ಪೊಲೀಸರಿಂದ ಸೇನೆಯ ಕಮಾಂಡೊನನ್ನು ವಿವಸ್ತ್ರಗೊಳಿಸಿ ಹಲ್ಲೆ !

  • ಕಮಾಂಡೋ ಬೈಗುಳ ಬಯ್ಯುತ್ತಿದ್ದ ಪೊಲೀಸರ ಸ್ಪಷ್ಟೀಕರಣ !

  • ಕೇಂದ್ರ ಸೈನಿಕ ಕಲ್ಯಾಣ ಸಚಿವ ರಾಜವರ್ಧನ ಸಿಂಹ ರಾಠೋಡ ಇವರು ಪೊಲೀಸ ಠಾಣೆಗೆ ತಲುಪಿ ಪೊಲೀಸರಿಗೆ ಗದರಿದರು !

ಜೈಪುರ (ರಾಜಸ್ಥಾನ್) – ಸೇನೆಯ ಕಮಾಂಡೋ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವ ಅರವಿಂದ ಇವರಿಗೆ ಇಲ್ಲಿಯ ಒಂದು ಪೊಲೀಸ ಠಾಣೆಯಲ್ಲಿ ೫ ಪೊಲೀಸರು ಅಮಾನುಷವಾಗಿ ಥಳಿಸಿದ್ದಾರೆ. ಈ ಸಮಯದಲ್ಲಿ ಅವರ ಬಟ್ಟೆ ಬಿಚ್ಚಿಸಿ ಜೈಲಲ್ಲಿ ಇರಿಸಲಾಗಿತ್ತು. ಪೊಲೀಸರು ಅವರ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ ಮತ್ತು ಬೈಗುಳ ಕೂಡ ಬೈದಿದ್ದಾರೆ ಅವರಿಗೆ ಅಪರಾಧಿಗಳೊಂದಿಗೆ ಕೂಡಿಸಿ, ಪೊಲೀಸರು ಭಾರತೀಯ ಸೇನೆಯ ಅಪ್ಪನಾಗಿದ್ದಾನೆ ! ಎಂದು ಹೇಳಿದರು. ಈ ಘಟನೆ ನಗರದಲ್ಲಿನ ಶಿಪ್ರಾಪಥ ಪೊಲೀಸ ಠಾಣೆಯದಾಗಿದ್ದು ಕಮಾಂಡೋ ಇದರ ದೂರು ಸೈನಿಕ ಕಲ್ಯಾಣ ಸಚಿವ ರಾಜವರ್ಧನ್ ಸಿಂಹ ರಾಠೋಡ ಇವರ ಬಳಿ ನೀಡಿದ್ದರು. ಇದರ ನಂತರ ರಾಠೋಡ ಇವರು ನೇರ ಪೊಲೀಸ ಠಾಣೆಗೆ ಬಂದು ಪೊಲೀಸ ಅಧಿಕಾರಿ ಸಂಜಯ ಶರ್ಮ ಇವರನ್ನು ತರಾಟೆಗೆ ತೆಗೆದುಕೊಂಡರು.

೧. ರಾಠೋಡ ಇವರು ಸ್ವತಃ ಈ ಘಟನೆಯ ಬಗ್ಗೆ ಪ್ರಸಾರ ಮಾಧ್ಯಮಗಳಿಗೆ ಹೇಳಿದರು. ಜಮ್ಮು ಕಾಶ್ಮೀರದಲ್ಲಿನ ಬಾರಾಮುಲ್ಲಾದಲ್ಲಿ ಕಮಾಂಡೋ ಅರವಿಂದ ಇವರು ಸೇವೆಯಲ್ಲಿ ಇದ್ದಾರೆ.
ಆಗಸ್ಟ್ ೧೧ ರಂದು ಕಮಾಂಡೋ ಅರವಿಂದ್ ಇವರು ಪರಿಚಿತ ಓರ್ವ ಸೈನಿಕನ ಸಂದರ್ಭದಲ್ಲಿನ ಒಂದು ಪ್ರಕರಣದ ಮಾಹಿತಿ ಪಡೆಯುವುದಕ್ಕಾಗಿ ಪೊಲೀಸ ಠಾಣೆಗೆ ಬಂದಿದ್ದರು ಆ ಸಮಯದಲ್ಲಿ ಈ ಘಟನೆ ನಡೆದಿದೆ.

