ಭೂಪಾಲ್‌ನಲ್ಲಿ ಬಾಂಗ್ಲಾದೇಶ ಹಿಂದೂಗಳ ರಕ್ಷಣೆ ಕೋರಿ 1 ಸಾವಿರ ಹಿಂದುತ್ವನಿಷ್ಠರಿಂದ ಮಾನವ ಸರಪಳಿ !

ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸುವ ಹಿಂದೆ ‘ಗಝವಾ-ಎ-ಹಿಂದ’ ಮಾಡುವ ಉದ್ದೇಶ ! – ವಿನೋದ ಯಾದವ, ‘ಧರ್ಮರಕ್ಷಕ’ ಸಂಘಟನೆ

ಭೋಪಾಲ (ಮಧ್ಯಪ್ರದೇಶ) – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಇಲ್ಲಿ ವಿ.ಐ.ಪಿ. ಮಾರ್ಗದಲ್ಲಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆಗಳು ನಡೆದವು. ಇದರಲ್ಲಿ 1 ಸಾವಿರಕ್ಕೂ ಹೆಚ್ಚು ಹಿಂದುತ್ವನಿಷ್ಠರು ಮಾನವ ಸರಪಳಿ ಮಾಡಿದ್ದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹಿಂದೂಗಳು ಫಲಕಗಳನ್ನು ಹಿಡಿದು ಹಿಂದೂಗಳ ರಕ್ಷಣೆಗೆ ಆಗ್ರಹಿಸಿದರು.

‘ಧರ್ಮ ರಕ್ಷಕ’ ಸಂಘಟನೆಯ ವತಿಯಿಂದ ಆಯೋಜಿಸಲಾಗಿದ್ದ ಈ ಪ್ರತಿಭಟನೆಯಲ್ಲಿ ‘ಧರ್ಮ ರಕ್ಷಕ’ ಸಂಘಟನೆ, ವಿಶ್ವ ಹಿಂದೂ ಪರಿಷತ್ ಮತ್ತಿತರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ಆಂದೋಲನದ ನಂತರ, ಹಿಂದುತ್ವನಿಷ್ಠ ಸಂಘಟನೆಗಳು ಸರಕಾರಿ ಅಧಿಕಾರಿಗಳ ಬಳಿ ಬಾಂಗ್ಲಾದೇಶಿ ಹಿಂದೂಗಳ ರಕ್ಷಣೆಗಾಗಿ ವಿವಿಧ ಬೇಡಿಕೆಗಳನ್ನು ಸಲ್ಲಿಸಿದರು.

‘ಧರ್ಮ ರಕ್ಷಕ’ ಸಂಸ್ಥೆಯ ಅಧ್ಯಕ್ಷ ಶ್ರೀ. ವಿನೋದ ಯಾದವ ಮಾತನಾಡಿ, ಇಂದು ಜಗತ್ತಿನಾದ್ಯಂತ ಹಿಂದೂಗಳನ್ನು ಗುರಿಯಾಗಿಸಲಾಗುತ್ತಿದೆ. ಇದೆಲ್ಲದರ ಹಿಂದಿನ ಉದ್ದೇಶ ಹಿಂದೂಗಳನ್ನು ನಾಶ ಮಾಡಿ ‘ಗಝವಾ-ಎ-ಹಿಂದ್’ (ಭಾರತದ ಇಸ್ಲಾಮೀಕರಣ) ಮಾಡುವುದಾಗಿದೆ ಎಂದು ಹೇಳಿದರು.