ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನಿಂದ ಜಾತ್ಯತೀತ ನಾಗರಿಕ ಕಾನೂನಿಗೆ ವಿರೋಧ

‘ಮುಸ್ಲಿಂ ಪರ್ಸನಲ್ ಲಾ’ದೊಂದಿಗೆ ನಾವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ !

ನವದೆಹಲಿ – ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನದಂದು ಮಾಡಿದ ಭಾಷಣದಲ್ಲಿ ಸಮಾನ ನಾಗರಿಕ ಕಾನೂನಿನ ಬದಲಾಗಿ ಜಾತ್ಯತೀತ ನಾಗರಿಕ ಕಾನೂನು (‘ಸೆಕ್ಯುಲರ್ ಸಿವಿಲ್ ಕೋಡ್’) ತರುವ ಬಗ್ಗೆ ಮಾತನಾಡಿದ್ದರು. ಮುಸ್ಲಿಮರಿಗೆ ಸಮಾನ ಅಥವಾ ಜಾತ್ಯತೀತ ನಾಗರಿಕ ಕಾನೂನನ್ನು ಸ್ವೀಕಾರವಿಲ್ಲ. ನಾವು ‘ಮುಸ್ಲಿಂ ಪರ್ಸನಲ್ ಲಾ’ದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಮೋದಿಯವರು ಧಾರ್ಮಿಕ ವೈಯಕ್ತಿಕ ಕಾನೂನನ್ನು ‘ಸಂಪ್ರದಾಯಿಕ ಕಾನೂನು’ ಎಂದು ಹೇಳುವುದು ಆಕ್ಷೇಪಾರ್ಹವಾಗಿದೆ, ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನ ವಕ್ತಾರ ಡಾ. ಎಸ್.ಕ್ಯೂ.ಆರ್. ಇಲಿಯಾಸ್ ಹೇಳಿಕೆ ನೀಡಿದ್ದಾರೆ.

ಬೋರ್ಡ್ ಬಿಡುಗಡೆ ಮಾಡಿರುವ ಸುದ್ದಿಪತ್ರದಲ್ಲಿ ಡಾ. ಇಲಿಯಾಸ್‌ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ಮೋದಿ ಉದ್ದೇಶಪೂರ್ವಕವಾಗಿ ಸಮಾನ ನಾಗರಿಕ ಕಾನೂನಿನ ಬದಲಾಗಿ ಜಾತ್ಯತೀತ ನಾಗರಿಕ ಕಾನೂನನ್ನು ಬಳಸಿದ್ದಾರೆ. ಪ್ರಧಾನಿಯವರು ದೇಶದ ದಾರಿ ತಪ್ಪಿಸುತ್ತಿದ್ದಾರೆ. ಮೋದಿಯವರು ಧರ್ಮ ಆಧಾರಿತ ಕಾನೂನನ್ನು ಜಾತಿವಾದಿ ಎಂದು ಘೋಷಿಸುವ ಮೂಲಕ ಪಾಶ್ಚಿಮಾತ್ಯ ದೇಶಗಳನ್ನು ಅನುಕರಿಸಿದರು; ಆದರೆ ಇದು ಭಾರತದಲ್ಲಿನ ಬಹುಸಂಖ್ಯಾತ ಧರ್ಮ ಪಾಲನೆ ಮಾಡುವವರ ಅವಮಾನವಾಗಿದೆ. ತಮ್ಮ ಕೌಟುಂಬಿಕ ಕಾನೂನು ಷರಿಯಾವನ್ನು ಆಧರಿಸಿವೆ ಎಂದು ಭಾರತದ ಮುಸ್ಲಿಮರು ಅನೇಕ ಬಾರಿ ಹೇಳಿದ್ದಾರೆ. ದೇಶದ ಸಂಸತ್ತು ಸ್ವತಃ ಇದನ್ನು ಅಂಗೀಕರಿಸಿದೆ ಎಂದು ಹೇಳಿದರು. (ಮುಂದೆ ಅದೇ ಸಂಸತ್ತು ಹಳೆ ಕಾನೂನನ್ನು ರದ್ದುಗೊಳಿದಾಗ ಎಲ್ಲರೂ ಅದನ್ನು ಒಪ್ಪಿಕೊಳ್ಳಲೇಬೇಕು ! ಒಪ್ಪದಿರುವವರು ಬೇರೆ ಇಸ್ಲಾಮಿಕ್ ದೇಶಗಳಿಗೆ ಹೋಗಬಹುದು ಎಂದು ಖಡಕ್ ಆಗಿ ಹೇಳಬೇಕು ! – ಸಂಪಾದಕರು).

ಸಂಪಾದಕೀಯ ನಿಲುವು

ಹಿಂದೂಗಳಿಗೆ ಮಾತ್ರ ಜಾತ್ಯತೀತದ ಉಪದೇಶ ಮಾಡುವವರು ಈಗ ಈ ಲಾ ಬೋರ್ಡ್‌ ಸದಸ್ಯರಿಗೂ ಕೂಡ ಅದೇ ಉಪದೇಶ ಮಾಡುವರೇ? ಅಥವಾ ಎಂದಿನಂತೆ ತಮ್ಮ ಬಿಲದಲ್ಲಿ ಅಡಗಿ ಕೂರುವರೇ ?

ಯಾರು ಎಷ್ಟೇ ವಿರೋಧಿಸಿದರೂ ಅವರ ವಿರೋಧವನ್ನು ಮೆಟ್ಟಿನಿಂತು ಭಾರತದಲ್ಲಿ ಸಮಾನ ನಾಗರಿಕ ಕಾನೂನು ತರಲೇಬೇಕು !