೨. ರಾಠೋಡ ಇವರು ಪೊಲೀಸರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡರು. ಅವರು ಸೈನಿಕನಿಗೆ ಆಗಿರುವ ಥಳಿತದ ಸಾಕ್ಷಿ ತಮ್ಮ ಮೊಬೈಲ್ ನಲ್ಲಿ ತೋರಿಸಿದರು. ಇದರ ಕುರಿತು ಪೊಲೀಸ ಅಧಿಕಾರಿ ಸಂಜಯ ಶರ್ಮ ಇವರು ಯುಕ್ತಿವಾದ ಮಾಡುತ್ತಾ, ಕಮಾಂಡೋ ಪೊಲೀಸರಿಗೆ ಬೈಗುಳ ನೀಡುತ್ತಿದ್ದನು. ಆಗ ಆಕ್ರೋಶಗೊಂಡ ಸಚಿವರ ರಾಥೋಡ್ ಇವರು ಅಸಮಾಧಾನ ವ್ಯಕ್ತಪಡಿಸುತ್ತಾ , ನಾನು ಮಾತನಾಡುತ್ತಿರುವಾಗ ನೀವೇಕೆ ಮಾತನಾಡುತ್ತೀರಾ ? ಯಾವಾಗ ನಿಮ್ಮ ಜೊತೆ ಮಾತನಾಡುತ್ತೇನೆ ಆಗ ನೀವು ಪ್ರತಿಕ್ರಿಯೆ ನೀಡಿ. ಇಲ್ಲವಾದರೆ ಎಚ್ಚರವಾಗಿರಿ. ನಿಮಗೆ ಇಲ್ಲಿ ನಿಲ್ಲಲು ಆಗದಿದ್ದರೆ ನೀವು ನಿಮ್ಮ ಕಾರ್ಯಾಲಯಕ್ಕೆ ಹೋಗಬಹುದು ಎಂದು ಹೇಳಿದರು.

ಯಾರ ಬಳಿ ಶಕ್ತಿ ಇದೆ, ಅವರು ಬಹಳಷ್ಟು ಸಂಯಮದಿಂದ ಇರುವುದು ಆವಶ್ಯಕವಾಗಿರುತ್ತದೆ ! – ಸಚಿವ ರಾಠೋಡ

