ಕೆಲವೇ ವರ್ಷಗಳಲ್ಲಿ ಸ್ವೀಡನ್ ಇಸ್ಲಾಮಿಕ್ ದೇಶವಾಗಲಿದೆ !

ಸ್ವೀಡನ್‌ನ ಸ್ಥಳೀಯ ನಾಗರಿಕರ ಸಂಖ್ಯೆ ಕಡಿಮೆಯಾಗುತ್ತಿದ್ದು ಮುಸ್ಲಿಂ ನಿರಾಶ್ರಿತರ ಸಂಖ್ಯೆ ಹೆಚ್ಚುತ್ತಿದೆ!

ಸ್ಟಾಕ್‌ಹೋಮ್ (ಸ್ವೀಡನ್) – ಸ್ವೀಡನ್‌ನ ಸ್ಥಳೀಯರು ಅಮೆರಿಕದಂತಹ ದೇಶಗಳಲ್ಲಿ ವಲಸೆ ಹೋಗುತ್ತಿದ್ದರೆ ನಿರಾಶ್ರಿತರಿಗೆ ಸ್ವೀಡನ್ ನೆಚ್ಚಿನ ತಾಣವಾಗಿದೆ. ಸ್ವೀಡನ್‌ನಲ್ಲಿ ನಿರಾಶ್ರಿತರ ಸಂಖ್ಯೆ 20 ಲಕ್ಷಕ್ಕೂ ಮೀರಿದೆ, ಇದು ಸ್ವೀಡನ್‌ನ ಒಟ್ಟು ಜನಸಂಖ್ಯೆಯ ಐದನೇ ಒಂದು ಭಾಗವಾಗಿದೆ, ಅಂದರೆ 20% ದಷ್ಟು ಇದೆ. ಮತ್ತೊಂದೆಡೆ, ಸ್ವೀಡನ್ ಸರಕಾರವು ತಮ್ಮ ದೇಶವನ್ನು ತೊರೆಯುವವರಿಗೆ ಹಣ ನೀಡುತ್ತಿದೆ! ಇದರಿಂದಾಗಿ ಸ್ವೀಡನ್ ನ ಸ್ಥಳೀಯ ನಾಗರಿಕರು ಅಮೆರಿಕದಂತಹ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇಷ್ಟಾದರೂ ಸ್ವೀಡನ್ ನ ಜನಸಂಖ್ಯೆ ಮಾತ್ರ ಬೆಳೆಯುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಮುಸ್ಲಿಂ ನಿರಾಶ್ರಿತರು. ಹಾಗಾಗಿ ಮುಂಬರುವ ವರ್ಷಗಳಲ್ಲಿ ಸ್ವೀಡನ್ ಇಸ್ಲಾಮಿಕ್ ರಾಷ್ಟ್ರವಾದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.

ಹೆಚ್ಚುತ್ತಿರುವ ನಿರಾಶ್ರಿತರ ಜನಸಂಖ್ಯೆಯನ್ನು ನಿಯಂತ್ರಿಸಲು ಸ್ವೀಡನ್ ಸರಕಾರವು ಹಲವಾರು ನಿರ್ಬಂಧಗಳನ್ನು ವಿಧಿಸಿದೆ. ಇಸ್ಲಾಮಿಕ್ ದೇಶಗಳಾದ ಸಿರಿಯಾ, ಸೊಮಾಲಿಯಾ, ಇರಾನ್ ಮತ್ತು ಇರಾಕ್‌ನಿಂದ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಇಲ್ಲಿ ವಾಸಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಸ್ವೀಡನ್‌ನಲ್ಲಿ ಹಲವಾರು ಹಿಂಸಾಚಾರದ ಘಟನೆಗಳು ನಡೆದಿವೆ. ಕಳೆದ ವರ್ಷ ಕನಿಷ್ಠ 348 ಗುಂಡಿನ ದಾಳಿಗಳು ನಡೆದಿವೆ. ಈ ದಾಳಿಯಲ್ಲಿ 52 ಮಂದಿ ಸಾವನ್ನಪ್ಪಿದ್ದಾರೆ. ಇದಕ್ಕೆ ನಿರಾಶ್ರಿತರೇ ಕಾರಣ ಎಂದು ಹೇಳಲಾಗುತ್ತಿದೆ.
ಸ್ವೀಡನ್ 1990ರ ದಶಕದಿಂದಲೂ ನಿರಾಶ್ರಿತರನ್ನು ಸ್ವಾಗತಿಸುತ್ತಿತ್ತು; ಆದರೆ ಅಕ್ಟೋಬರ್ 2022ರಲ್ಲಿ ಉಲ್ಫ್ ಕ್ರಿಸ್ಟರ್ಸನ್ ಪ್ರಧಾನಿಯಾದ ನಂತರ ಅವರು ದೇಶದ ನೀತಿಯನ್ನು ಬದಲಾಯಿಸಿದರು. ರಾಷ್ಟ್ರೀಯವಾದಿ ಸ್ವೀಡನ್ ಡೆಮೋಕ್ರಾಟ್ಸ್ ಪಕ್ಷವೂ ಅವರನ್ನು ಬೆಂಬಲಿಸುತ್ತದೆ. ಈ ಪಕ್ಷ ನಿರಾಶ್ರಿತರ ವಿರೋಧಿಯಾಗಿದೆ. ನಿರಾಶ್ರಿತರು ದೇಶದ ಸಂಸ್ಕೃತಿಗೆ ಮಾತ್ರವಲ್ಲ, ಆರ್ಥಿಕತೆಗೆ ಹಾನಿ ಮಾಡುತ್ತಾರೆ’ ಎಂದು ಅವರು ನಂಬುತ್ತಾರೆ.

