ಓರ್ವ ಅಂಗವಿಕಲ ವಿದ್ಯಾರ್ಥಿಗೆ ಬಲವಂತವಾಗಿ ಮಾಂಸಾಹಾರ ತಿನ್ನಿಸಿದ ಮುಖ್ಯೋಪಾಧ್ಯಾಯ ಮಹಮ್ಮದ್ ಇಕ್ಬಾಲ್

  • ಅಂಗವಿಕಲ ಹುಡುಗನಿಗೆ ಮಧ್ಯಾಹ್ನದ ಭೋಜನದಲ್ಲಿ ಬಲವಂತವಾಗಿ ಮಾಂಸಾಹಾರ ತಿನ್ನುವಂತೆ ಮಾಡಿದ ಮುಖ್ಯೋಪಾಧ್ಯಾಯ ಮಹಮ್ಮದ್ ಇಕ್ಬಾಲ್ !

  • ಮಹಮ್ಮದ್ ಇಕ್ಬಾಲ್ ಅಮಾನತು

ಮೇರಠ (ಉತ್ತರಪ್ರದೇಶ ) – ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ಮಹಮ್ಮದ್ ಇಕ್ಬಾಲ್ ಎಂಬವರು ಮಧ್ಯಾಹ್ನದ ಭೋಜನದ ವೇಳೆ ಓರ್ವ ವಿದ್ಯಾರ್ಥಿಗೆ ಬಲವಂತವಾಗಿ ಮಾಂಸಹಾರ ತಿನಿಸಿರುವ ಘಟನೆ ಬೆಳಕಿಗೆ ಬಂದಿದೆ. ಆ ಹುಡುಗ ಅಂಗವಿಕಲನಾಗಿದ್ದಾನೆ ಎಂದು ವರದಿಯಾಗಿದೆ. ಈ ಪ್ರಕರಣದಲ್ಲಿ ಮೊಹಮ್ಮದ್ ಇಕ್ಬಾಲ್ ಅವರನ್ನು ಅಮಾನತುಗೊಳಿಸಲಾಗಿದೆ.

೧. ಈ ವಿದ್ಯಾರ್ಥಿಯ ಸಹೋದರನು ದೂರಿನಲ್ಲಿ ಹೇಳಿರುವ ಪ್ರಕಾರ, ಮುಖ್ಯೋಪಾಧ್ಯಾಯರು ಇವತ್ತು ಪಲ್ಯ ಚೆನ್ನಾಗಿಲ್ಲ, ಹಾಗಾಗಿ ಮಾಂಸಹಾರ ತರಿಸಿ ಎಂದರು. ನಾನು ಮಾಂಸಹಾರ ತಿನ್ನುವದಿಲ್ಲ ಎಂದು ಮುಖ್ಯೋಪಾಧ್ಯಾಯರಿಗೆ ಹೇಳಿದೆ. ಆದರೂ ಅವರು ಮಾಂಸಹಾರವನ್ನು ತರಿಸಿದರು ಮತ್ತು ಬಲವಂತವಾಗಿ ನನ್ನ ಸಹೋದರನಿಗೆ ತಿನಿಸಿದರು. ನನ್ನ ಸೋದರ ಮಾವ ಶಾಲೆಗೆ ಬಂದು ಈ ಬಗ್ಗೆ ಮುಖ್ಯೋಪಾಧ್ಯಾಯರನ್ನು ಪ್ರಶ್ನಿಸಿದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ನಂತರ ಮಹಮ್ಮದ್ ಇಕ್ಬಾಲ್ ಅವರನ್ನು ಪೊಲೀಸ್ ಠಾಣೆಗೆ ಕರೆಸಲಾಯಿತು.

೨. ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿರುವ ಮಹಮ್ಮದ್ ಇಕ್ಬಾಲ್, ನಾನು ಮಧ್ಯಾಹ್ನದ ಭೋಜನಕ್ಕಾಗಿ ಮಾಂಸಾಹಾರ ತರಿಸಿಲ್ಲ. ನನ್ನ ಮೇಲೆ ಅಪವಾದ ಹೊರಿಸುತ್ತಿರುವ ವಿದ್ಯಾರ್ಥಿಯೇ ಮಾಂಸಾಹಾರ ತೆಗೆದುಕೊಂಡು ಬಂದಿದ್ದನು ಎಂದು ಆರೋಪಿಸಿದರು.

೩. ಇದರ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ಶಾಲೆಯಲ್ಲಿ ಮಾಂಸಾಹಾರ ಪದಾರ್ಥಗಳು ಯಾರು ತರಿಸಿದ್ದಾರೆ, ಏಕೆ ತರಿಸಿದ್ದಾರೆ? ಇದರ ನಾವು ವಿಚಾರಣೆ ನಡೆಸುತ್ತೇವೆ. ಇತರ ಮಕ್ಕಳಿಗೆ ತಿನ್ನಿಸುವ ಉದ್ದೇಶದಿಂದ ಮಾಂಸಾಹಾರ ತರಿಸಿರಬಹುದು; ಆದರೆ ಶಾಲೆಯಲ್ಲಿ ಈ ರೀತಿ ಮಾಂಸಾಹಾರ ಪದಾರ್ಥ ತರಿಸುವುದು ಮತ್ತು ಯಾರು ಸೇವಿಸುದಿಲ್ಲವೊ ಅವರಿಗೆ ಅದನ್ನು ಬಲವಂತವಾಗಿ ತಿನ್ನಿಸುವುದು ತಪ್ಪಾಗಿದೆ. ಈ ಪ್ರಕರಣದಲ್ಲಿ ನಾವು ಶಾಲೆಯ ಮುಖ್ಯೋಪಾಧ್ಯಾಯ ಮಹಮ್ಮದ್ ಇಕ್ಬಾಲ್ ಅವರನ್ನು ಅಮಾನತುಗೊಳಿಸಿದ್ದೇವೆ. ಈಗ ಮುಂದಿನ ವಿಚಾರಣೆ ನಡೆಸುತ್ತಿದ್ದೇವೆ ಮತ್ತು ಸಂಬಂಧಿತರು ತಪ್ಪಿತಸ್ಥರು ಎಂದು ಕಂಡು ಬಂದರೆ ಕ್ರಮ ಕೂಡ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇಂತಹವರ ವಿರುದ್ಧ ದೂರು ದಾಖಲಿಸಿ ಅವರನ್ನು ಜೈಲಿಗೆ ಅಟ್ಟಬೇಕು!