ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾರನ್ನು ವಿರೋಧಿಸುತ್ತಾ ದಿನಸಿ ಅಂಗಡಿಯವನನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಮತೆ ದೂರು ದಾಖಲು

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ವಿರುದ್ಧ ದಿನಸಿ ವ್ಯಾಪಾರಿಯ ಕೊಲೆ ಪ್ರಕರಣ ದಾಖಲಾಗಿದೆ. ಜುಲೈ 19 ರಂದು, ಢಾಕಾದ ಮಹ್ಮದ್‌ಪುರ ಪ್ರದೇಶದಲ್ಲಿ ಪೋಲೀಸರು ಮೀಸಲಾತಿ ವಿರೋಧಿಸಿ ಪ್ರತಿಭಟನೆ ಮಾಡುವವರ ಮೇಲೆ ಗುಂಡು ಹಾರಿಸಿದ್ದರು. ಅದರಲ್ಲಿ ಕಿರಾಣಿ ಅಂಗಡಿಯ ಮಾಲೀಕ ಅಬು ಸಯೀದ್ ಸಾವನ್ನಪ್ಪಿದ್ದಾನೆ. ಈ ಪ್ರಕರಣದಲ್ಲಿ ಇತರೆ 6 ಆರೋಪಿಗಳಿದ್ದಾರೆ. ಇವರಲ್ಲಿ ಶೇಖ್ ಹಸೀನಾ ಅವರ ಆವಾಮಿ ಲೀಗ್ ಪಕ್ಷದ ಪ್ರಧಾನ ಕಾರ್ಯದರ್ಶಿ ಒಬೆದುಲ್ ಕಾದರ್, ಮಾಜಿ ಗೃಹ ಸಚಿವ ಅಸಾದುಝ್ಮಾನ್ ಖಾನ್ ಕಮಾಲ್, ಮಾಜಿ ಪೊಲೀಸ್ ಮಹಾನಿರೀಕ್ಷಕ ಚೌಧರಿ ಅಬ್ದುಲ್ಲಾ ಅಲ್ ಮಾಮೂನ್, ಗುಪ್ತಚರ ವಿಭಾಗದ ಮಾಜಿ ಮುಖ್ಯಸ್ಥ ಹರುನೋರ್ ರಶೀದ್, ಮಾಜಿ ಪೊಲೀಸ್ ಅಧಿಕಾರಿ ಹಬೀಬುರ್, ಮಾಜಿ ಜಂಟಿ ಪೊಲೀಸ್ ಆಯುಕ್ತ ಬಿಪ್ಲಬ್ ಕುಮಾರ್ ಸರಕಾರ್ ಸೇರಿದ್ದಾರೆ.