ಸಚಿವರು ಮಾತು ಮುಂದುವರೆಸುತ್ತಾ, ನೀವು ಮೂಲಭೂತ ಶಿಷ್ಟಾಚಾರ ಕಲಿತಿಲ್ಲವೇ. ಶರೀರದ ಮೇಲೆ ಪೊಲೀಸ ಸಮವಸ್ತ್ರ ಇದ್ದರೆ, ಆಗ ಬೇರೆಯೇ ಗರ್ವ ಇರುತ್ತದೆಯೇ ? ನಿಮ್ಮ ಮನಸ್ಸಿನಲ್ಲಿ ಇದು ಸಾರ್ವಜನಿಕ ಸೇವೆ ಆಗಿದೆ ಅಥವಾ ಗೂಂಡಾಗಿರಿ ಆಗಿದೆ ? ಅವರು (ಸೈನಿಕನು) ಬೈಗುಳ ಬೈದಿದ್ದಾನೆ ಅಥವಾ ಇಲ್ಲ, ಆದರೆ ನೀವು ಸೈನ್ಯದಲ್ಲಿನ ಕಮಾಂಡೋಗೆ ವಿವಸ್ತ್ರಗೊಳಿಸಿ ಲಾಠಿಯಿಂದ ಹೊಡೆದಿದ್ದೀರಿ ಅಲ್ಲವೇ ? ಅದನ್ನು ಹೇಳಿ ! ಯಾರ ಹತ್ತಿರ ಶಕ್ತಿ ಇದೆ ಅವರು ಬಹಳ ಸಂಯಮದಿಂದ ವರ್ತಿಸುವ ಆವಶ್ಯಕತೆ ಇರುತ್ತದೆ. ಯಾವಾಗ ನಾವು ಸೇವೆಯಲ್ಲಿ ಇದ್ದೆವು, ಜನರು ನಮಗೂ ಬೈಗುಳ ಬೈದಿಲ್ಲವೇ? ನಾವು ಅದರ ಕಡೆಗೆ ಎಂದು ಗಮನ ನೀಡಲಿಲ್ಲ. ಯಾವುದೇ ವ್ಯತ್ಯಾಸವಾಗುವುದಿಲ್ಲ. ಯಾರಿಗೆ ಮಾತನಾಡುವುದಿರುತ್ತದೆ, ಅವರಿಗೆ ಮಾತನಾಡಲು ಬಿಡಿ. ನಾವು ನಮ್ಮ ಕೆಲಸ ಮಾಡುತ್ತಿದ್ದೆವು. ರಾಠೋಡ ಇವರು ಸೈನ್ಯದ ಮೇಜರ್ ಸ್ಥಾನದಲ್ಲಿ ಕಾರ್ಯನಿರತವಾಗಿರುವಾಗ ಅವರು ನಿವೃತ್ತಿ ಪಡೆದಿದ್ದರು.

ಸಮವಸ್ತ್ರ ಧರಿಸಿ ದೇಶದ ರಕ್ಷಣೆ ಮಾಡುವವರನ್ನು ಬೆದರಿಸುವುದು ಇದು ಹೇಡಿತನವಾಗಿದೆ ! – ಸಚಿವ ರಾಠೋಡ

ಈ ಸಮಯದಲ್ಲಿ ರಾಠೋಡ ಪ್ರಸಾರ ಮಾಧ್ಯಮಗಳಿಗೆ, ಇದು ಬಹಳ ನೋವಿನ ಸಂಗತಿ ಆಗಿದೆ. ಇದರಿಂದ ಅಸಹ್ಯಕರ ಮನಸ್ಥಿತಿ ಕಂಡು ಬರುತ್ತಿದೆ. ಇಂತಹ ಜನರು ಸಮಾಜಕ್ಕೆ ಅಪಾಯಕಾರಿ ಆಗಿರುತ್ತಾರೆ. ಸಮವಸ್ತ್ರ ಧರಿಸಿ ದೇಶದ ರಕ್ಷಣೆ ಮಾಡುವವರನ್ನು ಬೆದರಿಸುವುದು ಇದು ಹೇಡಿತನವಾಗಿದೆ. ನಾನು ಪೋಲಿಸ ಮಹಾಸಂಚಾಲಕ ಮತ್ತು ಪೊಲೀಸ ಆಯುಕ್ತರ ಜೊತೆಗೆ ಮಾತನಾಡಿದ್ದೇನೆ. ಸಂಬಂಧಿತರ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಂಪಾದಕೀಯ ನಿಲುವು

ಯಾವ ಪೊಲೀಸರು ಓರ್ವ ಸೈನಿಕನ ಜೊತೆಗೆ ಈ ರೀತಿ ವರ್ತಿಸುತ್ತಾರಯೋ ಅವರು ಸಾಮಾನ್ಯ ಜನರ ಜೊತೆಗೆ ಹೇಗೆ ವರ್ತಿಸಬಹುದು, ಇದರ ಯೋಚನೆ ಮಾಡದೆ ಇದ್ದರೆ ಒಳಿತು ! ಸಂಬಂಧಪಟ್ಟ ಪೊಲೀಸ ಅಧಿಕಾರಿ ಮತ್ತು ಸಿಬ್ಬಂದಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !