ವಿಜಯ ಸೂರ್ಯ ದೇವಾಲಯವನ್ನು ಮಸೀದಿ ಎಂದು ಘೋಷಿಸಿದ ಪ್ರಕರಣ
ವಿದಿಶಾ (ಮಧ್ಯಪ್ರದೇಶ) – ಇಲ್ಲಿನ ವಿಜಯ ಸೂರ್ಯ ದೇವಸ್ಥಾನದಲ್ಲಿ ನಾಗರಪಂಚಮಿಯಂದು ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ ನಿರಾಕರಿಸಿದ ಜಿಲ್ಲಾಧಿಕಾರಿ ಬುದ್ದೇಶ್ ಕುಮಾರ್ ವೈದ್ಯ ಅವರನ್ನು ವರ್ಗಾವಣೆ ಮಾಡಲಾಗಿದೆ. ಈ ದೇವಾಲಯವು ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧೀನದಲ್ಲಿದೆ. ‘ಅವರು ಇದು ದೇವಸ್ಥಾನವಲ್ಲ ಬಿಜಮಂಡಲ ಮಸೀದಿ ಇದೆ’ ಎಂದು ಹೇಳಿದ ನಂತರ ಜಿಲ್ಲಾಧಿಕಾರಿಗಳು ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ನಿರಾಕರಿಸಿದ್ದರು.
ಸಂಪಾದಕರ ನಿಲುವು* ರಾಜ್ಯ ಸರಕಾರ ಕ್ರಮ ಕೈಗೊಂಡಿದೆ,ಇದು ಶ್ಲಾಘನೀಯವಾಗಿದೆ. ಈಗ ಕೇಂದ್ರ ಸರಕಾರ ಕ್ರಮ ಕೈಗೊಂಡು ದೇವಾಲಯವನ್ನು ಮಸೀದಿ ಎಂದು ಘೋಷಿಸಿದ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ! |