ಧರ್ಮರಕ್ಷಣೆಗಾಗಿ ಪ್ರಾಣದ ಆಹುತಿ ನೀಡಿದ ಕೋಟ್ಯಾಂತರ ಹಿಂದುಗಳಿಗಾಗಿ ಆಗಸ್ಟ್ ೧೫ರಂದು ‘ಶ್ರಾದ್ಧ ಸಂಕಲ್ಪ ದಿನ’ !

  • ಅಕ್ಟೋಬರ್ ೨ರಂದು ಬರುವ ಮಹಾಲಯ ಅಮಾವಾಸ್ಯೆಯಂದು ಸಾಮೂಹಿಕ ತರ್ಪಣಕ್ಕೆ ಕರೆ !

  • ಕಳೆದ ೧ ಸಾವಿರದ ೪೦೦ ವರ್ಷಗಳಲ್ಲಿ ನಡೆದ ಹಿಂದುಗಳ ನರಸಂಹಾರದ ಪ್ರಯುಕ್ತ; ಅಯೋಧ್ಯ ಫೌಂಡೇಶನ್ ಸಂಘಟನೆಯ ಅಧ್ಯಕ್ಷೆ ಮೀನಾಕ್ಷಿ ಶರಣ್ ಅವರಿಂದ ಈ ಆಯೋಜನೆ !

ಇಂದೂರು (ಮಧ್ಯಪ್ರದೇಶ) – ೧೯೪೭ರಲ್ಲಿ ಅಖಂಡ ಭಾರತದ ಭಯಾನಕ ವಿಭಜನೆ ಆಯಿತು ಮತ್ತು ಅದಕ್ಕೆ ಕಾರಣವಾದ ಅಂಶಗಳ ಮಾಹಿತಿ ನೀಡುವುದು ಒಬ್ಬ ಜವಾಬ್ದಾರ ಭಾರತೀಯ ನಾಗರೀಕನಾಗಿರುವ ಕಾರಣ ಇದು ನನ್ನ ಕರ್ತವ್ಯ ಎಂದು ತಿಳಿಯುತ್ತೇನೆ. ಆಗ ಹಿಂದುಗಳು ಎಷ್ಟು ಕಷ್ಟ ಅನುಭವಿಸಿದ್ದರು, ಅಕ್ಷರಶಃ ಅದೇ ಪರಿಸ್ಥಿತಿ ಈಗ ಬಾಂಗ್ಲಾದೇಶದಲ್ಲಿನ ಹಿಂದುಗಳು ಅನುಭವಿಸುತ್ತಿದ್ದಾರೆ. ಅಲ್ಲಿಯ ಹಿಂದೂಗಳ ಲೂಟಿ, ಬಲಾತ್ಕಾರ, ಅಮಾನುಷ ಥಳಿತ ,ಹತ್ಯೆ ಮತ್ತು ಬೆಂಕಿ ಅನಾಹುತ ಇವುಗಳ ಭಯಾನಕ ವಿಡಿಯೋಗಳನ್ನು ನೋಡಬಹುದು, ಅನುಭವಿಸಬಹುದು.

ಅಯೋಧ್ಯಾ ಫೌಂಡೇಶನ್ ಸಂಘಟನೆಯ ಅಧ್ಯಕ್ಷೆ ಮೀನಾಕ್ಷಿ ಶರಣ್

ಭಾರತದ ವಿಭಜನೆಯ ಮೊದಲಿನ ಕಾಲ, ವಿಭಜನೆಯ ಕಾಲ, ಮತ್ತು ಇಂದಿನ ಕಾಲ ಈ ಎಲ್ಲಾ ಕಾಲದಲ್ಲಿ ಹಿಂದುಗಳ ಮೇಲೆ ನಡೆಯುವ ಅತ್ಯಾಚಾರ ಇವುಗಳಲ್ಲಿ ಆಶ್ಚರ್ಯಕರವಾದ ಸಾಮ್ಯತೆ ಇದೆ. ನಾವು ಇತಿಹಾಸ ಎಂದಿಗೂ ಮರೆಯಬಾರದು. ಇಲ್ಲವಾದರೆ ಅದು ಪುನರಾವರ್ತಿಸುತ್ತಿರುತ್ತದೆ. ಈ ದೃಷ್ಟಿಕೋನದಿಂದ ಕಳೆದ ೧ ಸಾವಿರದ ೪೦೦ ವರ್ಷಗಳಿಂದ ಧರ್ಮರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿರುವ ಕೋಟ್ಯಾಂತರ ಹಿಂದುಗಳಿಗಾಗಿ ತರ್ಪಣ ವಿಧಿ ಮಾಡುವುದು ನಮ್ಮೆಲ್ಲರ ಧರ್ಮ ಕರ್ತವ್ಯವಾಗಿದೆ ಎಂದು ಅಯೋಧ್ಯಾ ಫೌಂಡೇಶನ್ ಸಂಘಟನೆಯ ಅಧ್ಯಕ್ಷೆ ಮೀನಾಕ್ಷಿ ಶರಣ್ ಅವರು ಕರೆ ನೀಡಿದ್ದಾರೆ. ಈ ದೃಷ್ಟಿಯಿಂದ ಆಗಸ್ಟ್ ೧೫ರಂದು ‘ಶ್ರಾದ್ಧ ಸಂಕಲ್ಪ ದಿನ’ ಎಂದು ಆಚರಿಸಲು ಅವರು ಜಗತ್ತಿನಾದ್ಯಂತ ಇರುವ ಹಿಂದುಗಳಿಗೆ ಕರೆ ನೀಡಿದ್ದಾರೆ.

