ಹೂಸ್ಟನ್‌(ಅಮೇರಿಕಾ): ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಪ್ರತಿಭಟನೆಗಳು

ಅಮೇರಿಕಾ ಸರಕಾರದ ಬಳಿ ಕ್ರಮ ಕೈಗೊಳ್ಳುವಂತೆ ಬೇಡಿಕೆ

ಹೂಸ್ಟನ್ (ಅಮೇರಿಕಾ) – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರವನ್ನು ವಿರೋಧಿಸಿ 300ಕ್ಕೂ ಹೆಚ್ಚು ಅಮೆರಿಕನ್, ಭಾರತೀಯ ಮತ್ತು ಬಾಂಗ್ಲಾದೇಶಿ ಹಿಂದೂಗಳು ಆಗಸ್ಟ್ 11 ರಂದು ಬೆಳಿಗ್ಗೆ ‘ಶುಗರ್ ಲ್ಯಾಂಡ್ ಸಿಟಿ ಹಾಲ್’ ನಲ್ಲಿ ಪ್ರತಿಭಟನೆ ನಡೆಸಿದರು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದ ಕುರಿತು ತ್ವರಿತ ಮತ್ತು ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳುವಂತೆ ಅಧ್ಯಕ್ಷ ಜೋ ಬಿಡನ್ ಅವರನ್ನು ಒತ್ತಾಯಿಸಿದರು. ಅಲ್ಲದೇ ಹಿಂದೂಗಳಿಗೆ ಸರ್ಕಾರದಿಂದ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿದರು.

1. ‘ಗ್ಲೋಬಲ್ ವಾಯ್ಸ್ ಫಾರ್ ಬಾಂಗ್ಲಾದೇಶ’ ಎಂಬ ಸಂಘಟನೆಯು ಅಮೇರಿಕಾದಲ್ಲಿ ‘ಸೇವ್ ದಿ ಹಿಂದೂಸ್ ಆಫ್ ಬಾಂಗ್ಲಾದೇಶ’ ಎಂಬ ಶೀರ್ಷಿಕೆಯಡಿ ಶಾಂತಿಯುತ ಪ್ರದರ್ಶನವನ್ನು ಆಯೋಜಿಸಿತ್ತು. ಪ್ರತಿಭಟನೆಯಲ್ಲಿ ಭಾಗವಹಿಸಿದ ಜನರು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಮತ್ತು ದೌರ್ಜನ್ಯವನ್ನು ನಿಲ್ಲಿಸುವಂತೆ ಒತ್ತಾಯಿಸುವ ಫಲಕಗಳ ಮೇಲೆ ಸಂದೇಶಗಳನ್ನು ಬರೆದರು.

2. ಈ ಪ್ರತಿಭಟನೆ ವೇಳೆ ‘ಹಿಂದೂಗಳ ಮಾರಣಹೋಮ ನಿಲ್ಲಿಸಿ’, ‘ಈಗ ಎದ್ದುನಿಲ್ಲಿ’, ‘ಹಿಂದೂಗಳು ಜಾಗೃತರಾಗಬೇಕು’, ‘ನಾವು ಓಡಿಹೋಗುವುದಿಲ್ಲ, ಅಡಗಿಕೊಳ್ಳುವುದಿಲ್ಲ’ ಎಂಬ ಘೋಷಣೆಗಳನ್ನು ನೀಡಲಾಯಿತು.

3. ಈ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮತ್ತು ‘ಹಿಂದೂ ಆಕ್ಷನ್’ ಪ್ರತಿನಿಧಿ ಅಚಲೇಶ್ ಅಮರ್, ಬಾಂಗ್ಲಾದೇಶದಲ್ಲಿರುವ ನಮ್ಮ ಸಹೋದರ ಸಹೋದರಿಯರೊಂದಿಗೆ ನಾವು ನಿಲ್ಲುತ್ತೇವೆ. ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕ್ರಮಕೈಗೊಳ್ಳುವಂತೆ ಮತ್ತು ಅಲ್ಲಿನ ಎಲ್ಲಾ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ನಾವು ಬಾಂಗ್ಲಾದೇಶ ಸರಕಾರವನ್ನು ಒತ್ತಾಯಿಸುತ್ತೇವೆ ಎಂದು ಹೇಳಿದರು.