ಬಾಂಗ್ಲಾದೇಶದಲ್ಲಿನ ಹಿಂದೂ ವಿರೋಧಿ ಹಿಂಸಾಚಾರದ ಕುರಿತು ಅಮೆರಿಕಾದ ಸಂಸದ ರಾಜಾ ಕೃಷ್ಣಮೂರ್ತಿ ಇವರಿಂದ ಅಮೆರಿಕಾದ ವಿದೇಶಾಂಗ ಸಚಿವರಿಗೆ ಪತ್ರ
ವಾಷಿಂಗ್ಟನ್ (ಅಮೇರಿಕಾ) – ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ಹಿಂಸಾಚಾರದ ಕುರಿತು ಅಮೆರಿಕಾದ ಸಂಸದ ರಾಜಾ ಕೃಷ್ಣಮೂರ್ತಿ ಇವರು ಆತಂಕ ವ್ಯಕ್ತಪಡಿಸಿದ್ದಾರೆ. ಅವರು ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕನ್ ಇವರಿಗೆ, ಹಿಂದುಗಳ ಮೇಲಿನ ಹಿಂಸಾಚಾರ ತಡೆಯಲು ಮತ್ತು ಸಂಬಂಧಪಟ್ಟ ವ್ಯಕ್ತಿಗಳಿಗೆ ನ್ಯಾಯ ನೀಡಲು ಮಧ್ಯಂತರ ಸರಕಾರದ ಜೊತೆಗೆ ಸಂಪರ್ಕಿಸಲು ವಿನಂತಿಸಿದ್ದಾರೆ, ಈ ಪ್ರಕರಣದಲ್ಲಿ ಅವರು ಪತ್ರ ಕೂಡ ಬರೆದಿದ್ದಾರೆ.
ರಾಜಾ ಕೃಷ್ಣಮೂರ್ತಿ ಇವರು ಪತ್ರದಲ್ಲಿ, ಬಾಂಗ್ಲಾದೇಶದಲ್ಲಿ ಈಗ ಮಹಮ್ಮದ್ ಯುನೂಸ್ ನೇತೃತ್ವದ ಮಧ್ಯಂತರ ಸರಕಾರ ಸ್ಥಾಪನೆಯಾಗಿದೆ. ಇದು ಅತ್ಯಂತ ಮಹತ್ವದ್ದಾಗಿದೆ. ಹಿಂಸಾಚಾರ ತಡೆಯಲು ಮತ್ತು ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡುವುದಕ್ಕಾಗಿ ಅಮೇರಿಕಾದಿಂದ ಅಲ್ಲಿಯ ಸರಕಾರದೊಂದಿಗೆ ಸಂಪರ್ಕಿಸಬೇಕು. ವಿಷಾದದ ವಿಷಯವೆಂದರೆ, ಬಾಂಗ್ಲಾದೇಶದ ಸರಕಾರದ ವಿರುದ್ಧದ ಪ್ರತಿಭಟನೆಯು ಹಿಂದೂ ವಿರೋಧಿ ಹಿಂಸಾಚಾರದ ರೂಪ ತಾಳಿರುವುದು ಇದೇನು ಮೊದಲಲ್ಲಾ. ೨೦೨೧ ರಲ್ಲಿ ಹಿಂದೂ ವಿರೋಧಿ ಗಲಭೆಯಲ್ಲಿ ೯ ಜನರು ಬಲಿಯಾಗಿದ್ದರು. ನೂರಾರು ಮನೆಗಳು, ವ್ಯವಸಾಯ ಮತ್ತು ದೇವಸ್ಥಾನಗಳು ಧ್ವಂಸವಾಗಿದ್ದವು .೨೦೧೭ ರಲ್ಲಿ ೧೦೭ ಹಿಂದುಗಳು ಹತರಾಗಿದ್ದರು ಮತ್ತು ೩೭ ಜನರು ನಾಪತ್ತೆಯಾಗಿದ್ದರು. ಬಾಂಗ್ಲಾದೇಶದಲ್ಲಿನ ಹಿಂಸಾಚಾರ ಮತ್ತು ಅಸ್ಥಿರತೆ ಅಮೇರಿಕಾ ಮತ್ತು ಅದರ ಮಿತ್ರ ರಾಷ್ಟ್ರಕ್ಕೂ ಒಳ್ಳೆಯದಲ್ಲ. ನಾನು ನಿಮಗೆ ಮುಖ್ಯ ಸಲಹೆಗಾರ ಯುನೂಸ್ ಸರಕಾರದ ಜೊತೆಗೆ ನೇರವಾಗಿ ಮಾತನಾಡಲು ವಿನಂತಿಸುತ್ತೇನೆ ಎಂದು ಹೇಳಿದರು.