ಕಳೆದ ಏಳು ವರ್ಷಗಳಿಂದ ಈ ಅಭಿಯಾನ ನಡೆಯುತ್ತಿದ್ದು, ಈ ಬಾರಿ ಆಗಸ್ಟ್ ೧೫ ರಂದು ೮ನೇ ‘ಶ್ರಾದ್ದ ಸಂಕಲ್ಪ ದಿನ’ ನಡೆಯಲಿದೆ. ಕಳೆದ ೧ ಸಾವಿರದ ೪೦೦ ವರ್ಷಗಳಲ್ಲಿ ಯಾರು ಮತಾಂತರವನ್ನು ವಿರೋಧಿಸಿ, ಹೋರಾಡಿ ಸಾವನ್ನಪ್ಪಿದರೂ ಹಿಂದೂ ಧರ್ಮದ ಮೇಲಿನ ಶೃದ್ಧೆಯನ್ನು ಬಿಡಲಿಲ್ಲ, ಅಂತಹ ಕೋಟ್ಯಾಂತರ ಹಿಂದುಗಳಿಗಾಗಿ ನಾವು ಸಂಕಲ್ಪ ಮಾಡೋಣ. ಹಾಗೂ ಅಕ್ಟೋಬರ್ ೨ ರಂದು ಎಂದರೆ ಮಹಾಲಯ ಅಮಾವಾಸ್ಯೆಯ ದಿನ ನಾವೆಲ್ಲರೂ ಸಾಮೂಹಿಕ ತರ್ಪಣ ನೀಡೋಣ. ಅದಕ್ಕಾಗಿ ಕೈಯಲ್ಲಿ ಗಂಗಾಜಲ ಮತ್ತು ಅಕ್ಷತೆ ಹಿಡಿದು ತರ್ಪಣ ವಿಧಿ ಮಾಡುವ ಸಂಕಲ್ಪ ಮಾಡೋಣ, ಎಂದು ಕೂಡ ಮೀನಾಕ್ಷಿ ಅವರು ಕರೆ ನೀಡಿದ್ದಾರೆ.

ಇದಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಜನಜಾಗೃತಿಗೊಳಿಸುವ ವಿವಿಧ ವಿಡಿಯೋ ಮತ್ತು ಪೋಸ್ಟ್ ಪ್ರಸಾರ ಮಾಡಲಾಗುತ್ತಿದೆ. ಹಿಂದುಗಳು ಈ ಅಭಿಯಾನದಲ್ಲಿ ಸ್ವಯಂ ಪ್ರೇರಣೆಯಿಂದ ಸಹಭಾಗಿಯಾಗಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯಿಂದ ಕೂಡ ಕರೆ ನೀಡಲಾಗಿದೆ. ಅಯೋಧ್ಯ ಫೌಂಡೇಶನ್ ವತಿಯಿಂದ ಈ ಅಭಿಯಾನದ ಪ್ರಸಾರಕ್ಕಾಗಿ #ShraddhSankalpDiwas, #SamoohikTarpan ಈ ಹ್ಯಾಶ್ ಟ್ಯಾಗ್ ನ ಉಪಯೋಗ ಮಾಡಲಾಗುತ್ತಿದೆ. ಈ ಮೂಲಕ ಹಿಂದುಗಳು ಈ ಅಭಿಯಾನವನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸಬೇಕು ಎಂದು ಸಂಘಟನೆಯಿಂದ ಕೂಡ ಅವರು ಕರೆ ನೀಡಿದ್ದಾರೆ.

ಸಂಪಾದಕೀಯ ನಿಲುವು

  • ಹಿಂದೂಗಳ ಮೇಲೆ ಕಳೆದ ನೂರಾರು ವರ್ಷಗಳಿಂದ ನಿರಂತರ ದೌರ್ಜನ್ಯ ನಡೆಯುತ್ತಿದೆ. ಈಗಿನ ಕಾಲದ ಸಮಾಜಕ್ಕೆ ಈ ಬಗ್ಗೆ ಮಾಹಿತಿ ನೀಡುವುದು ಮತ್ತು ಈ ಮೂಲಕ ನಮ್ಮ ಪೂರ್ವಜರಿಂದಲೇ ನಮ್ಮ ಹಿಂದೂ ಅಸ್ತಿತ್ವ ಶಾಶ್ವತವಾಗಿ ಉಳಿದಿದೆ, ಹಾಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸಲು ಅವಕಾಶವಾಗಿದೆ. ಈ ಅಭಿಯಾನದಲ್ಲಿ ಹಿಂದುಗಳು ಕೋಟ್ಯಾಂತರ ಸಂಖ್ಯೆಯಲ್ಲಿ ಸಹಭಾಗಿಯಾಗಿ ಇದಕ್ಕೆ ಜನಾಂದೋಲನದ ಸ್ವರೂಪ ನೀಡಬೇಕು !
  • ಸಾಮೂಹಿಕ ತರ್ಪಣ ವಿಧಿಯ ಆಯೋಜನೆ ಮಾಡಿದ್ದಕ್ಕೆ ಮೀನಾಕ್ಷಿ ಶರಣ್ ಅವರಿಗೆ ಅಭಿನಂದನೆ ಮತ್ತು ಕೃತಜ್ಞತೆಗಳು.