ಕೋಲಕಾತಾದ ಮಹಿಳಾ ವೈದ್ಯೆಯ ಹತ್ಯೆಯ ಬಗ್ಗೆ ‘ಇಂಡಿಯನ ಮೆಡಿಕಲ ಅಸೋಸಿಯೇಶನ’ ಅಧ್ಯಕ್ಷರಿಂದ ಬಹಿರಂಗ ಪತ್ರ !

ವೈದ್ಯರನ್ನು ರಕ್ಷಿಸುವ ಕಾನೂನುಗಳಲ್ಲಿ ಸುಧಾರಣೆ ಮಾಡಿ ಅದನ್ನು ಮತ್ತಷ್ಟು ಸುದೃಢಗೊಳಿಸಬೇಕು !

ನವ ದೆಹಲಿ – ವೈದ್ಯರನ್ನು ರಕ್ಷಿಸುವ ಕಾನೂನುಗಳಲ್ಲಿ ಸುಧಾರಣೆ ಮಾಡಿ ಅದನ್ನು ಸದೃಢಗೊಳಿಸಬೇಕು. ಭಾರತೀಯ ನ್ಯಾಯ ಸಂಹಿತೆ ಹೆಚ್ಚು ಶಕ್ತಿಯುತವಾಗಬೇಕು. ಭಾರತದ್ವೇಷಿಗಳ ಪಿತೂರಿಗೆ (‘ಡೀಪ್ ಸ್ಟೇಟ್’) ಬಲಿಯಾಗಬಾರದು, ಎಂದು ‘ಇಂಡಿಯನ್ ಮೆಡಿಕಲ ಅಸೋಸಿಯೇಶನ’ ಅಧ್ಯಕ್ಷ ಆರ್.ವಿ. ಅಶೋಕನ ಇವರು ಹೇಳಿದರು. ಕೋಲಕಾತಾದಲ್ಲಿ 31 ವರ್ಷದ ಮಹಿಳಾ ವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ಅಶೋಕನ ಇವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು. ಆಗಸ್ಟ್ 9 ರಂದು ರಾತ್ರಿ, ಕೋಲಕಾತಾದ ಹೆಸರಾಂತ ಆರ್.ಜಿ. ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ಆಸ್ಪತ್ರೆಯಲ್ಲೇ ಈ ಘಟನೆ ನಡೆದಿತ್ತು. ಈ ಕಾರಣದಿಂದ ಅಶೋಕನ್ ಈ ಬಹಿರಂಗ ಪತ್ರ ಬರೆದಿದ್ದಾರೆ.

ಅಶೋಕನ ತಮ್ಮ ಮಾತನ್ನು ಮುಂದುವರಿಸುತ್ತಾ,

1. ಸಂತ್ರಸ್ತೆಯ ಸಾವಿನ ನಂತರ, 10 ಲಕ್ಷ ಮೇಣದಬತ್ತಿಗಳನ್ನು ಬೆಳಗಿಸಲಾಯಿತು. ಯುದ್ಧದ ಸಾವಿರಾರು ಡೋಲು ಬಾರಿಸಲಾಯಿತು. ಪ್ರತಿಯೊಂದು ಭಾರತೀಯ ಕುಟುಂಬವು ತನ್ನ ಮಗಳನ್ನು ಕಳೆದುಕೊಂಡಿದೆ. ತಾಯಂದಿರ ಕೋಪ ತಾರಕ್ಕಕೇರಿತು. ತಂದೆಯಂದಿರು ಮೌನವಾಗಿ ಕಣ್ಣೀರು ಸುರಿಸಿದರು.

2. ಕಿರಿಯ ಸ್ನಾತಕೋತ್ತರ ವೈದ್ಯರು (ರೆಸಿಡೆಂಟ್ ಡಾಕ್ಟರ್) ಎಲ್ಲರಿಗಿಂತ ಮೊದಲು ರಸ್ತೆಗಿಳಿದರು. ಮುಂದಿನ 7 ದಿನ ಅವರು ಮಲಗಲಿಲ್ಲ. ಅವರ ಜಾಗರೂಕತೆ ಮತ್ತು ಅಗ್ನಿಶಕ್ತಿಯೇ ರಾಷ್ಟ್ರದ ಭರವಸೆಯಾಗಿದೆ. ಅವರು ವಾರಕ್ಕೆ 100 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅವರು ವಿರೋದಕ್ಕೆ ಬಗ್ಗಲಿಲ್ಲ.

3. ಡಾಕ್ಟರರು ಅನಾಥನಲ್ಲ. ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದಿವೆ. ವೈದ್ಯರನ್ನು ರಕ್ಷಿಸುವ ಕಾನೂನು ರೂಪಿಸಬೇಕು ಎಂದು ಹೇಳಿದರು.