|
ಮಿರ್ಜಾಪುರ (ಉತ್ತರ ಪ್ರದೇಶ) – ಮಿರ್ಜಾಪುರ ಜಿಲ್ಲೆಯ ಸರಕಾರಿ ಭೂಮಿಯ ಮೇಲೆ ಅಕ್ರಮವಾಗಿ ನಿರ್ಮಿಸಲಾಗಿದ್ದ ಚರ್ಚ ಮೇಲೆ ಆಡಳಿತ ಬುಲ್ಡೋಝರ ಚಲಾಯಿಸಿದೆ. ಇಲ್ಲಿ ಮತಾಂತರ ಮಾಡಲಾಗುತ್ತಿದೆಯೆಂದು ದೂರುಗಳು ಬಂದಿದ್ದವು. ವಿನೋದ ಮತ್ತು ರಮಾಕಾಂತ ಎಂಬುವರು ಚರ್ಚ್ ನಿರ್ಮಿಸಿರುವ ಆರೋಪವಿದೆ. ಈ ಪ್ರಕರಣದಲ್ಲಿ ಇವರಿಬ್ಬರ ವಿರುದ್ಧ ಮೊಕದ್ದಮೆ ದಾಖಲಾದ ಬಳಿಕ, ನ್ಯಾಯಾಲಯದಲ್ಲಿ ಅವರಿಂದ ಹೇಳಿಕೆಯನ್ನು ಪಡೆದುಕೊಳ್ಳಲು ಕರೆಸಲಾಗಿತ್ತು. ಆದರೆ ಇಬ್ಬರೂ ಹಾಜರಿರಲಿಲ್ಲ. ಕೊನೆಗೆ ಅಗತ್ಯ ಕಾನೂನುಬದ್ಧ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ, ಆಗಸ್ಟ್ 11 ರಂದು, ಅಕ್ರಮವಾಗಿ ನಿರ್ಮಿಸಲಾಗಿದ್ದ ಚರ್ಚ ಮೇಲೆ ಬುಲ್ಡೋಝರ ಚಲಾಯಿಸಿದೆ.
ಇಲ್ಲಿನ ಚುನಾರ ಅರಣ್ಯ ಪ್ರದೇಶದಲ್ಲಿ ಚರ್ಚ್ ನಿರ್ಮಿಸಲಾಗಿದೆ. ಈ 8 ವರ್ಷದ ಹಳೆಯ ಕಾಮಗಾರಿ ಅರಣ್ಯ ಇಲಾಖೆಯ ಭೂಮಿ ಮೇಲೆ ನಿರ್ಮಿಸಲಾಗಿದೆ ಎಂದು ಸ್ಥಳಿಯರು ಹೇಳಿದ್ದಾರೆ. ಪಟ್ಟಣದಿಂದ ದೂರ ಅರಣ್ಯದಲ್ಲಿ ವಾಸಿಸುವ ಆದಿವಾಸಿಗಳಿಗೆ ಈ ಚರ್ಚ್‌ನ ಮೂಲಕ ಮತಾಂತರಿಸಲು ಅವರಿಗೆ ಆಮಿಷವೊಡ್ಡಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.
ಸಂಪಾದಕೀಯ ನಿಲುವುಅರಣ್ಯ ಇಲಾಖೆಯ ಜಾಗದಲ್ಲಿ ಅನಧಿಕೃತವಾಗಿ ಚರ್ಚ್ ನಿರ್ಮಿಸಲಾಗುತ್ತಿರುವಾಗ, ಅದರ ಮಾಹಿತಿ ಅರಣ್ಯಾಧಿಕಾರಿಗಳಿಗೆ ಸಿಕ್ಕಿರಲಿಲ್ಲವೋ ಅಥವಾ ಹಣಕಾಸಿನ ಕೊಡುಕೊಳ್ಳುವಿಕೆ ನಡೆದಿರುವುದರಿಂದ ಇದನ್ನು ನಿರ್ಲಕ್ಷಿಸಿರಬಹುದೇ ? ಎನ್ನುವುದನ್ನೂ ಶೋಧಿಸಬೇಕಾಗಿದೆ ! |