯರಲ್ಲ!’ ಎಂದೂ ಹೇಳಿದರು.
1. ಫೆಬ್ರವರಿ 2022 ರಲ್ಲಿ ಪ್ರಾರಂಭವಾದ ರಷ್ಯಾ-ಉಕ್ರೇನ್ ಯುದ್ಧವು ಈಗ ಅಪಾಯಕಾರಿ ಹಂತವನ್ನು ತಲುಪಿದೆ. ಎರಡನೆಯ ಮಹಾಯುದ್ಧದ ನಂತರ ಯುರೋಪಿನ ಅತಿದೊಡ್ಡ ನಿರಾಶ್ರಿತರ ಬಿಕ್ಕಟ್ಟನ್ನು ಸೃಷ್ಟಿಸಿದೆ.
2. ಅಮೆರಿಕ, ಬ್ರಿಟನ್ ಮೊದಲಾದ ನ್ಯಾಟೋ ರಾಷ್ಟ್ರಗಳು ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ಗೆ ಅಬ್ಜಗಟ್ಟಲೆ ಡಾಲರ್‌ಗಳಷ್ಟು ಶಸ್ತ್ರಾಸ್ತ್ರ ಮತ್ತು ರಾಜತಾಂತ್ರಿಕ ನೆರವು ನೀಡಿವೆ.
3. ಆಗಸ್ಟ್ 6 ರಂದು, ಉಕ್ರೇನಿಯನ್ ಸೈನ್ಯವು ರಷ್ಯಾದ ಕುರ್ಸ್ಕ್ ಪ್ರದೇಶವನ್ನು ಆಕ್ರಮಿಸಿ 1 ಸಾವಿರ ಕಿಮೀ ಪ್ರದೇಶವನ್ನು ವಶಪಡಿಸಿಕೊಂಡಿತ್ತು.
4. ರಷ್ಯಾದ ಪರಮಾಣು ವಿದ್ಯುತ್ ಸ್ಥಾವರವು ಕುರ್ಸ್ಕ್ ಪ್ರದೇಶದಲ್ಲಿದೆ. ಅಲ್ಲಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತದೆ. ಉಕ್ರೇನ್ ಸೇನೆಯು ಪರಮಾಣು ವಿದ್ಯುತ್ ಸ್ಥಾವರವನ್ನು ಗುರಿಯಾಗಿಸುತ್ತದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ಆರೋಪಿಸಿದ್ದಾರೆ.
5. ಕ್ರಾಪಿವ್ನಿಕ್ ಈ ಅಪಾಯವನ್ನು ಪುನರುಚ್ಚರಿಸುತ್ತಾ, ಕೈವ್ ನಗರವನ್ನು ಭೂಮಿಯ ನಕ್ಷೆಯಿಂದ ಅಳಿಸಿಹಾಕಬೇಕಾಗಿದೆ. ಉಕ್ರೇನ್ ಕಾರ್ಯತಂತ್ರದ ಪರಮಾಣು ಶಸ್ತ್ರಾಸ್ತ್ರಗಳ ಮಿತಿಯನ್ನು ಮೀರಿದೆ. ಇದು ಮುಕ್ತ ಯುದ್ಧವಾಗಿದೆ ಮತ್ತು ಇದಕ್ಕೆ ಪ್ರತ್ಯುತ್ತರ ನೀಡಬೇಕು ಎಂದು ಹೇಳಿದರು.
6. ರಷ್ಯಾಬಳಿ 5 ಸಾವಿರದ 580 ಪರಮಾಣು ಬಾಂಬ್‌ಗಳು ಇದ್ದರೆ, ಅಮೇರಿಕಾ ಬಳಿ 5 ಸಾವಿರದ 444 ಇದೆ.