ಅಂಗಡಿಯಲ್ಲಿ ಮಾರಾಟಕ್ಕಿಟ್ಟ ಚಾಕಲೇಟ್‌ಗಳಲ್ಲಿ ಗಾಂಜಾ ಪತ್ತೆ !

ಭಾಗ್ಯನಗರ (ತೆಲಂಗಾಣ) – ತೆಲಂಗಾಣದಲ್ಲಿ ಸಾಯಬರಾಬಾದ್‌ ಪೊಲೀಸರು ಭಾಗ್ಯನಗರದ ಅಂಗಡಿಯೊಂದರಿಂದ ಗಾಂಜಾ ಇರುವ ಚಾಕಲೇಟ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಚಾಕಲೇಟುಗಳನ್ನು ಆಕರ್ಷಕ ಪ್ಯಾಕೆಟ್ ನೊಂದಿಗೆ ಆಯುರ್ವೇದ ಔಷಧದ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿತ್ತು.

ಉತ್ತರ ಪ್ರದೇಶದಲ್ಲಿ ಈ ಚಾಕಲೇಟ್ ಅನ್ನು ತಯಾರಿಸಲಾಗಿದೆ. ಅದರ ಪ್ಯಾಕೇಟ್ ಮೇಲೆ ಬರೆದಿರುವಂತೆ, 100 ಗ್ರಾಂ ಚಾಕಲೇಟ್‌ನಲ್ಲಿ 14 ಗ್ರಾಂ ಗಾಂಜಾ ಉಪಯೋಗಿಸಲಾಗಿದೆ ಪೋಲೀಸರು ಈ ಅಂಗಡಿಯಿಂದ 200 ಪ್ಯಾಕೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಅಂಗಡಿ ನಡೆಸುತ್ತಿರುವ ಪಾಂಡೆ ಹೆಸರಿನ ವ್ಯಕ್ತಿ ಉತ್ತರ ಪ್ರದೇಶದವನು. ಅಜೀರ್ಣ ಮತ್ತು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಗೆ 2 ಬಾರಿ ನೀರಿನೊಂದಿಗೆ ಸೇವಿಸಬಹುದು ಎಂದು ಈ ಪ್ಯಾಕೆಟ್‌ಮೇಲೆ ಬರೆಯಲಾಗಿತ್ತು. ತೆಲಂಗಾಣ ಮಾದಕ ಪದಾರ್ಥ ನಿಗ್ರಹ ಇಲಾಖೆಯು ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಗಾಂಜಾ ಮಿಶ್ರಿತ ಚಾಕಲೇಟ್‌ ತಯಾರಿಸುವರ ಅನೇಕರ ಗುರುತು ಕಳುಹಿಸಿದೆ.