ದೇಶ ಬಿಟ್ಟು ಹೋಗುವವರಿಗೆ 80 ಸಾವಿರ ರೂಪಾಯಿ ನೀಡುವ ಸ್ವೀಡನ್ ಸರಕಾರ !

ಸ್ವೀಡಿಷ್ ಮಂತ್ರಿ ಮರಿಯಾ ಸ್ಟೀನ್‌ಗಾರ್ಡ್ ಅವರ ಹೊಸ ಪ್ರಸ್ತಾಪದ ಪ್ರಕಾರ, ಸ್ವೀಡನ್‌ನ ಸಂಸ್ಕೃತಿಯನ್ನು ಇಷ್ಟಪಡದವರು ಅಥವಾ ಅದನ್ನು ಸ್ವೀಕರಿಸದಿರುವವರು ಸ್ವೀಡನ್ ತೊರೆಯಬಹುದು. ಸ್ವೀಡನ್ ಪ್ರಜೆಗಳು ದೇಶ ಬಿಟ್ಟರೆ ಸರಕಾರದಿಂದ 80 ಸಾವಿರ ರೂಪಾಯಿ ಇದಲ್ಲದೇ ಅವರಿಗೆ ಬಾಡಿಗೆಯನ್ನೂ ನೀಡುತ್ತದೆ. ದೇಶವನ್ನು ತೊರೆಯುವ ಮೊದಲು ಒಮ್ಮೆ ಮಾತ್ರ ಈ ಹಣ ನೀಡಲಾಗುತ್ತದೆ. ದೇಶವನ್ನು ತೊರೆಯುವವರಿಗೆ ನೀಡುವ ಹಣವನ್ನು 80 ಸಾವಿರ ರೂಪಾಯಿಯಿಂದ 12 ಲಕ್ಷಕ್ಕೆ ಏರಿಸುವ ಆಲೋಚನೆ ಇತ್ತು; ಆದರೆ ಅದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ದೇಶವನ್ನು ತೊರೆಯುವವರಿಗೆ ಹೆಚ್ಚು ಹಣ ನೀಡಿದರೆ, ‘ಸ್ವೀಡನ್ ಜನರಿಗೆ ಇಷ್ಟವಿಲ್ಲ’ ಎಂಬ ಸಂದೇಶ ಹೋಗುತ್ತದೆ ಎಂದು ಸರಕಾರ ಹೇಳಿದೆ.

ಸಂಪಾದಕೀಯ ನಿಲುವು

ಮುಸ್ಲಿಮರ ಸಂಖ್ಯೆ ಹೆಚ್ಚಾದಾಗ ಬೇರೇನೂ ಆಗದು, ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ಇದನ್ನು ಅನುಭವಿಸಿವೆ ಮತ್ತು ಕೆಲವು ಅನುಭವಿಸುವ ಹಂತವನ್ನು ತಲುಪಿವೆ. ಭಾರತದಲ್ಲಿ ಮತ್ತೊಮ್ಮೆ ಇದನ್ನು ಅನುಭವಿಸುವ ಪರಿಸ್ಥಿತಿ ಬಂದಿದೆ !